ಮಹಿಳೆಯೊಬ್ಬರು ನಾಪತ್ತೆ!; ರೇವಣ್ಣ ವಿರುದ್ಧ ಮತ್ತೊಂದು ಕೇಸ್!
ಮೈಸೂರು; ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಕಾನೂನು ಕುಣಿಕೆ ಬಿಗಿಯಾಗುತ್ತಿದೆ.. ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ರಿಲೀಸ್ ಆದ ಮೇಲೆ ಮಹಿಳೆಯೊಬ್ಬರು ಇಬ್ಬರ ವಿರುದ್ಧ ದೂರು ದಾಖಲು ಮಾಡಿದ್ದಳು.. ಈ ಪ್ರಕರಣದಲ್ಲಿ ರೇವಣ್ಣ ಅವರು ನಿರೀಕ್ಷಣಾ ಜಾಮೀನು ಪಡೆಯಲು ಸರ್ಕಸ್ ಮಾಡುತ್ತಿದ್ದಾರೆ.. ಹೀಗಾಗಿರುವಾಗಲೇ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.. ಮೈಸೂರು ಜಿಲ್ಲೆ ಕೆಆರ್ ನಗರದಲ್ಲಿ ರೇವಣ್ಣ ಅವರ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ..
ಇದನ್ನೂ ಓದಿ; 4 ಟ್ರಕ್‌ಗಳು, ಬರೋಬ್ಬರಿ 2000 ಕೋಟಿ ರೂ. ಹಣ..!; ಬೆಚ್ಚಿಬಿದ್ದ ಅಧಿಕಾರಿಗಳು!
ಕೆಆರ್ ನಗರದ ಮಹಿಳೆಯೊಬ್ಬರು ನಾಪತ್ತೆಯಾಗಿದ್ದು, ಆಕೆಯ ಪುತ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.. ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ರಿಲೀಸ್ ಮಾಡಲಾಗಿದ್ದು, ಅದರಲ್ಲಿ ನನ್ನ ತಾಯಿಯ ಚಿತ್ರವೂ ಇದೆ.. ಈ ವಿಡಿಯೋಗಳು ಬಹಿರಂಗವಾದ ಮೇಲೆ ನನ್ನ ತಾಯಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ.. ಅವರು ಎಲ್ಲಿದ್ದಾರೆ..? ಹೇಗಿದ್ದಾರೆ ಅನ್ನೋದು ಕೂಡಾ ಗೊತ್ತಿಲ್ಲ ಎಂದು ಮಹಿಳೆಯ ಪುತ್ರ ಆರೋಪ ಮಾಡಿದ್ದಾರೆ.. ಈ ದೂರು ದಾಖಲಾಗುತ್ತಿದ್ದಂತೆ ಮೈಸೂರು ಹೆಚ್ಚುವರಿ ಪೊಲೀಸ್ ಆಯುಕ್ತೆ ಕೆಆರ್ ನಗರ ಠಾಣೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ..
ಇದನ್ನೂ ಓದಿ; ಉತ್ತರ ಕೊರಿಯಾ; ಕಿಮ್‌ಗಾಗಿ ಪ್ರತಿ ವರ್ಷ 25 ಸುಂದರ ಯುವತಿಯರ ಆಯ್ಕೆ; ಹೇಗಿರುತ್ತೆ ಪ್ರಕ್ರಿಯೆ..?
ರೇವಣ್ಣ ಅವರ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು ಎನ್ನಲಾದ ಮಹಿಳೆಯೊಬ್ಬರು ಹೊಳೆ ನರಸೀಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದರು.. ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆಕೆ ಆರೋಪ ಮಾಡಿದ್ದಳು.. ಸಾಲದೆಂಬಂತೆ ನನ್ನ ಮಗಳಿಗೂ ಕಿರುಕುಳ ನೀಡಿದ್ದಾರೆ ಎಂದೂ ಆಕೆ ಆರೋಪಿಸಿದ್ದಳು.. ಈ ಸಂಬಂಧ ದೂರು ದಾಖಲಾಗಿದ್ದು, ಇದರಲ್ಲಿ ರೇವಣ್ಣ ಎ1 ಆರೋಪಿಯಾದರೆ, ಪ್ರಜ್ವಲ್ ರೇವಣ್ಣ ಎ2 ಆರೋಪಿಯಾಗಿದ್ದಾರೆ..
ಈ ಸಂಬಂಧ ವಿಚಾರಣೆ ನಡೆಸಲು ಎಸ್‌ಐಟಿ ಅಧಿಕಾರಿಗಳು ಇಬ್ಬರಿಗೂ ನೋಟಿಸ್ ಜಾರಿ ಮಾಡಿದ್ದರು.. ಆದ್ರೆ ಜರ್ಮನಿಯಲ್ಲಿರುವ ಪ್ರಜ್ವಲ್ ರೇವಣ್ಣ ಅವರು ಏಳು ದಿನಗಳ ಕಾಲಾವಕಾಶ ಕೋರಿದ್ದರು.. ಆದ್ರೆ ಇದಕ್ಕೆ ನೋ ಎಂದಿರುವ ಎಸ್‌ಐಟಿ ಅಧಿಕಾರಿಗಳು ಈ ಕೂಡಲೇ ಬರಬೇಕೆಂದು ಹೇಳಿದ್ದಾರೆ.. ಇನ್ನೊಂದೆಡೆ ಸರ್ಕಾರ ಪ್ರಜ್ವಲ್ ಗಾಗಿ ಲುಕ್ ಔಟ್ ನೋಟಿಸ್ ಜಾರಿ ಮಾಡಿದೆ.. ಇತ್ತ ಬೆಂಗಳುರಿನಲ್ಲೇ ಇದ್ದರೂ ವಿಚಾರಣೆಗೆ ಹಾಜರಾಗದ ರೇವಣ್ಣ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ..
ಇದನ್ನೂ ಓದಿ; ಅನ್ನವನ್ನು ಪಾತ್ರೆಯಲ್ಲಿ ಮಾಡಬೇಕಾ..? ಕುಕ್ಕರ್‌ನಲ್ಲಿ ಮಾಡಬೇಕಾ..?; ಯಾವುದು ಬೆಸ್ಟ್..?