ಧಾರವಾಡದಿಂದ ಅಖಾಡಕ್ಕೆ ಇಳಿಯಲು ದಿಂಗಾಲೇಶ್ವರ ಶ್ರೀ ತೀರ್ಮಾನ; ಪ್ರಹ್ಲಾದ್ ಜೋಶಿಗೆ ಭೀತಿ
ಧಾರವಾಡ; ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ನಾಗಾಲೋಟಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಇದೆ.. ಪ್ರಹ್ಲಾದ್ ಜೋಷಿಯವರ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆಗೆ ತೀರ್ಮಾನ ಮಾಡಿದ್ದಾರೆ. ಲಿಂಗಾಯತ ಮತಗಳಿಂದ ಗೆಲ್ಲುತ್ತಿದ್ದ ಪ್ರಹ್ಲಾದ ಜೋಷಿಗೆ ಈ ಬಾರಿ ಭೀತಿ ಉಂಟಾಗಿದೆ.
ಪಕ್ಷೇತರವಾಗಿ ಸ್ಪರ್ಧೆಗೆ ದಿಂಗಾಲೇಶ್ವರ ಶ್ರೀ ತೀರ್ಮಾನ;
ದಿಂಗಾಲೇಶ್ವರ ಸ್ವಾಮೀಜಿಯವರು ಬಿಜೆಪಿ ಅಭ್ಯರ್ಥಿಯನ್ನು ಬದಲಿಸುವಂತೆ ಆಗ್ರಹ ಮಾಡಿದ್ದರು. ಆದ್ರೆ ಇದಕ್ಕೆ ಬಿಜೆಪಿ ಹೈಕಮಾಂಡ್ ಒಪ್ಪಲಿಲ್ಲ.. ಹೀಗಾಗಿ ದಿಂಗಾಲೇಶ್ವರ ಶ್ರೀಗಳೇ ಅಖಾಡಕ್ಕೆ ಧುಮುಕುತ್ತಿದ್ದಾರೆ. ಬಿಜೆಪಿಯಿಂದ ಪ್ರಹ್ಲಾದ್ ಜೋಷಿ ಐದನೇ ಬಾರಿ ಅಖಾಡಕ್ಕಿಳಿಯುತ್ತಿದ್ದರೆ, ಕಾಂಗ್ರೆಸ್ ನಿಂದ ಕುರುಬ ಸಮಾಜದ ವಿನೋದ್ ಅಸೂಟಿ ಅಭ್ಯರ್ಥಿಯಾಗಿದ್ದಾರೆ. ಚುನಾವಣಾ ಅಖಾಡಕ್ಕೆ ಶ್ರೀಗಳ ಎಂಟ್ರಿಯಿಂದ ಕಣ ರಂಗೇರುವಂತಾಗಿದೆ.
ಯಾರು ಈ ದಿಂಗಾಲೇಶ್ವರ ಸ್ವಾಮೀಜಿ..?
ಇವರ ಪೂರ್ಣ ಹೆಸರು ಪಕೀರ ದಿಂಗಾಲೇಶ್ವರ ಸ್ವಾಮೀಜಿ. ಶಿರಹಟ್ಟಿ ಮಠದ ಶ್ರೀಗಳಾದ ಇವರು, ಜಾತ್ಯತೀತ ನಿಲುವು ಹೊಂದಿದ್ದಾರೆ. ಮೂರು ಸಾವಿರ ಮಠದ ಉತ್ತರಾಧಿಕಾರಕ್ಕಾಗಿ ಇವರು ಹೋರಾಟ ಮಾಡಿದ್ದರು. ಹಲವು ವಿವಾದಿತ ಹೇಳಿಕೆಗಳಿಂದಲೂ ಹೆಸರಾದವರು.
ಕುಷ್ಟಗಿ ತಾಲೂಕಿನ ಬೊಮ್ಮನಾಳ ಗ್ರಾಮದವರಾದ ಇವರು, ವೀರಶೈವ ಲಿಂಗಾಯತ ಸಮುದಾಯದವರು. ದಿಂಗಾಲೇಶ್ವರ ಸ್ವಾಮೀಜಿಯವರು 1995ರ ಏ. 20ರಂದು ಗದಗ ಜಿಲ್ಲೆಯ ಶಿರಹಟ್ಟಿಯ ಬಾಳೇಹೊಸೂರ ಗ್ರಾಮದ ಶ್ರೀ ದಿಂಗಾಲೇಶ್ವರಮಠದ ಆರನೇಯ ಮಠಾಧಿಪತಿಯಾಗಿ ಅಧಿಕಾರ ವಹಿಸಿಕೊಂಡರು. ನಂತರ 2022ರಲ್ಲಿ ಶಿರಹಟ್ಟಿಯ ಶ್ರೀ ಜಗದ್ಗುರು ಫಕ್ಕೀರೇಶ್ವರ ಮಠಕ್ಕೆ ಉತ್ತರಧಿಕಾರಿಯಾದರು.