Politics

ನಾನು ಫುಲ್‌ ಟೈಮ್‌ ಪೊಲಿಟಿಷಿಯನ್‌ ಅಲ್ಲ; NewsX ಜತೆ ಅಣ್ಣಾಮಲೈ ಮಾತು

ಚೆನ್ನೈ; ತಮಿಳುನಾಡಿನಲ್ಲಿ ದಶಕಗಳಿಂದ ಪ್ರಾದೇಶಿಕ ಪಕ್ಷಗಳೇ ಆಡಳಿತ ನಡೆಸುತ್ತಿವೆ.. ಇಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಅವಕಾಶವೇ ಇಲ್ಲ.. ಜನ ರಾಷ್ಟ್ರೀಯ ಪಕ್ಷಗಳನ್ನು ಒಪ್ಪುವ ಸ್ಥಿತಿಯಲ್ಲೇ ಇಲ್ಲ.. ಹೀಗಾಗಿ, ಇಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳು ನೆಪ ಮಾತ್ರ ಎಂಬಂತಿತ್ತು.. ಆದ್ರೆ ಯಾವಾಗ ಮಾಜಿ ಪೊಲೀಸ್‌ ಅಧಿಕಾರಿ ಅಣ್ಣಾಮಲೈ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಂದರೋ ಅಂದಿನಿಂದ ತಮಿಳುನಾಡಿನ ರಾಜಕೀಯ ಚಿತ್ರಣ ಬದಲಾಗುತ್ತಾ ಬರುತ್ತಿದೆ.. ತಮಿಳುನಾಡಿನಲ್ಲಿ ಬಿಜೆಪಿ ಪರವಾದ ಅಲೆ ಶುರುವಾಗಿದೆ.. ರ್ಯಾಲಿ, ಸಮಾವೇಶಗಳಿಗೆ ಲಕ್ಷ ಲಕ್ಷ ಜನ ಬರುತ್ತಿದ್ದಾರೆ.. ಇದಕ್ಕೆಲ್ಲಾ ಕಾರಣ ಅಣ್ಣಾಮಲೈ ಎಂಬ ಅರೆಕಾಲಿಕ ರಾಜಕೀಯನ ನಾಯಕನ ಸಂಘಟನಾ ಚತುರತೆ..

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ತಮಿಳುನಾಡಿನಲ್ಲಿ ರ್ಯಾಲಿ ನಡೆಸಿದರು.. ಈ ವೇಳೆ ಹಿಂದೆಂದೂ ಸಿಗದಷ್ಟು ಜನಬೆಂಬಲ ಮೋದಿಗೆ ಸಿಕ್ಕಿತ್ತು.. ಅಣ್ಣಾಮಲೈ ಕೂಡಾ ಹೋದಲ್ಲೆಲ್ಲಾ ಜನ ಸಾಗರವೇ ಸೇರುತ್ತಿದೆ.. ಹೀಗಾಗಿ, ಅಣ್ಣಾಮಲೈ ದೇಶದ ಗಮನ ಸೆಳೆಯುತ್ತಿದ್ದಾರೆ.. ಎಲ್ಲರೂ ಕೂಡಾ ತಮಿಳುನಾಡು ರಾಜಕೀಯದತ್ತ ಗಮನ ಹರಿಸಿದ್ದಾರೆ.. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಒಳ್ಳೆಯ ವಾತಾವರಣ ನಿರ್ಮಾಣ ಆಗಬಹುದೆ ಎಂಬುದರ ಬಗ್ಗೆ ಕಾತರದಿಂದ ಕಾಯುತ್ತಿದ್ದಾರೆ.. ಈ ಹಿನ್ನೆಲೆಯಲ್ಲಿ ಅಣ್ಣಾಮಲೈ ವಿಶೇಷ ಎನಿಸುತ್ತಾರೆ.. ಹೀಗಾಗಿ NEWS X ಅಣ್ಣಾ ಮಲೈ ಅವರನ್ನು ವಿಶೇಷ ಸಂದರ್ಶನ ನಡೆಸಿದೆ..

ನಾನು ಫುಲ್‌ ಟೈಮ್‌ ರಾಜಕಾರಣಿಯಲ್ಲ;

ನ್ಯೂಸ್‌ ಎಕ್ಸ್‌ ಜೊತೆ  ಮಾತನಾಡಿದ ಅಣ್ಣಾಮಲೈ ಅವರು ನಾನು ಫುಲ್‌ ಟೈಮ್‌ ರಾಜಕಾರಣಿಯಲ್ಲ. ಜೊತೆಗೆ ನಾನು ಜನಪ್ರಿಯತೆಗಾಗಿ ಕೆಲಸ ಮಾಡುತ್ತಿಲ್ಲ.. ಇದು ಜನರಿಗೆ ಗೊತ್ತಿದೆ.. ಹೀಗಾಗಿ ಎಲ್ಲರೂ ಕೂಡಾ ನನ್ನನ್ನು ಇಷ್ಟಪಡುತ್ತಿದ್ದಾರೆ.. ಆದ್ರೆ ನಾನು ನಾಯಕ ಅಲ್ಲವೇ ಅಲ್ಲ.. ನಾನು ನಾರ್ಮಲ್‌ ಪರ್ಸನ್‌.. ನಾನು ಪಾರ್ಟ್‌ ಟೈಮ್‌ ರಾಜಕಾರಣಿ ಅಷ್ಟೇ.. ನಾನು ಫುಲ್‌ ಟೈಮ್‌ ರೈತ, ಸರ್ಕಾರೇತರ ಸಂಸ್ಥೆ ನಡೆಸುತ್ತೇನೆ. ಆ ಮೂಲಕ ಜನಸೇವೆ ಮಾಡುತ್ತಿದ್ದೇನೆ ಎಂದು ಅಣ್ಣಾಮಲೈ ಹೇಳಿದ್ದಾರೆ..

ಕೃಷಿಯ ಜೊತೆ ಜನಸೇವೆ ಮಾಡುತ್ತಿದ್ದೇನೆ;

ನಾನು ಕರ್ನಾಟಕದಲ್ಲಿ ಒಂಬತ್ತು ವರ್ಷಗಳ ಕಾಲ ಪೊಲೀಸ್‌ ಅಧಿಕಾರಿಯಾಗಿ ಕೆಲಸ ಮಾಡಿದ್ದೇನೆ… ಅದು ನನಗೆ ತೃಪ್ತಿ ತಂದಿದೆ.. ಈ ಕೆಲಸದಲ್ಲಿ ನಗೆ ತೃಪ್ತಿ ಇತ್ತು.. ಜೊತೆಗೆ ಎಂಜಾಯ್‌ ಮಾಡಿದ್ದೇನೆ… ಆದ್ರೆ ನನ್ನ ಜನಕ್ಕೆ, ನನ್ನ ಊರಿನ ಜನಕ್ಕೆ ಏನಾದರೂ ಮಾಡಬೇಕೆಂಬ ತುಡಿತ ನನ್ನಲ್ಲಿತ್ತು.. ಜೊತೆಗೆ ಕೃಷಿ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು.. ಸಾಮಾನ್ಯ ಜನರ ಜೊತೆ ಒಡನಾಡಬೇಕೆಂಬ ಆಸೆ ಇತ್ತು.. ಹೀಗಾಗಿ ನಾನು ಪೊಲೀಸ್‌ ಕೆಲಸ ಬಿಟ್ಟು ಕೃಷಿ ಕೆಲಸಕ್ಕೆ ಮರಳಿದೆ.. ಇದರ ಜೊತೆಗೆ ನಾನೊಂದು ಫೌಂಡೇಶನ್‌ ಮಾಡಿಕೊಂಡು ಕೃಷಿಕರಿಗೆ ನೆರವಾಗುತ್ತಿದ್ದೇನೆ ಎಂದು ಅಣ್ಣಾಮಲೈ ಹೇಳಿದರು..

ರಾಜಕೀಯಕ್ಕೆ ಬರಬೇಕೆಂದು ಪಟ್ಟು;

ಸ್ಥಳೀಯರು ಹಾಗೂ ನನ್ನ ಹಿತೈಷಿಗಳು ನೀವು ಕೃಷಿ ಮಾಡಿಕೊಂಡು ರಾಜಕೀಯಕ್ಕೆ ಬರಬಹುದು.. ರಾಜಕೀಯಕ್ಕೆ ಬಂದರೆ ಸಮಾಜದಲ್ಲಿ ಇನ್ನಷ್ಟು ಬದಲಾವಣೆ ಸಾಧ್ಯ ಎಂದು ಹೇಳಿದರು.. ಈ ಕಾರಣಕ್ಕಾಗಿ ನಾನು ರಾಜಕೀಯಕ್ಕೆ ಬಂದೆ.. ಮೋದಿ ಅವರ ಚಿಂತನೆಗಳು, ಅವರ ಕಾರ್ಯವೈಖರಿಗೆ ಮನಸೋತು ನಾನು ಬಿಜೆಪಿ ಸೇರಿದ್ದೇನೆ.. ನಾನು ಹೆಚ್ಚಾಗಿ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತೇನೆ.. ಅದೇ ನನಗೆ ಇಷ್ಟ.. ಚುನಾವಣೆ ಸಮಯದಲ್ಲಿ ಮಾತ್ರ ನಾನು ರಾಜಕೀಯದಲ್ಲಿ ಕಾಣಿಸಿಕೊಳ್ಳುತ್ತೇನೆ.. ನಾನು ಪಾರ್ಟ್‌ ಟೈಮ್‌ ರಾಜಕಾರಣಿ ಎಂದು ಅಣ್ಣಾ ಮಲೈ ನ್ಯೂಸ್‌ ಎಕ್ಸ್‌ ಜೊತೆ ಹೇಳಿದ್ದಾರೆ..

ರಾಜ್ಯಾಧ್ಯಕ್ಷನಾಗಿದ್ದರಿಂದ ಫುಲ್‌ ಟೈಮ್‌ ತೊಡಗಿಸಿಕೊಂಡಿದ್ದೇನೆ;

ನಾನೀಗ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷನಾಗಿದ್ದೇನೆ.. ಹೀಗಾಗಿ ಅನಿವಾರ್ಯವಾಗಿ ಚುನಾವಣೆ ಸಮಯದಲ್ಲಿ ಫುಲ್‌ ತೊಡಗಿಸಿಕೊಂಡಿದ್ದೇನೆ.. ಬಿಜೆಪಿ ನಾಯಕರು ನನ್ನನ್ನು ನಂಬಿ ದೊಡ್ಡ ಹುದ್ದೆ ನೀಡಿದ್ದಾರೆ.. ಹೀಗಾಗಿ ನಾನು ಹಗಳಿರುಳೂ ಶ್ರಮಿಸುತ್ತಿದ್ದೇನೆ.. ನಾನು ಎಲ್ಲಾ ರಾಜಕಾರಣಿಗಳಂತೆ ಅಲ್ಲ.. ನಾನು ಒಬ್ಬ ಸಾಮಾನ್ಯ ರಾಜಕಾರಣಿ.. ಎಲ್ಲರಂತೆ ನಾನು ಲೀಡರ್‌ ಎಂದು ದರ್ಪ ತೋರಿಸೋದಿಲ್ಲ.. ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುತ್ತೇನೆ.. ಇದಕ್ಕೆ ಜನರು ಹೆಚ್ಚು ನನ್ನನ್ನು ಇಷ್ಟಪಡುತ್ತಿದ್ದಾರೆ ಎಂದು ಅಣ್ಣಾಮಲೈ ಹೇಳಿದ್ದಾರೆ..

 

 

Share Post