ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿಯ ಬರ್ಬರ ಹತ್ಯೆ; ಅಮಾವಾಸ್ಯೆ ದಿನ ನರಬಲಿ ಶಂಕೆ!
ಯಾದಗಿರಿ; ಇಂದು ಅಮಾವಾಸ್ಯೆ, ಸೂರ್ಯಗ್ರಹಣ ಬೇರೆ.. ಇಂತಹ ದಿನಗಳಂದು ಮಾಟಮಂತ್ರಗಳು ಜೋರಾಗಿ ನಡೆಯುತ್ತವೆ.. ವಿಜ್ಞಾನ ಎಷ್ಟೇ ಮುಂದುವರೆದರೂ ಜನ ಇಂತಹ ಮೂಢನಂಬಿಕೆಗಳಿಗೆ ಈಗಲೂ ಕಟ್ಟುಬಿದ್ದಿದ್ದಾರೆ.. ಇಂತಹ ಮಾಟ-ಮಂತ್ರಕ್ಕಾಗಿ ವ್ಯಕ್ತಿಯೊಬ್ಬರನ್ನು ಬಲಿ ಕೊಟ್ಟಿರುವ ಅನುಮಾನ ವ್ಯಕ್ತವಾಗಿದೆ..
ಇದನ್ನೂ ಓದಿ; ರಸ್ತೆಯಲ್ಲೇ ಹೊತ್ತಿ ಉರಿದ ಕಾರು; ಕೊಡಗಿನಲ್ಲಿ ಪಲ್ಟಿ ಹೊಡೆದ ಬಸ್!
ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿಯ ಕೊಲೆ;
ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಏವೂರು ಗ್ರಾಮದಲ್ಲಿ ಇಂದು ಬೆಳಗ್ಗೆ ಬಹಿರ್ದೆಸೆಗೆ ತೆರಳಿದ್ದ ನಲವತ್ತು ವರ್ಷದ ಬಂದೇನವಾಜ್ ಎಂಬ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.. ಆತನ ಯಾರ ಮೇಲೂ ದ್ವೇಷ ಇರಲಿಲ್ಲ.. ಇತ್ತೀಚೆಗೆ ಯಾವ ಜಗಳವೂ ಆಗಿರಲಿಲ್ಲ.. ಆದರೂ ಆತನನ್ನು ಕೊಲೆ ಮಾಡಲಾಗಿದೆ.. ಹೀಗಾಗಿ ಇದು ನರಬಲಿ ಕೊಡಲೆಂದೇ ಮಾಡಿರುವ ಕೊಲೆ ಎಂಬ ಅನುಮಾನ ವ್ಯಕ್ತವಾಗಿದೆ..
ಇದನ್ನೂ ಓದಿ; ಬೆಳಗ್ಗೆ ಎದ್ದು ಈ ನೀರು ಕುಡಿದರೆ ನಿತ್ಯ ಯೌವನ ನಿಮ್ಮದಾಗುತ್ತೆ..!
ಮಾರಕಾಸ್ತ್ರಗಳನ್ನು ಬಳಸಿ ಬರ್ಬರ ಹತ್ಯೆ;
ನಾಳೆ ಯುಗಾದಿ ಹಬ್ಬವಿದೆ.. ಇಂದು ಯುಗಾದಿ ಅಮಾವಾಸ್ಯೆ.. ಅಂದರೆ ವರ್ಷದ ಕೊನೆಯ ಅಮಾವಾಸ್ಯೆ.. ಜೊತೆ ಇಂದು ಸೂರ್ಯಗ್ರಹಣ ಇದೆ.. ಇಂತಹ ದಿನಗಳಲ್ಲಿ ಮಂತ್ರವಾದಿಗಳು ಮಾಟ-ಮಂತ್ರಗಳನ್ನು ಮಾಡುತ್ತಾರೆ.. ಇಂದು ಇಂದು ನಸುಕಿನ ಜಾವದಲ್ಲಿ ಗ್ರಾಮದ ಬಂದೇನವಾಜ್ ಅವರು ಗ್ರಾಮದ ಹೊರವಲಯದಲ್ಲಿ ಬಹಿರ್ದೆಸೆಗೆ ತೆರಳಿದ್ದರು.. ಈ ವೇಳೆ ದುಷ್ಕರ್ಮಿಗಳ ದಾಳಿ ನಡೆಸಿ ಕೊಲೆ ಮಾಡಿದ್ದಾರೆ.. ಇದು ನರ ಬಲಿ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ..
ಏವೂರು ಗ್ರಾಮಸ್ಥರು ಇದರಿಂದ ಬೆಚ್ಚಿಬಿದ್ದಿದ್ದಾರೆ.. ಸ್ಥಳಕ್ಕೆ ಎಸ್ಪಿ ಜಿ. ಸಂಗೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೆಂಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ; ದೇವರಿಗೆ ಕೈಮುಗಿಯುವ ನಾಟಕ; ದೇವರ ಮಾಂಗಲ್ಯ ಸರ ಕದ್ದ ಕಳ್ಳ!