CrimeInternational

600 ಅಡಿ ಕಂದಕಕ್ಕೆ ಉರುಳಿದ ಬಸ್‌; 26 ಮಂದಿ ದುರ್ಮರಣ!

ಪೆರು; ಬಸ್ಸೊಂದು 600 ಅಡಿ ಕಂದಕಕ್ಕೆ ಉರುಳಿಬಿದ್ದಿದ್ದು, ದುರಂತದಲ್ಲಿ 26 ಮಂದಿ ಸಾವನ್ನಪ್ಪಿದ್ದಾರೆ.. ಪೆರುವಿನ ಆಂಡಿಸ್​​ ಪರ್ವತ ಶ್ರೇಣಿಯಲ್ಲಿ ಈ ಭೀಕರ ದುರಂತ ಸಂಭವಿಸಿದೆ.. ಘಟನೆಯಲ್ಲಿ 14 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ..

ಇದನ್ನೂ ಓದಿ;ಪಂಚೆ ಧರಿಸಿ ಬಂದ ರೈತನಿಗೆ ನೋ ಎಂಟ್ರಿ!; ಜಿಟಿ ಮಾಲ್‌ ಸಿಬ್ಬಂದಿ ದರ್ಪ!

ಬಸ್‌ನಲ್ಲಿ 40 ಮಂದಿ ಪ್ರಯಾಣ ಮಾಡುತ್ತಿದ್ದರು. ಈ ಬಸ್‌ ಆಂಡಿಸ್‌ ಪರ್ವತ ಶ್ರೇಣಿಯ ಅಯಾಕುಚೋ ಎಂಬಲ್ಲಿಗೆ ಬಂದಾಗ ಚಾಲಕನ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಉರುಳಿಬಿದ್ದಿದೆ.. ಇದು ಲಿಮಾದಿಂದ ಅಯಾಕುಚೋಗೆ ತೆರಳುತ್ತಿತ್ತು.. ಇನ್ನು ಸ್ವಲ್ಪ ಸಮಯ ಏನೂ ಆಗದೇ ಇದ್ದಿದ್ದರೆ ಎಲ್ಲರೂ ಸುರಕ್ಷಿತವಾಗಿ ಸೇರೋ ಜಾಗಕ್ಕೆ ಸೇರುತ್ತಿದ್ದರು.. ಆದ್ರೆ ಡೆಸ್ಟಿನೇಷನ್‌ ಹತ್ತಿರವಿದ್ದಾಗಲೇ ಈ ಘಟನೆ ನಡೆದಿದೆ..

ಇದನ್ನೂ ಓದಿ; 7ನೇ ವೇತನ ಆಯೋಗ ಶಿಫಾರಸು ಜಾರಿ; ಕಲಾಪದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ

Share Post