ಇಬ್ಬರು ಮಕ್ಕಳನ್ನು ಸಾಯಿಸಿ ತಾಯಿಯೂ ಆತ್ಮಹತ್ಯೆ!
ವಿಜಯನಗರ; ಮಹಿಳೆಯೊಬ್ಬರು ತನ್ನ ಇಬ್ಬರ ಮಕ್ಕಳ ಕತ್ತು ಹಿಸುಕಿ ಸಾಯಿಸಿ, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.. ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ತಿಪ್ಪಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ..
ಶಿವಮ್ಮ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಅವರ ಮಕ್ಕಳಾದ ಮೂರು ವರ್ಷದ ದುರ್ಗಮ್ಮ, 10 ತಿಂಗಳ ಶಿಶು ಈಶ್ವರಿಯನ್ನು ತಾಯಿಯೇ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.. ಕೌಟುಂಬಿಕ ಕಹಲದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.. ಪತಿಯ ಮನೆಯವರೆಲ್ಲಾ ಪರಾರಿಯಾಗಿದ್ದಾರೆ.. ಸ್ಥಳಕ್ಕೆ ಹೂವಿನ ಹಡಗಲಿ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ..