Lifestyle

ಅನ್ನವನ್ನು ಪಾತ್ರೆಯಲ್ಲಿ ಮಾಡಬೇಕಾ..? ಕುಕ್ಕರ್‌ನಲ್ಲಿ ಮಾಡಬೇಕಾ..?; ಯಾವುದು ಬೆಸ್ಟ್‌..?

ಅಡುಗೆ ಮಾಡುವ ವಿಧಾನ ಕಾಲ ಕಾಲಕ್ಕೆ ಬದಲಾಗುತ್ತಾ ಹೋಗುತ್ತಿದೆ.. ದಶಕಗಳ ಹಿಂದೆ ಎಲ್ಲರೂ ಕೂಡಾ ಸೌದೆ ಒಲೆಯಲ್ಲೇ ಅಡುಗೆ ಮಾಡುತ್ತಿದ್ದರು.. ಅಡುಗೆಗೆ ಮೊದಲು ಮಡಿಕೆಗಳನ್ನು ಬಳಸುತ್ತಿದ್ದರು.. ಅನಂತರ ಕಂಚು ಮುಂತಾದ ಲೋಹದ ಪಾತ್ರಗಳ ಬಳಕೆ ಬಂತು.. ಈಗ ಕಾಲ ಬದಲಾಗುತ್ತಾ ಹೋಗಿದೆ.. ಈಗ ಬ್ಯುಸಿ ಲೈಫ್‌.. ಹೀಗಾಗಿ ಎಲ್ಲವೂ ಶೀಘ್ರವಾಗಿ ಆಗಬೇಕು.. ಹೀಗಾಗಿ, ಸೌದೆ ಒಲೆ ಜಾಗದಲ್ಲಿ ಗ್ಯಾಸ್‌ ಸ್ಟೌವ್‌ ಬಂದಿದೆ.. ಮಡಿಕೆ, ಪಾತ್ರೆ ಜಾಗದಲ್ಲಿ ಕುಕ್ಕರ್‌ಗಳು ಬಂದಿವೆ.. ಹಾಗಾದ್ರೆ ಕುಕ್ಕರ್‌ನಲ್ಲಿ ಅಡುಗೆ ಮಾಡುವುದು ಒಳ್ಳೆಯದಾ, ಪಾತ್ರೆಯಲ್ಲಿ ಅಡುಗೆ ಮಾಡುವುದು ಒಳ್ಳೆಯದಾ..? ಯಾವುದು ಆರೋಗ್ಯಕ್ಕೆ ಉತ್ತಮ..? ಅದ್ರಲ್ಲೂ ಅನ್ನವನ್ನು ಯಾವುದರಲ್ಲಿ ಮಾಡಬೇಕು..? ಈ ಬಗ್ಗೆ ತಿಳಿಯೋಣ ಬನ್ನಿ..

ಕುಕ್ಕರ್‌ನಲ್ಲಿ ಅನ್ನ ಮಾಡಬಹುದೇ..?;

ಅನ್ನ ಅಂತ ಬಂದಾಗ ಈಗ ಎಲ್ಲರೂ ಕೂಡಾ ಕುಕ್ಕರ್‌ ನೆಚ್ಚಿಕೊಂಡಿದ್ದಾರೆ.. ಅಕ್ಕಿಯನ್ನು ತೊಳೆದು, ಕುಕ್ಕರ್‌ಗೆ ಹಾಕಿ ಅದರ ಎರಡು ಪಟ್ಟು ನೀರು ಹಾಕಿ ಒಲೆಯ ಮೇಲಿಟ್ಟರೆ ಚಿಂತೆ ಮಾಯ.. ಒಂದು ವಿಷಲ್‌ ಹೊಡೆದ ಮೇಲೆ ಆಫ್‌ ಮಾಡಿದರೆ ಸಾಕು, ಅನ್ನ ರೆಡಿಯಾಗಿರುತ್ತದೆ.. ಹೀಗಾಗಿ ಈ ವಿಧಾನವನ್ನೇ ಹೆಚ್ಚು ಜನ ನೆಚ್ಚಿಕೊಂಡಿದ್ದಾರೆ..

ಕುಕ್ಕರ್‌ ಬಳಕೆಯಿಂದ ಲಾಭವೇನು..?;

ಕುಕ್ಕರ್‌ನಲ್ಲಿ ಅಕ್ಕಿ ಬೇಯಿಸಿದರೆ ಬಹುಬೇಗ ಅನ್ನವಾಗುತ್ತದೆ.. ಇದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದಂತೆ.. ಜೊತೆಗೆ ಅನ್ನ ಚೆನ್ನಾಗಿ ಬೇಯುವುದರಿಂದ ಪ್ರೋಟೀನ್‌ ಮತ್ತು ಪಿಷ್ಟದಂತಹ ಪೋಷಕಾಂಶಗಳು ನಮಗೆ ಲಭ್ಯವಾಗುತ್ತವೆ.. ಇನ್ನು ಇದು ವಿಶಲ್‌ ಮೂಲಕ ಅಕ್ಕಿಯಲ್ಲಿರುವ ಯಾವುದೇ ಬ್ಯಾಕ್ಟೀರಿಯಾವನ್ನು ಹೊರಹಾಕುತ್ತದೆ..

ತೂಕವನ್ನು ಹೆಚ್ಚಿಸುತ್ತದೆಯೇ..?

ಕುಕ್ಕರ್‌ನಲ್ಲಿ ಅಡುಗೆ ಮಾಡುವುದು ತುಂಬಾ ಸುಲಭ. ಇದರಲ್ಲಿ ಅಕ್ಕಿ ಬೇಯಿಸಿದರೆ ಬೇಗ ಅನ್ನವಾಗುತ್ತದೆ. ಆದರೆ, ಇದರಲ್ಲಿ ಕಾರ್ಬೋಹೈಡ್ರೇಟ್‌ಗಳು ಇರುತ್ತವೆ. ಇದು ಪಿಷ್ಟವನ್ನು ಹೊಂದಿರುತ್ತದೆ. ಇದು ತೂಕವನ್ನು ಹೆಚ್ಚಿಸುತ್ತದೆ.

ಪಾತ್ರೆಯಲ್ಲಿ ಅಕ್ಕಿ ಬೇಯಿಸಿದರೆ ಏನುಪಯೋಗ..?

ಪಾತ್ರೆಯಲ್ಲಿ ಅನ್ನ ಬೇಯಿಸುವಾಗ  ಜ್ವಾಲೆಯನ್ನು ಸರಿಯಾಗಿ ಸೆಟ್‌ ಮಾಡಬೇಕು… ಹೆಚ್ಚಿನ ಜ್ವಾಲೆ ಇದ್ದರೆ, ಅದು ವೇಗವಾಗಿ ಬೇಯಿಸುತ್ತದೆ. ಆದರೆ, ಜೊತೆಗೆ ಆಗಾಗ ಪರಿಶೀಲನೆ ಮಾಡಬೇಕು.. ಅಲ್ಲೇ ಇದ್ದು ಪರಿಶೀಲಿಸುತ್ತಿರಬೇಕು.. ಆಗ ಮಾತ್ರ ಅನ್ನ ಚೆನ್ನಾಗಿ ಮಾಡಲು ಸಾಧ್ಯವಾಗುತ್ತದೆ.. ಇಲ್ಲದಿದ್ದರೆ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ..

ಯಾವುದರಲ್ಲಿ ಬೇಯಿಸಬೇಕು..?
ಅಕ್ಕಿಯನ್ನು ಬಾಣಲೆಯಲ್ಲಿ ಬೇಯಿಸಿದಾಗ ಅದರಲ್ಲಿ 30 ರಿಂದ 40 ಪ್ರತಿಶತದಷ್ಟು ಪಿಷ್ಟವು ಬಿಡುಗಡೆಯಾಗುತ್ತದೆ. ಉಳಿದ ಪಿಷ್ಟವು ದೇಹಕ್ಕೆ ಅಗತ್ಯವಾಗಿರುತ್ತದೆ. ಪಿಷ್ಟವನ್ನು ಹೊರಹಾಕಬಹುದು. .ನಾರುಗಳು ದೇಹವನ್ನು ತಲುಪುತ್ತವೆ. ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ. ಆದ್ದರಿಂದ, ಅನ್ನವನ್ನು ಬೇಯಿಸಲು ಒಂದು ಪಾತ್ರೆ ಉತ್ತಮವಾಗಿದೆ. ಕುಕ್ಕರ್‌ನಲ್ಲಿ ಸಾಂದರ್ಭಿಕವಾಗಿ ಬಳಸಿ. ನಿಯಮಿತವಾಗಿ ಅಡುಗೆ ಮಾಡದಿರುವುದು ಉತ್ತಮ.

Share Post