LifestyleNational

ಮಳೆಗಾಲದಲ್ಲಿ ಹಾವುಗಳ ಕಾಟ ಹೆಚಾಗಿದೆಯಾ..?; ಹಾಗಾದರೆ ಈ ಸಲಹೆಗಳನ್ನು ಪಾಲಿಸಿ..

ಮಳೆಗಾಲ ಬಂತೆಂದರೆ ಸಾಕು ಹಾವುಗಳ ಕಾಟ ಹೆಚ್ಚಾಗುತ್ತದೆ.. ಮನೆಗಳಿಗೆಲ್ಲಾ ಹಾವುಗಳು ನುಗ್ಗುತ್ತವೆ.. ಸ್ವಲ್ಪ ಯಾಮಾರಿದರೆ ಅವುಗಳ ಕಡಿತದಿಂದ ಸಾವು ನೋವುಗಳು ಕೂಡಾ ಸಂಭವಿಸುತ್ತವೆ.. ಮಳೆಗಾಲದಲ್ಲಿ ಬೆಚ್ಚಗಿನ ಸ್ಥಳಗಳನ್ನು ಹುಡುಕಿಕೊಂಡು ಹಾವುಗಳ ಮನೆಗಳ ಬಳಿ ಬರುತ್ತವೆ.. ಹೀಗಾಗಿ ಮಳೆಗಾಲದಲ್ಲಿ ವಿಷಕಾರಿ ಹಾವು, ಕೀಟಗಳ ಕಾಟ ವಿಪರೀತವಾಗುತ್ತವೆ.. ಈ ಮಳೆಗಾಲದಲ್ಲಿ ಮನೆಗಳಿಗೆ, ಮನೆಯ ಹಿತ್ತಲ ಬಳಿ ಹಾವುಗಳು ಬರುತ್ತವೆ.. ಹೀಗಾಗಿ ಮಳೆಗಾಲದಲ್ಲಿ ಹಾವುಗಳ ಕಾಟ ತಪ್ಪಿಸಲು ಒಂದಷ್ಟು ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕಾಗುತ್ತದೆ..

೧. ಮನೆಗಳ ಬಳಿ ಹಾವುಗಳು ಬರದಂತೆ ಮಾಡಬೇಕಾದರೆ ಬೆಳ್ಳುಳ್ಳಿಯನ್ನು ಜಜ್ಜಿ ಮನೆಯ ಸುತ್ತಲೂ ಹಾಕಬೇಕು.. ಅದರ ವಾಸನೆಗೆ ಹಾವುಗಳು ಅತ್ತ ಸುಳಿಯುವುದಿಲ್ಲ

೨. ಬೆಳ್ಳುಳ್ಳಿಯನ್ನು ಸಾಸಿವೆ ಎಣ್ಣೆಯಲ್ಲಿ ಅರೆದು ಮನೆಯ ಸುತ್ತಲೂ ಸಿಂಪಡಿಸಿದರೆ ಇನ್ನೂ ಉತ್ತಮ.. ಇದರಿಂದ ಹಾವುಗಳು ದೂರ ಹೋಗುತ್ತವೆ..

೩. ಮನೆಗಳಲ್ಲಿ ಹಾಸಿಗೆಯ ಮೇಲೆ ಫಿನಾಯಿಲ್‌ ಅನ್ನು ಸಿಂಪಡಿಸಿದರೆ, ಅದರ ಗಾಢವಾದ ವಾಸನೆಯು ಹಾವುಗಳನ್ನು ಓಡಿಸುತ್ತದೆ

೪. ವಿನೆಗರ್, ಸೀಮೆ ಎಣ್ಣೆಯನ್ನು ಹಾವುಗಳನ್ನು ಮನೆಯಿಂದ ಹೊರಗಿಡಲು ಬಳಸಬಹುದು. ಇದರ ಗಾಢವಾದ ಪರಿಮಳ ಹಾವುಗಳನ್ನು ಹಿಮ್ಮೆಟ್ಟಿಸುತ್ತದೆ

೫. ಹಾವುಗಳನ್ನು ದೂರವಿಡಲು, ನಿಂಬೆ ರಸ ಅಥವಾ ನಿಂಬೆ ಪುಡಿಯಲ್ಲಿ ಕೆಂಪು ಮೆಣಸನ್ನು ಬೆರೆಸಿ ಮನೆಯ ಸುತ್ತಲೂ ಸಿಂಪಡಿಸಬಹುದು

೬. ಕೊಳೆತ ಈರುಳ್ಳಿಯನ್ನು ಮನೆಯ ಸುತ್ತಲೂ ಹರಡುವುದರಿಂದ ವಿಷಕಾರಿ ಹಾವುಗಳು ಬರದಂತೆ ತಡೆಯಬಹುದು

೭. ಲವಂಗ ಮತ್ತು ದಾಲ್ಚಿನ್ನಿ ಎಣ್ಣೆಯನ್ನು ಮನೆಯ ಸುತ್ತಲೂ ಸಿಂಪಡಿಸುವುದು ಹಾವುಗಳನ್ನು ದೂರವಿರಿಸಬಹುದು

Share Post