BengaluruCrimePolitics

ಬಿಜೆಪಿ ನಾಯಕ ಈಶ್ವರಪ್ಪ ಹತ್ಯೆಗೆ ನಿಷೇಧಿತ ಪಿಎಫ್‌ಐ ಸಂಚು

ಬೆಂಗಳೂರು; ಬಿಜೆಪಿ ನಾಯಕ ಈಶ್ವರಪ್ಪ ಹತ್ಯೆಗೆ ನಿಷೇಧಿತ ಪಿಎಫ್‌ಐ ಸಂಘಟನೆ ಸಂಚು ರೂಪಿಸಿತ್ತೆಂದು ತಿಳಿದುಬಂದಿದೆ. ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ಪಿಎಫ್‌ಐನಲ್ಲಿ ಗುರುತಿಸಿಕೊಂಡಿದ್ದ ವ್ಯಕ್ತಿಯನ್ನು ಪ್ರಕರಣವೊಂದರಲ್ಲಿ ವಿವಾರಣೆ ನಡೆಸಿದಾಗಿ ಈ ವಿಚಾರವೂ ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ. ಚುನಾವಣೆ ಸಂದರ್ಭದಲ್ಲಿ ಈ ಸುದ್ದಿ ಬಂದಿರುವುದು ಆಘಾತಕ್ಕೆ ಕಾರಣವಾಗಿದೆ.

ಜಯೇಶ್‌ ಪೂಜಾರಿ ಅಲಿಯಾಸ್‌ ಶಾಹಿರ್‌ ಶೇಖ್‌ ಆರೋಪಿ. ಈತ ಜೈಲಿನಲ್ಲಿದ್ದುಕೊಂಡೇ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಕಚೇರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದ. ಈ ಹಿನ್ನೆಲೆಯಲ್ಲಿ ನಾಗಪುರ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದರು. ಈ ವೇಳೆ ಆತ ಈಶ್ವರಪ್ಪ ಅವರ ಕೊಲೆಗೆ ಸಂಚು ರೂಪಿಸಿದ್ದಾಗಿಯೂ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಆರೋಪಿ ಪಿಎಫ್‌ಐನಲ್ಲಿ ಗುರುತಿಸಿಕೊಂಡಿದ್ದ, ಜೊತೆಗೆ ದರೋಡೆಕೋರನೂ ಆಗಿದ್ದ ಎಂದು ತಿಳಿದುಬಂದಿದೆ.

Share Post