LifestyleNational

ಸ್ವಂತ ಅಕ್ಕನನ್ನೇ ಮದುವೆಯಾದ ಭೂಪ; ಕಾರಣ ಕೇಳಿದ್ರೆ ಥೂ ಅಂತೀರಿ!

ಮಹಾರಾಜಗಂಜ್; ಏನಾದರೂ ಲಾಭ ಆಗುತ್ತೆ ಅಂದ್ರೆ ಜನ ಏನು ಬೇಕಾದರೂ ಮಾಡ್ತಾರೆ.. ಇದಕ್ಕೊಂದು ಉದಾಹರಣೆಯಲ್ಲಿ ಉತ್ತರ ಪ್ರದೇಶದಲ್ಲಿ ನಡೆದಿರುವ ಅಕ್ಕ-ತಮ್ಮನ ಮದುವೆ.. ಇಲ್ಲಿ ಸ್ವಂತ ಅಕ್ಕ-ತಮ್ಮನೇ ಶಾಸ್ತ್ರೋಕ್ತವಾಗಿ ಎಲ್ಲರ ಮುಂದೆ ಮದುವೆಯಾಗಿದ್ದಾರೆ.. ವಿಚಿತ್ರ ಅಂದ್ರೆ ಮಹಿಳೆಗೆ ಈಗಾಗಲೇ ಮದುವೆಯಾಗಿದ್ದು, ಈಗ ತಮ್ಮನ ಜೊತೆ ಎರಡನೇ ಮದುವೆಯಾಗಿದ್ದಾಳೆ.. ಇದಕ್ಕೆ ಕಾರಣ ಸರ್ಕಾರದ ಸವಲತ್ತು ಸಿಗುತ್ತೆ ಅನ್ನೋದು..

ಇದನ್ನೂ ಓದಿ; ಬೆಂಗಳೂರಿನ ಶಾಲೆ ಬಳಿ ಜಿಲೆಟಿನ್‌ ಕಡ್ಡಿ, ಡಿಟೋನೇಟರ್‌ಗಳ ಪತ್ತೆ!

ಸರ್ಕಾರದ ಸವಲತ್ತಿಗಾಗಿ ತಮ್ಮನ ಜೊತೆ ಮದುವೆ;

ಉತ್ತರ ಪ್ರದೇಶದ ಸರ್ಕಾರದ ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆ ಆರಂಭಿಸಿದೆ.. ಈ ಯೋಜನೆಯಡಿ ವಿವಾಹವಾದವರಿಗೆ ಗೃಹೋಪಯೋಗಿ ವಸ್ತುಗಳು ಹಾಗೂ 35 ಸಾವಿರ ರೂಪಾಯಿ ನಗದು ನೀಡಲಾಗುತ್ತದೆ.. ಉತ್ತರ ಪ್ರದೇಶದ ಮಹಾರಾಜ್‌ ಗಂಜ್‌ ಜಿಲ್ಲೆಯಲ್ಲಿ ಸಾಮೂಹಿಕ ವಿವಾಹ ಆಯೋಜಿಸಲಾಗಿತ್ತು.. ಸರ್ಕಾರ ಸವಲತ್ತು ಪಡೆಯವುದಕ್ಕಾಗಿ ಅಕ್ಕ-ತಮ್ಮ ಪ್ಲ್ಯಾನ್‌ ಮಾಡಿದ್ದಾರೆ. ಮಾರ್ಚ್‌ 5ರಂದು ನಡೆದ ಸಾಮೂಹಿಕ ವಿವಾಹದಲ್ಲಿ ಅಕ್ಕ-ತಮ್ಮನೇ ಮದುವೆಯಾಗಿದ್ದಾರೆ.. ಇದು ಸವಲತ್ತು ಪಡೆಯೋದಕ್ಕಾಗಿ ಆಗಿರುವ ಮದುವೆ.

ಇದನ್ನೂ ಓದಿ; ಮಂಡ್ಯ ಬಳಿ ಬರೋಬ್ಬರಿ 1 ಕೋಟಿ ರೂಪಾಯಿ ವಶ!

ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಮಹಿಳೆ;

ಈ ಮಹಿಳೆ ವ್ಯಕ್ತಿಯೊಬ್ಬನ ಜೊತೆ ಒಂದು ವರ್ಷ ಹಿಂದೆಯಷ್ಟೇ ಮದುವೆಯಾಗಿದ್ದಳು.. ಆದ್ರೆ ಗಂಡ ಬೇರೆ ಸ್ಥಳದಲ್ಲಿ ಕೆಲಸದ ನಿಮಿತ್ತ ನೆಲೆಸಿದ್ದಾನೆ.. ಸರ್ಕಾರದ ಸಲವತ್ತು ಪಡೆಯಲು ಮಧ್ಯವರ್ತಿಗಳ ಸಹಾಯದಿಂದ ಅದೇ ಗಂಡನ ಜೊತೆ ಮತ್ತೊಮ್ಮೆ ವಿವಾಹಕ್ಕೆ ನೋಂದಣಿ ಮಾಡಿಸಲಾಗಿತ್ತು.. ಆದ್ರೆ ಮದುವೆ ದಿನ ಆಕೆಯ ಗಂಡ ಸ್ಥಳಕ್ಕೆ ಬಂದಿಲ್ಲ.  ಹೀಗಾಗಿ ಸ್ವಂತ ಸಹೋದರನನ್ನೇ ವರನ ಸ್ಥಾನದಲ್ಲಿ ಕೂರಿಸಲಾಗಿದೆ. ಸಂಪ್ರದಾಯದಂತೆ ಮದುವೆಯೂ ನಡೆದುಹೋಗಿದೆ.. ಸರ್ಕಾರದ ಸವಲತ್ತುಗಳನ್ನೂ ಪಡೆದುಕೊಂಡಿದ್ದಾರೆ.. ಆದ್ರೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಸಿಕ್ಕಿದ್ದು, ಕೂಡಲೇ ವಿತರಣೆ ಮಾಡಿದ ಸವಲತ್ತುಗಳನ್ನು ವಾಪಸ್‌ ಪಡೆದಿದ್ದಾರೆ.

ಇದನ್ನೂ ಓದಿ; ಕಾಂಗ್ರೆಸ್‌ ಎರಡನೇ ಪಟ್ಟಿಗಾಗಿ ಸರ್ಕಸ್‌; ದೆಹಲಿಗೆ ಹೊರಟ ಸಿಎಂ ಸಿದ್ದರಾಮಯ್ಯ

 

Share Post