CrimeDistricts

ವಾಲಿಬಾಲ್‌ ತಗುಲಿದ್ದಕ್ಕೆ ವಿದ್ಯಾರ್ಥಿಗೆ ರಾಡ್‌ನಿಂದ ಹಲ್ಲೆ

ರಾಮನಗರ; ವಾಲಿಬಾಲ್‌ ತಗುಲಿತು ಎಂಬ ಕ್ಷುಲ್ಲಕ ಕಾರಣಕ್ಕೆ 9 ನೇ ತರಗತಿ ವಿದ್ಯಾರ್ಥಿಯೊಬ್ಬ ಹತ್ತನೇ ತರಗತಿ ವಿದ್ಯಾರ್ಥಿಗೆ ರಾಡ್‌ನಿಂದ ಹಲ್ಲೆ ಮಾಡಿರುವ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಾಲಿಬಾಲ್‌ ಆಡುವ ವೇಳೆ ಜಗಳ ನಡೆದಿದ್ದು, ಈ ವೇಳೆ ಕಿರಿಯ ವಿದ್ಯಾರ್ಥಿಗೆ ರಾಡ್‌ನಿಂದ ಹಲ್ಲೆ ನಡೆಸಲಾಗಿದೆ.

ಹದಿನಾಲ್ಕು ವರ್ಷದ ರಾಹುಲ್‌ ಎಂಬಾತನೇ ಹಲ್ಲೆಗೊಳಗಾದ ವಿದ್ಯಾರ್ಥಿಯಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಆರೋಪಿ ಪುನೀತ್‌ ಗೌಡ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಇದು ಸೆಪ್ಟೆಂಬರ್‌ 12ರಂದೇ  ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.

ಹತ್ತನೇ ತರಗತಿ ಓದುತ್ತಿರುವ ಪುನೀತ್‌ ಶಾಲಾ ಚುನಾವಣೆಯಲ್ಲಿ ಪ್ರಧಾನಿ ಪಟ್ಟ ಗಿಟ್ಟಿಸಿಕೊಂಡಿದ್ದ. ಅಂದಿನಿಂದ ಪುನೀತ್‌ ಸೊಕ್ಕಿನಿಂದ ಮೆರೆಯುತ್ತಿದ್ದ. ತಾನು ಏನೇ ಮಾಡಿದರೂ ಯಾರೂ ದೂರು ಕೊಡಬಾರದು ಎಂದು ವಾರ್ನಿಂಗ್‌ ಕೊಡುತ್ತಿದ್ದನಂತೆ. ಸೆಪ್ಟೆಂಬರ್‌ 12ರಂದು ರಾತ್ರಿ ಊಟದ ಬಳಿಕ ವಾಲಿಬಾಲ್‌ ಆಡಲು ರಾಹುಲ್‌  ಹೋಗಿದ್ದಾನೆ. ಅದೇ ದಾರಿಯಲ್ಲಿ ಕುಳಿತಿದ್ದ ಪುನೀತ್‌ ನನಗೆ ಬಾಲ್‌ ತಗುಲಿದರೆ ಪರಿಣಾಮ ನೆಟ್ಟಗಿರೋದಿಲ್ಲ ಎಂದು ಬೆದರಿಸಿದ್ದಾರೆ.

ಇನ್ನು ವಾಲಿಬಾಲ್‌ ಆಡುವ ವೇಳೆ ಅಚಾನಕ್ಕಾಗಿ ಬಾಲ್‌ ಪುನೀತ್‌ ಕಾಲಿಗೆ ಟಚ್‌ ಆಗಿದೆ. ಇದರಿಂದ ರೊಚ್ಚಿಗೆದ್ದ ಮುನೀತ್‌, ಸೊಳ್ಳೆ ಪರದೆ ಕಟ್ಟಲು ಉಪಯೋಗಿಸುತ್ತಿದ್ದ ಕಬ್ಬಿಣದ ರಾಡ್‌ ತೆಗೆದುಕೊಂಡು ಹಲ್ಲೆ ನಡೆಸಿದ್ದಾನೆ. ಪೊಲೀಸರಿಗೆ ತಿಳಿಸಿದರೆ ಅಷ್ಟೇ ಎಂದು ವಾರ್ನಿಂಗ್‌ ಕೂಡಾ ಕೊಟ್ಟಿದ್ದನಂತೆ.

ಘಟನೆ ನಂತರವೂ ಪುನೀತ್‌ ಇದೇ ರೀತಿ ದಬ್ಬಾಳಿಕೆ ನಡೆಸುತ್ತಿದ್ದರಿಂದ ರಾಹುಲ್‌ ತನ್ನ ತಂದೆಗೆ ಮಾಹಿತಿ ತಿಳಿಸಿದ್ದಾನೆ. ಇದೀಗ ರಾಹುಲ್‌ ಹಾಗೂ ಆತನ ತಂದೆ ಚನ್ನಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

 

Share Post