4 ಟ್ರಕ್‌ಗಳು, ಬರೋಬ್ಬರಿ 2000 ಕೋಟಿ ರೂ. ಹಣ..!; ಬೆಚ್ಚಿಬಿದ್ದ ಅಧಿಕಾರಿಗಳು!
ಪಾಮಿಡಿ (ಆಂಧ್ರಪ್ರದೇಶ); ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನಕ್ಕೆ ಇನ್ನು ಮೂರು ದಿನಗಳ ಮಾತ್ರ ಬಾಕಿ ಇದೆ.. ಎಲ್ಲಾ ಪಕ್ಷಗಳೂ ಪ್ರಚಾರದ ಭರಾಟೆ ಜೋರು ಮಾಡಿವೆ.. ಅದ್ರಲ್ಲೂ ಆಂಧ್ರಪ್ರದೇಶದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಎರಡಕ್ಕೂ ಚುನಾವಣೆ ನಡೆಯುತ್ತಿದೆ.. ಹೀಗಾಗಿ ಆಂಧ್ರದ ರಾಜಕೀಯ ರಣರಂಗ ಸಾಕಷ್ಟು ಕುತೂಹಲ ಕೆರಳಿಸಿದೆ.. ಇದರ ನಡುವೆ ಚುನಾವಣಾ ಅಕ್ರಮಗಳನ್ನು ತಡೆಯಲು ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ಹದ್ದಿಗಣ್ಣಿಟ್ಟಿದ್ದಾರೆ.. ಎಲ್ಲೆಡೆ ಚೆಕ್‌ಪೋಸ್ಟ್‌ಗಳನ್ನ ಮಾಡಿ ಪರಿಶೀಲನೆ ಮಾಡಲಾಗುತ್ತಿದೆ.. ಹೀಗೆ ಮಾಡುವ ನಾಲ್ಕು ಕಂಟೈನರ್‌ನಲ್ಲಿ ಸಿಕ್ಕ ಹಣ ನೋಡಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.. ಯಾಕಂದ್ರೆ ನಾಲ್ಕು ಕಂಟೈನರ್‌ಗಳಲ್ಲಿದ್ದ ಒಟ್ಟು ಹಣ ಬರೋಬ್ಬರಿ 2000 ಕೋಟಿ ರೂಪಾಯಿ..!. ಅಚ್ಚರಿ ಅನಿಸಬಹುದು.. ಆದ್ರೆ ಇದು ನಿಜ..
ಇದನ್ನೂ ಓದಿ; ಉತ್ತರ ಕೊರಿಯಾ; ಕಿಮ್‌ಗಾಗಿ ಪ್ರತಿ ವರ್ಷ 25 ಸುಂದರ ಯುವತಿಯರ ಆಯ್ಕೆ; ಹೇಗಿರುತ್ತೆ ಪ್ರಕ್ರಿಯೆ..?
ಕೇರಳದಿಂದ ಬಂದಿದ್ದ ನಾಲ್ಕು ಕಂಟೇನರ್‌ಗಳನ್ನು ಆಂಧ್ರಪ್ರದೇಶದ ಪಾಮಿಡಿಯಲ್ಲಿ ಚುನಾವಣೆಗೆ ನಿಯೋಜನೆಗೊಂಡಿದ್ದ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ.. ಈ ವೇಳೆ ಆ ನಾಲ್ಕೂ ಕಂಟೇನರ್‌ಗಳಲ್ಲಿ ಬರೀ ನೋಟುಗಳೇ ಕಾಣಿಸಿವೆ.. ಒಟ್ಟು ನಾಲ್ಕು ಕಂಟೇನರ್‌ಗಳಲ್ಲಿ 2000 ಕೋಟಿ ರೂಪಾಯಿ ಸಿಕ್ಕಿದೆ.. ಅದನ್ನು ನೋಡಿ ಬೆಚ್ಚಿಬಿದ್ದ ಅಧಿಕಾರಿಗಳು ಏನು ಮಾಡಬೇಕೆಂದು ದಿಕ್ಕುತೋಚದಂತಾಗಿದ್ದಾರೆ… ಗಡಿಬಿಡಿಯಲ್ಲೇ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದ್ದಾರೆ.. ಹಿರಿಯ ಅಧಿಕಾರಿಗಳು ಬಂದ ಮೇಲೆ ನಿಜ ವಿಷಯ ಗೊತ್ತಾಗಿ ಎಲ್ಲರೂ ಕೊಂಚ ನಿರಾಳರಾಗಿದ್ದಾರೆ..
