CrimeDistricts

ಗೂಡ್ಸ್ ರೈಲಿನಿಂದ ಬೇರ್ಪಟ್ಟ ಬೋಗಿ; ಜನರಿಗೆ ಗಾಬರಿ

ಮಂಗಳೂರು; ