CrimeDistricts

ಮಕ್ಕಳನ್ನು ಬಿಟ್ಟು 25ರ ಯುವಕನ ಜೊತೆ ತಾಯಿ ಪರಾರಿ; ಮೂವರು ಮಕ್ಕಳು ಅನಾಥ!

ಬೆಳಗಾವಿ; ಆಕೆಗೆ ಮೂವರು ಮಕ್ಕಳಿದ್ದಾರೆ.. ವಯಸ್ಸು 40 ವರ್ಷ.. ಈ ವಯಸ್ಸಿನಲ್ಲಿ 25ರ ಯುವಕನ ಜೊತೆ ಲವ್‌ ಆಗಿದೆ.. ಹೀಗಾಗಿ ಆಕೆ ಮೂವರು ಮಕ್ಕಳನ್ನು ಬೀದಿಗೆ ಬಿಟ್ಟು ಆ ಯುವಕನ ಜೊತೆ ಓಡಿಹೋಗಿದ್ದಾಳೆ.. ಇದರಿಂದ ಆಕೆಯ ಮಕ್ಕಳು ಪೊಲೀಸರ ಮೊರೆ ಹೋಗಿದ್ದಾರೆ.. ತಾಯಿಯನ್ನು ಹುಡುಕಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.. ಬೆಳಗಾವಿ ಕ್ಯಾಂಪ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ..

ವಿನಾಯಕ ಕೊಲ್ಕಾರ ಎಂಬ ಯುವಕನ ಜೊತೆ ಮಹಿಳೆ ಓಡಿಹೋಗಿದ್ದಾಳೆ ಎಂದು ತಿಳಿದುಬಂದಿದೆ.. ಇದರಿಂದಾಗಿ ನಾವು ಅನಾಥರಾಗಿದ್ದೇವೆ.. ನಮ್ಮ ತಾಯಿಯನ್ನು ನಮಗೆ ಹುಡುಕಿಕೊಡಿ ಎಂದು ಮಕ್ಕಳು ಮನವಿ ಮಾಡಿಕೊಂಡಿದ್ದಾರೆ..

ಮಹಿಳೆಯ ಗಂಡ ಸರ್ಕಾರಿ ನೌಕರಿಯಲ್ಲಿದ್ದರು.,. ಆದ್ರೆ ಅವರು ಅಕಾಲಿಕ ಸಾವನ್ನಪ್ಪಿದ್ದು, ಮಹಿಳೆಯೇ ಮೂವರು ಮಕ್ಕಳನ್ನು ಸಾಕುತ್ತಿದ್ದಳು.. ಈ ನಡುವೆ ಯುವಕನೊಬ್ಬನ ಪರಿಚಯವಾಗಿದ್ದು, ಆತನೊಂದಿಗೆ ಆಕೆ ಓಡಿಹೋಗಿ ಬೇರೆ ಕಡೆ ಸಂಸಾರ ನಡೆಸುತ್ತಿದ್ದಾಳೆ ಎಂದು ಹೇಳಲಾಗಿದೆ…

 

Share Post