ಇದನ್ನೂ ಓದಿ; ಅನ್ನವನ್ನು ಪಾತ್ರೆಯಲ್ಲಿ ಮಾಡಬೇಕಾ..? ಕುಕ್ಕರ್‌ನಲ್ಲಿ ಮಾಡಬೇಕಾ..?; ಯಾವುದು ಬೆಸ್ಟ್..?
ಆಂಧ್ರಪ್ರದೇಶದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಮತದಾರರಿಗೆ ಹಂಚಲು ಇಷ್ಟು ಹಣ ತೆಗೆದುಕೊಂಡು ಹೋಗುತ್ತಿರಬಹುದು ಎಂದು ಎಲ್ಲರೂ ಅನುಮಾನಪಟ್ಟಿದ್ದರು.. ಆದ್ರೆ, ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ನಿಜ ವಿಷಯ ಗೊತ್ತಾಗಿದೆ.. ಈ ಹಣ ಐಸಿಐಸಿಐ, ಐಡಿಬಿಐ ಮತ್ತು ಫೆಡರಲ್ ಬ್ಯಾಂಕ್‌ಗೆ ಸೇರಿದ್ದು ಎಂದು ಅನಂತಪುರ ರೇಂಜ್‌ನ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (ಡಿಐಜಿಪಿ) ಆರ್ .ಎನ್. ಅಮ್ಮಿ ರೆಡ್ಡಿ ಸ್ಪಷ್ಟಪಡಿಸಿದ್ದಾರೆ..
ಕೇರಳದಿಂದ ಬಂದಿದ್ದ ಟ್ರಕ್‌ಗಳು ಹೈದರಾಬಾದ್‌ನಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪ್ರಾದೇಶಿಕ ಕಚೇರಿಗೆ ಹೋಗುತ್ತಿದ್ದವು ಎಂದು ಅಧಿಕಾರಿ ಹೇಳಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಟ್ರಕ್‌ಗಳನ್ನು ವಶಕ್ಕೆ ತೆಗೆದುಕೊಂಡು ಪರಿಶೀಲನೆ ಮಾಡಲಾಗಿದೆ.. ಮೇ 13 ರಂದು ಆಂಧ್ರಪ್ರದೇಶದಲ್ಲಿ ಏಕಕಾಲದಲ್ಲಿ ಸಂಸತ್ ಮತ್ತು ವಿಧಾನಸಭೆಗೆ ಮತದಾನ ನಡೆಯಲಿದೆ.
‘ಇದು ಮೂಲತಃ ಐಸಿಐಸಿಐ, ಐಡಿಬಿಐ ಮತ್ತು ಫೆಡರಲ್ ಬ್ಯಾಂಕ್‌ಗೆ ಸೇರಿದ ನೋಟುಗಳಾಗಿವೆ.. 2,000 ಕೋಟಿ ರೂ.ಯನ್ನು ಕೊಚ್ಚಿಯಿಂದ ಹೈದರಾಬಾದ್‌ನ ಆರ್‌ಬಿಐ ಕಚೇರಿಗೆ ರವಾನೆ ಮಾಡಲಾಗುತ್ತಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.. ಟ್ರಕ್‌ಗಳು ಬೆಂಗಾವಲು ವಾಹನಗಳನ್ನು ಹೊಂದಿದ್ದವು ಮತ್ತು ಅಗತ್ಯವಿರುವ ಎಲ್ಲಾ ಸಾರಿಗೆ ದಾಖಲೆಗಳನ್ನು ಪೊಲೀಸರಿಗೆ ನೀಡಿದ್ದಾರೆ.. ಸಂಬಂಧಿಸಿದ ಬ್ಯಾಂಕುಗಳು ಮತ್ತು ಆರ್‌ಬಿಐ ದೃಢೀಕರಣವನ್ನು ತೆಗೆದುಕೊಂಡು ಪರಿಶೀಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ..