ಕೆಲಸ ಸಿಗದಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ!
ಅನಂತಪುರ; ಉದ್ಯೋಗ ಸಿಗದೇ ತೊಂದರೆಗೋಳಗಾಗಿದ್ದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. LLB ಮಾಡಿದ್ದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಅನಂತಪುರದ ಬಳಿ ಈ ಘಟನೆ ನಡೆದಿದೆ..
ಬುಕ್ಕಪಟ್ಟಣ ಮಂಡಲದ ಸಿದ್ದರಾಮಪುರ ಗ್ರಾಮದ ನಿವಾಸಿ ಜಿ.ಲಾಲುಸಾಹೇಬ್ ಅವರ ಮಗಳೇ ಆತ್ಮಹತ್ಯೆ ಮಾಡಿಕೊಂಡವಳು. ಇವರು 2 ವರ್ಷದ ಹಿಂದೆ ವಿದ್ಯಾಭ್ಯಾಸಕ್ಕಾಗಿ ಅನಂತಪುರಕ್ಕೆ ವಲಸೆ ಬಂದಿದ್ದರು. ಕೊರ್ಡು ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರು ಎಂದು ಗೊತ್ತಾಗಿದೆ.
ಲಾಲು ಸಾಹೇಬ್ ಹಿರಿಯ ಮಗಳು ರುಕ್ಸಾನಾ (27)ಅನಂತಪುರ ಜಿಲ್ಲಾ ನ್ಯಾಯಾಲಯದಲ್ಲಿ ಕಿರಿಯ ವಕೀಲರಾಗಿ ಕೆಲಸ ಮಾಡುತ್ತಿದ್ದಳು. ಆದ್ರೆ ಬೇರೆ ಕೆಲಸದ ಹುಡುಕಾಟದಲ್ಲಿದ್ದ ಆಕೆ ಕೆಲಸ ಸಿಗದೇ ಜಿಗುಪ್ಸೆಗೊಂಡಿದ್ದಳು.
ಎಸ್ಕೆಯು ಕ್ಯಾಂಪಸ್ ಕಾಲೇಜಿನಲ್ಲಿ ಎಲ್ಎಲ್ಬಿ ಮುಗಿಸಿರುವ ರುಕ್ಸಾನಾಗೆ ಹಿಂದಿನ ಸರ್ಕಾರದಲ್ಲಿ ತಿಂಗಳಿಗೆ ರೂ.5 ಸಾವಿರ ಸ್ಟೈಫಂಡ್ ಬರುತ್ತಿತ್ತು. ಹೊಸ ಸರ್ಕಾರ ರಚನೆಯಾದ ನಂತರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು ಎಂದು ವರದಿಯಾಗಿದೆ.