BengaluruPolitics

ಬೆಂಗಳೂರು ನಗರಕ್ಕೆ ಬಂಪರ್‌; 45 ಸಾವಿರ ಕೋಟಿ ಅನುದಾನ

ಬೆಂಗಳೂರು; ಈ ಬಾರಿಯ ಬಜೆಟ್‌ನಲ್ಲಿ ಬೆಂಗಳೂರು ನಗರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಬೆಂಗಳೂರಿಗೆ ಸರ್ವತೋಮುಖ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇದಕ್ಕೆ 45 ಸಾವಿರ ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ. ಇದಲ್ಲದೆ ಮೆಟ್ರೋ, ಉಪನಗರ ರೈಲು ಯೋಜನೆ ಸೇರಿದಂತೆ ಹಲವು ಯೋಜನೆಗಳಿಗೆ ಅನುದಾನ ನೀಡಲಾಗಿದೆ.

ಬೆಂಗಳೂರಿನ ಅಭಿವೃದ್ಧಿಗೆ ಅನುದಾನ

  • ಬೆಂಗಳೂರು ಅಭಿವೃದ್ಧಿಗೆ ಒಟ್ಟು 45 ಸಾವಿರ ಕೋಟಿ ರೂಪಾಯಿ ಅನುದಾನ
  • ವೈಟ್‌ ಟಾಪಿಂಗ್ , ರಸ್ತೆ ಅಭಿವೃದ್ದಿ ನಗರೋತ್ಥನ, ರಸ್ತೆ, ತಾಜ್ಯ ನಿರ್ವಾಹಣೆ, ರಾಜಕಾಲುವೆ ಒತ್ತುವರಿ ತೆರವು ಮತ್ತು ದುರಸ್ತಿಗೆ 30 ಸಾವಿರ ಕೋಟಿ ರೂಪಾಯಿ
  •  ಮೆಟ್ರೋ , ಉಪನಗರ ರೈಲು ಯೋಜನೆ, ಬ್ರ್ಯಾಂಡ್ ಬೆಂಗಳೂರು ಯೋಜನೆಗೆ ಆದ್ಯತೆ ನೀಡಲು ತೀರ್ಮಾನ ಮಾಡಲಾಗಿದೆ
  •  ಬೆಂಗಳೂರು ತಾಜ್ಯ ನಿರ್ವಹಣೆಗೆ  1,411 ಕೋಟಿ ರೂಪಾಯಿ ಮೀಸಲಿಡಲಾಗಿದೆ
  • ಮೇಟ್ರೋ 3ನೇ ಹಂತದ ಯೋಜನೆಗೆ 16, 328 ಕೋಟಿ ರೂಪಾಯಿ ಯೋಜನಾ ವೆಚ್ಚ ನಿಗದಿ ಮಾಡಲಾಗಿದೆ
  • 45 ಕಿ.ಮೀ ಉದ್ದದ ವಿಸ್ತೃತ ಮೆಟ್ರೋ ಯೋಜನೆಗೆ ಕೇಂದ್ರಕ್ಕೆ ವರದಿ ಸಲ್ಲಿಕೆ
  •  ಬೈಯಪ್ಪನಹಳ್ಳಿಯಲ್ಲಿ ಮೇಲು ಸೇತುವೆ ನಿರ್ಮಾಣಗೆ 263 ಕೋಟಿ ರೂ.
  •  ಬೆಂಗಳೂರು ಸಂಚಾರ ದಟ್ಟಣೆ ನಿರ್ವಾಹಣೆಗೆ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಯೋಜನೆಗೆ ಪ್ಲ್ಯಾನ್
  • ಮಳೆ ಅನಾಹುತ ತಪ್ಪಿಸಲು ರಾಜಕಾಲುವೆ ಒತ್ತುವರಿ ತೆರವು
Share Post