ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡನೆ; ಬಜೆಟ್ಗೆ ಸಕಲ ಸಿದ್ಧತೆ
ನವದೆಹಲಿ: 2022-23ನೇ ಸಾಲಿನ ಕೇಂದ್ರ ಬಜೆಟ್ನ್ನು ಫೆಬ್ರವರಿ 1 ರಂದು ಮಂಡಿಸಲು ತೀರ್ಮಾನಿಸಲಾಗಿದೆ. ಸಂಸತ್ತಿ ಬಜೆಟ್ ಅಧಿವೇಶನ ಇದೇ ತಿಂಗಳ 31ರಂದು ಪ್ರಾರಂಭವಾಗಲಿದೆ. ಫೆಬ್ರವರಿ 11ರವರೆಗೂ ಮೊದಲ ಹಂತದ ಬಜೆಟ್ ಅಧಿವೇಶನ ನಡೆಯಲಿದ್ದು, ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ.
ಅಧಿವೇಶನದ ಮೊದಲ ದಿನ ಅಂದರೆ ಜನವರಿ 31 ರಂದು ಜಂಟಿ ಸದನವನ್ನುದ್ದೇಶಿಸಿ ಎಂದಿನಂತೆ ರಾಷ್ಟ್ರಪತಿ ರಾಮನಾಥ ಕೋವಿಂದದ ಭಾಷಣ ಮಾಡಲಿದ್ದಾರೆ. ಅನಂತರ ಮಾರನೆ ದಿನಕ್ಕೆ ಕಲಾಪ ಮುಂದೂಡಲಾಗುತ್ತದೆ. ಫೆಬ್ರವರಿ 1 ರಂದು ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದು, ಅನಂತರ ಅದರ ಮೇಲಿನ ಚರ್ಚೆ ನಡೆಯಲಿದೆ. ಫೆಬ್ರವರಿ 11ಕ್ಕೆ ಅಧಿವೇಶನದ ಮೊದಲ ಭಾಗ ಮುಕ್ತಾಯವಾಗುತ್ತದೆ. ಅನಂತರ ಮಾರ್ಚ್ 14 ರಿಂದ ಏಪ್ರಿಲ್ 8 ರವರೆಗೆ ಎರಡನೇ ಹಂತದ ಅಧಿವೇಶನ ನಡೆಯಲಿದೆ ಎಂದು ತಿಳಿದುಬಂದಿದೆ.