ರೌಡಿ ಆಗಬೇಕೆಂದು ಹೊರಟಿದ್ದ ಯುವಕನನ್ನು ಮುಗಿಸಿದ ಏರಿಯಾ ಹುಡುಗರು!
ಬೆಂಗಳೂರು; ಆತ ರೌಡಿ ಆಗಬೇಕು ಎಂದು ಬಯಸಿದ್ದ.. ಇದಕ್ಕಾಗಿ ಸಿಕ್ಕ ಸಿಕ್ಕವರನ್ನೆಲ್ಲಾ ಹೊಡೆಯುತ್ತಿದ್ದ.. ವಾಸವಿದ್ದ ಏರಿಯಾದಲ್ಲಿ ಹವಾ ಮೇಂಟೇನ್ ಮಾಡಲು ಹೊರಟಿದ್ದ.. ಆದ್ರೆ ಅದೇ ಏರಿಯಾದ ಹುಡುಗರೆಲ್ಲಾ ಸೇರಿಕೊಂಡು ಆತನನ್ನು ಮುಗಿಸಿದ್ದಾರೆ.. ಬೆಂಗಳೂರಿನ ಪುಲಿಕೇಶಿ ನಗರದಲ್ಲಿ ಈ ಘಟನೆ ನಡೆದಿದೆ.
ರೌಡಿ ಆಗಬೇಕು ಎಂದು ಹೊರಟಿದ್ದ ಅಪ್ಪು ಎಂಬಾತನ ಕೊಲೆ ಮಾಡಲಾಗಿದೆ.. ಅಪ್ಪುವಿನ ವರ್ತನೆಯಿಂದ ಬೇಸತ್ತು ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.. ಕೊಲೆಯಾದ ಅಪ್ಪು ರೌಡಿ ಆಗಬೇಕು ಎಂದುಕೊಂಡಿದ್ದನಂತೆ.. ಹೀಗಾಗಿ, ಏರಿಯಾದಲ್ಲಿರುವ ಎಲ್ಲಾ ಹುಡುಗರು ನನ್ನ ನೋಡಿ ಭಯಪಡಬೇಕು. ನಾನು ಹೇಳಿದ್ದನ್ನು ಕೇಳಬೇಕು ಎಂದು ಆತ ಬಯಸಿದ್ದನಂತೆ.. ಜೊತೆ ಏರಿಯಾದ ಹುಡುಗರ ಮೇಲೆ ದರ್ಪ ಮೆರೆಯುತ್ತಿದ್ದನಂತೆ.. ಇದರಿಂದ ಬೇಸತ್ತು ಒಂದಷ್ಟು ಯುವಕರು ಸೇರಿ ಅಪ್ಪುನನ್ನು ಕೊಲೆ ಮಾಡಿದ್ದಾರೆ..
ಅಪ್ಪುಗೆ ಕರೆ ಮಾಡಿದ ಯುವಕರು ಜೀವನಹಳ್ಳಿ ರೈಲ್ವೆ ಟ್ರ್ಯಾಕ್ ಬಳಿ ಕರೆಸಿಕೊಂಡಿದ್ದಾರೆ.. ಈ ವೇಳೆಯೂ ಘರ್ಷಣೆಯಾಗಿದೆ.. ಆಗ ಎಲ್ಲರೂ ಸೇರಿ ಅಪ್ಪು ಮೇಲೆ ಅಟ್ಯಾಕ್ ಮಾಡಿದ್ದಾರೆ.. ಮನಬಂದಂತೆ ಹೊಡೆದಿದ್ದಲ್ಲದೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ.. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ..