ಉಪೇಂದ್ರ ಮನೆಯ ಸಂಕ್ರಾಂತಿ ಸಂಭ್ರಮ
ಬೆಂಗಳೂರು : ಕನ್ನಡ ಚಿತ್ರರಂಗದಲ್ಲೇ ಹಿಂದೂಗಳ ಹಬ್ಬವನ್ನು ತುಂಬಾ ಅಚ್ಚುಕಟ್ಟಾಗಿ ಆಚರಿಸುವುದು ಎಂದರೆ ಅದು ಉಪೇಂದ್ರ ಅವರ ಕುಟುಂಬ. ತಮ್ಮ ಸ್ನೇಹಿತರು, ಮನೆಯವರು ಎಲ್ಲರೂ ಸೇರಿ ಆಚರಿಸುತ್ತಾರೆ.
ಪ್ರಿಯಾಂಕ ಉಪೇಂದ್ರ ಅವರೇ ಸಾಕಷ್ಟು ಮುತುವರ್ಜಿ ವಹಿಸಿ ಈ ಹಬ್ಬಗಳ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಪ್ರಿಯಾಂಕ ಅವರೇ ಸ್ವತಃ ಮಾರ್ಕೆಟ್‌ಗೆ ಹೋಗಿ ತಮಗೆ ಬೇಕಾದ ಸಾಮಗ್ರಿಗಳನ್ನು ತರ್ತಾರೆ.
ಗಣೇಶನ ಹಬ್ಬ, ಹೋಲಿ ಹಬ್ಬ, ಯುಗಾದಿ ಹಬ್ಬ, ದೀಪಾವಳಿ, ಸಂಕ್ರಾಂತಿ, ವರಮಹಾಲಕ್ಷ್ಮೀ ಹೀಗೆ ಎಲ್ಲಾ ಹಬ್ಬಗಳು ಕೂಡ ಇವರಿಗೆ ಸ್ಪೆಷಲ್.
ಈಗ ನಟ ಉಪೇಂದ್ರ ಅವರ ಮನೆಯಲ್ಲಿ ಸಂಕ್ರಾಂತಿ ಸಡಗರ ಜೋರಾಗಿದೆ. ಪ್ರಿಯಾಂಕ ಉಪೇಂದ್ರ ಅವರು ತಮ್ಮ ಇನ್ಸ್ಟಾ ಖಾತೆಯಲ್ಲಿ ವೀಡಿಯೋ ಮತ್ತು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಂಪ್ರದಾಯಿಕ ಉಡುಗೆಗಳನ್ನು ಧರಿಸಿ ಎಲ್ಲರೂ ಫುಲ್ ಮಿಂಚುತ್ತಿದ್ದಾರೆ.
ಕೋವಿಡ್ ಇರುವ ಕಾರಣ ಅವರು ಈ ಬಾರಿ ಯಾವ ಸ್ನೇಹಿತರನ್ನು ಹಬ್ಬಕ್ಕೆ ಆಹ್ವಾನಿಸಿಲ್ಲ ಎಂಬುದು ತಿಳಿದು ಬಂದಿದೆ.