30 ವರ್ಷ ವಯಸ್ಸಿನ ನಂತರ ಮದುವೆಯಾದರೆ ಇಷ್ಟೆಲ್ಲಾ ಆಗುತ್ತಾ..?
ಬೆಂಗಳೂರು; ಮೊದಲು ಚಿಕ್ಕ ವಯಸ್ಸಿಗೇ ಮದುವೆ ಮಾಡಿಬಿಡುತ್ತಿದ್ದರು.. ಇದಕ್ಕೆ ಕಾರಣ, ತಂದೆ-ತಾಯಿ ಚಿಕ್ಕ ವಯಸ್ಸಿನಲ್ಲಿರುವಾಗಲೇ ಮಕ್ಕಳು ದೊಡ್ಡವರಾಗಿರುತ್ತಾರೆ… ಅವರಿಗೆ ಮದುವೆ ಮಾಡೋದಕ್ಕೆ ಕಷ್ಟವಾಗೋದಿಲ್ಲ ಅಂತ.. ಆದ್ರೆ ಈಗ ಕಾಲ ಬದಲಾಗಿದೆ.. ಹೀಗಾಗಿ, ಈಗ 30 ವರ್ಷದ ನಂತರವೇ ಮದುವೆ ಮಾಡಿಕೊಳ್ಳುವವರು ಹೆಚ್ಚಿದ್ದಾರೆ.. ಹಾಗಂತ 30 ವರ್ಷದ ನಂತರ ಮದುವೆಯಾದರೆ ತಪ್ಪು ಎಂದೇನಲ್ಲ.. ಈಗಿನ ಕಾಲಕ್ಕೆ ಇದು ಒಳ್ಳೆಯದೇ.. 30 ವರ್ಷ ನಂತರ ಮದುವೆಯಾದರೆ ಹಲವಾರು ಅನುಕೂಲಗಳಿವೆಯಂತೆ.. ಈ ಬಗ್ಗೆ ತಿಳಿಯೋಣ ಬನ್ನಿ..
ಇದನ್ನೂ ಓದಿ; ಮಹಿಳೆಯರ ಹೆಸರಿನಲ್ಲಿ ಹೂಡಿಕೆ ಮಾಡೋದಕ್ಕೆ ಇದಕ್ಕಿಂತ ಉತ್ತಮ ಯೋಜನೆ ಇಲ್ಲ!
ಮನುಷ್ಯ 30 ವರ್ಷ ದಾಟುವಷ್ಟರಲ್ಲಿ ಬದುಕನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾನೆ.. ಹುಡುಗಾಟಿಕೆ ಹೋಗಿ ಪ್ರಬುದ್ಧತೆ ಬಂದಿರುತ್ತದೆ.. ಈ ಸಮಯದಲ್ಲಿ ಮದುವೆಯಾದವರಿಗೆ ಬದುಕಿನ ಬಗ್ಗೆ ಒಂದು ಸ್ಪಷ್ಟತೆ ಇರುತ್ತದೆ.. 30ರ ವಯಸ್ಸು ಬರುವಷ್ಟರಲ್ಲಿ ಅನೇಕ ರೀತಿಯ ಜನರನ್ನು ನೋಡಿರುತ್ತಾರೆ.. ಅವರ ವರ್ತನೆ, ವ್ಯವಹಾರಗಳನ್ನು ನೀವು ಹೆಣಗಾಡಿರುತ್ತೀರಿ.. ಅದರಿಂದ ನಿಮಗೆ ಜೀವನದ ಬಗ್ಗೆ ಸಾಕಷ್ಟು ಅನುಭವವಾಗಿರುತ್ತದೆ.. ಇದರಿಂದಾಗಿ 30 ವರ್ಷದ ನಂತರ ಮದುವೆಯಾಗದರೆ ಸಂಗಾತಿಯೊಂದಿಗೆ ಹೊಂದಿಕೊಂಡು ಜೀವನ ಸಾಗಿಸಲು ಸುಲಭವಾಗುತ್ತದೆ..
30 ವರ್ಷ ವಯಸ್ಸಿನ ನಂತರ ಮನುಷ್ಯನಲ್ಲಿ ತುಂಬಾನೇ ತಿಳಿವಳಿಕೆ ಬಂದಿರುತ್ತದೆ.. ಕಷ್ಟ ಸುಖಗಳನ್ನು ಕಂಡಿರುತ್ತಾರೆ.. ಎರಡನ್ನೂ ಸಮಾನವಾಗಿ ಸ್ವೀಕರಿಸುವ ಗುಣ ಅವರಲ್ಲಿ ಬೆಳೆದಿರುತ್ತದೆ.. ಇದರಿಂದಾಗಿ ಸಂಗಾತಿಯ ಜೊತೆ ಜಗಳವಾಗೋದಿಲ್ಲ.. ಏನೇ ವೈಮನಸ್ಯ ಬಂದರೂ ಚರ್ಚಿಸಿ ಬಗೆಹರಿಸಿಕೊಳ್ಳುತ್ತಾರೆ..
ಇದನ್ನೂ ಓದಿ; ಗೊತ್ತಿಲ್ಲದ ವಿಷದ ಹಣ್ಣು ತಿಂದು ಹಿರಿಯೂರಿನ 6 ಮಕ್ಕಳು ಅಸ್ವಸ್ಥ!
30ರ ನಂತರ ಮಕ್ಕಳು ಮಾಡಿಕೊಳ್ಳುವ ವಿಚಾರದಲ್ಲಿ ಮಾತ್ರ ಸ್ವಲ್ಪ ಸಮಸ್ಯೆಯಾಗುತ್ತದೆ.. 30 ವರ್ಷ ವಯಸ್ಸಿನ ನಂತರ, ಮಾನವನ ಜೈವಿಕ ಗಡಿಯಾರದಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತವೆ. ನೀವು ಮಾನಸಿಕವಾಗಿ ಸದೃಢರಾಗಿದ್ದರೆ ದೈಹಿಕ ಸಮಸ್ಯೆಗಳನ್ನೂ ಎದುರಿಸಬಹುದು. ಏಕೆಂದರೆ 30ರ ನಂತರ ಗರ್ಭಿಣಿಯಾಗುವಂತಹ ವಿಷಯಗಳಲ್ಲಿ ತೊಂದರೆಗಳು ಎದುರಾಗುತ್ತವೆ. ವಿಶೇಷವಾಗಿ ಆರೋಗ್ಯಕರ ಹೆರಿಗೆಯ ಸಾಧ್ಯತೆಗಳು ಕಡಿಮೆ. ಸಿಸೇರಿಯನ್ ಹೆರಿಗೆ ಸಾಧ್ಯ.
ಇದನ್ನೂ ಓದಿ; ಹಬ್ಬ-ಹರಿದಿನಗಳಲ್ಲಿ ಉಪವಾಸ ಮಾಡಿದರೆ ಕ್ಯಾನ್ಸರ್ ನಮ್ಮತ್ತ ಸುಳಿಯೋದಿಲ್ಲ..!
ಇನ್ನು 20-30 ವಯಸ್ಸಿನ ನಡುವೆ ಉದ್ಯೋಗಕ್ಕೆ ಸಂಬಂಧಿಸಿದಂತೆ ಭದ್ರತೆ ಇರೋದಿಲ್ಲ.. ಇನ್ನೂ ಸೆಟ್ಲ್ ಆಗುವುದರಲ್ಲೇ ಜೀವನ ಸಾಗಿರುತ್ತದೆ.. ಈ ವಯಸ್ಸಿನಲ್ಲಿ ಸಂಸಾರದ ಜಂಜಾಟ ಕೂಡಾ ಶುರುವಾದರೆ ಕಷ್ಟವಾಗುತ್ತದೆ.. ಮೊದಲೇ ಪ್ರಬುದ್ಧತೆ ಇರೋದಿಲ್ಲ.. ಇಂತಹ ಸಮಯದಲ್ಲಿ ವೈಮನಸ್ಯ ಉಂಟಾದರೆ ಸಂಸಾರದಲ್ಲಿ ಕೋಲಾಹಲ ಶುರುವಾಗುತ್ತದೆ.. ಆದ್ರೆ 30ರ ನಂತರ ಮದುವೆಯಾದರೆ ಸಂಸಾರ ಚೆನ್ನಾಗಿ ನಡೆಯುತ್ತದೆ..