ನವದೆಹಲಿ: ಇಲ್ಲಿನ ಘಾಜಿಪುರ ಹೂವಿನ ಮಾರುಕಟ್ಟೆ ಬಳಿ ದುಷ್ಕರ್ಮಿಗಳು ಸ್ಫೋಟಕಗಳನ್ನಿಟ್ಟಿದ್ದು, ಅವುಗಳನ್ನು ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಐಇಡಿ ಸ್ಫೋಟಕಗಳನ್ನು ಹೂವಿನ ಮಾರುಕಟ್ಟೆ ಬಳಿ ಇಡಲಾಗಿತ್ತು. ಈ ಮಾಹಿತಿ ಸಿಕ್ಕ ಕೂಡಲೇ ಸ್ಥಳಕ್ಕಾಗಮಿಸಿದ ದೆಹಲಿ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಫೋಟಕಗಳನ್ನು ವಶಪಡಿಸಿಕೊಂಡರು.