ಸಿದ್ದರಾಮಯ್ಯಗೆ ವರದಾನವಾಗುತ್ತಾ ʻಚೆಕ್‌ಲಿಸ್ಟ್ʼ?
ಬೆಂಗಳೂರು; ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶದ ವಿರುದ್ಧ ಸಿಎಂ ಸಿದ್ದರಾಮಯ್ಯ ಇಂದು ಕಾನೂನು ಹೋರಾಟ ಶುರು ಮಾಡಲಿದ್ದಾರೆ.. ಮುಡಾ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದು, ಇದನ್ನು ಹೈಕೋರ್ಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಚಾಲೆಂಜ್ ಮಾಡುತ್ತಿದ್ದಾರೆ.. ಸಿಎಂ ಸಿದ್ದರಾಮಯ್ಯ ಪರವಾಗಿ ವಾದ ಮಂಡಿಸಲು ಘಟಾನುಘಟಿ ವಕೀಲರೇ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.. ಕಾಂಗ್ರೆಸ್ ನಾಯಕರು ಹಾಗೂ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಹಾಗೂ ಕಪಿಲ್ ಸಿಬಲ್ ಸಿಎಂ ಸಿದ್ದರಾಮಯ್ಯ ಪರ ಹೈಕೋರ್ಟ್‌ನಲ್ಲಿ ವಾದ ಮಂಡಿಸಲಿದ್ದಾರೆ.. ಇಂದು ರಿಟ್ ಅರ್ಜಿ ಹಾಕುವ ಕಾರಣದಿಂದ ಸಿಎಂ ಸಿದ್ದರಾಮಯ್ಯ ಅವರು ಮಂತ್ರಾಲಯ ಭೇಟಿ ಸೇರಿದಂತೆ ಇವತ್ತಿನ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿಕೊಂಡಿದ್ದಾರೆ..
ಇದನ್ನೂ ಓದಿ; ಬಸ್ಸು, ವ್ಯಾನ್ ಮುಖಾಮುಖಿ ಡಿಕ್ಕಿ; 10 ಮಂದಿ ದುರ್ಮರಣ, 27 ಮಂದಿ ಗಂಭೀರ!
ಚೆಕ್‌ಲಿಸ್ಟ್ ಪಾಲನೆಯಾಗಿಲ್ಲ ಎಂದು ವಾದ;
ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರ ಆದೇಶದಿಂದ ಸಂಕಷ್ಟ ಎದುರಾಗಿದೆ ನಿಜ.. ಆದ್ರೆ, ರಾಜ್ಯಪಾಲರ ಆದೇಶದ ವಿರುದ್ಧ ಪ್ರಬಲ ವಾದ ಮಂಡಿಸಲು ಸಿದ್ದರಾಮಯ್ಯ ಪರ ವಕೀಲರಿಗೆ ಪ್ರಬಲ ಅಸ್ತ್ರ ಸಿಕ್ಕಿದೆ.. ಜನಪ್ರತಿನಿಧಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ಕೇಂದ್ರ ಸರ್ಕಾರ ನೀಡಿರುವ ಚೆಕ್‌ಲಿಸ್ಟ್ ಪಾಲನೆ ಮಾಡಿಲ್ಲ. ಇದನ್ನೇ ಸಿದ್ದರಾಮಯ್ಯ ಪರ ವಕೀಲರು ಬಂಡವಾಳ ಮಾಡಿಕೊಂಡು ವಾದ ಮಂಡಿಸಲಿದ್ದಾರೆ.. 2021ರ ಸೆಪ್ಟಂಬರ್‌ನಲ್ಲಿ ಕೇಂದ್ರ ಸರ್ಕಾರ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವುದಕ್ಕಾಗಿ ಒಂದು ಚೆಕ್‌ಲಿಸ್ಟ್ ನೀಡಿದೆ.. ಅದರ ಪ್ರಕಾರ, ಜನಪ್ರತಿನಿಧಿಗಳ ವಿರುದ್ಧ ಡಿಜಿ-ಐಜಿಪಿ ಮಟ್ಟದ ಅಧಿಕಾರಿಗಳು ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಬೇಕು, ಅದಕ್ಕೆ ತನಿಖಾ ವರದಿ ಇರಬೇಕು. ಆದ್ರೆ ಸಿಎಂ ಸಿದ್ದರಾಮಯ್ಯ ವಿರುದ್ಧ ಯಾವ ತನಿಖಾ ವರದಿಯೂ ಇಲ್ಲ, ಅಧಿಕಾರಿಗಳೂ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿಲ್ಲ.. ಖಾಸಗಿ ವ್ಯಕ್ತಿಗಳ ಮನವಿ ಮೇರೆಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದ್ದು, ಇದು ಕಾನೂನು ಬಾಹಿರ ಅನ್ನೋದು ಸಿದ್ದರಾಮಯ್ಯ ಪರ ವಕೀಲರ ವಾದ. ಈ ಹಿಂದೆ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಏಳು ತೀರ್ಪುಗಳನ್ನು ಉಲ್ಲೇಖಿಸಿ ವಕೀಲರು ವಾದ ಮಾಡಲಿದ್ದು, ರಾಜ್ಯಪಾಲರೇ ತನಿಖಾಧಿಕಾರಿಯಂತೆ ವರ್ತಿಸಿದ್ದಾರೆ ಎಂದು ಆರೋಪಿಸಲಿದ್ದಾರೆ ಎಂದು ತಿಳಿದುಬಂದಿದೆ..
ಇದನ್ನೂ ಓದಿ; ಆ.23ಕ್ಕೆ ದೆಹಲಿಗೆ ತೆರಳಲಿರುವ ಸಿದ್ದರಾಮಯ್ಯ!; ಏನಿದು ಹೊಸ ಟ್ವಿಸ್ಟ್..?
ಸುಪ್ರೀಂಕೋರ್ಟ್‌ನಲ್ಲೇ ಅರ್ಜಿಗೆ ಚಿಂತನೆ ನಡೆದಿತ್ತು:
ಈ ಪ್ರಕರಣವನ್ನು ಸುಪ್ರೀಂಕೊರ್ಟ್‌ನಲ್ಲೇ ಪ್ರಶ್ನೆ ಮಾಡಲು ಚಿಂತನೆ ನಡೆದಿತ್ತು.. ಈ ಮೂಲಕ ರಾಷ್ಟ್ರದ ಗಮನವನ್ನು ಸೆಳೆಯೋ ಪ್ರಯತ್ನ ನಡೆದಿತ್ತು.. ಆದ್ರೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದರೂ ಪ್ರಕರಣ ಮತ್ತೆ ಹೈಕೋರ್ಟ್‌ಗೆ ವರ್ಗಾವಣೆಯಾಗುವ ಸಾಧ್ಯತೆ ಇತ್ತು.. ಕಾನೂನು ಪಂಡಿತರು ಈ ವಿಚಾರ ತಿಳಿಸಿದ್ದರಿಂದ ಸಿದ್ದರಾಮಯ್ಯ ಅವರು ಹೈಕೋರ್ಟ್‌ನಲ್ಲೇ ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ..