CrimeDistricts

ಪೊಲೀಸರ ಮನೆಯಲ್ಲೇ ಕಳವಿಗೆ ಯತ್ನ; ಸಿಕ್ಕಿಬಿದ್ದ ಕಳ್ಳರು

ಧಾರವಾಡ; ಪೊಲೀಸರ ಮನೆಯಲ್ಲೇ ಕಳ್ಳತನಕ್ಕೆ ಯತ್ನಿಸಿದ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಧಾರವಾಡದ ಸಾಧುನವರ ಎಸ್ಟೇಟ್‌ನಲ್ಲಿ ಈ ಘಟನೆ ನಡೆದಿದೆ.

ಇಲ್ಲಿನ ಮಹಿಳಾ ಪೊಲೀಸ್ ಠಾಣೆ ಎಎಸ್‌ಐ  ಬಸವರಾಜ ಬಳಿಗೇರ ಮನೆಯಲ್ಲಿ ಈ ಘಟನೆ ನಡೆದಿದೆ. ಕಳೆದ ರಾತ್ರಿ ಕಳ್ಳರು ಬಸವರಾಜ ಅವರ ಮನೆಗೆ ನುಗ್ಗಲು ಯತ್ನಿಸಿದ್ದಾರೆ.

ಈ ವೇಳೆ ಕಳ್ಳರು ಬಂದಿರುವ ಮಾಹಿತಿ ಅರಿತ ಬಳಿಗೇರ ಹಾಗೂ ಅವರ ಪುತ್ರ, ಒಬ್ಬ ಕಳ್ಳನನ್ನು ಹಿಡಿದಿದ್ದಾರೆ. ನಂತರ ಪೊಲೀಸರನ್ನು ಕರೆಸಿಕೊಂಡು ಮತ್ತೊಬ್ಬನನ್ನೂ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

 

Share Post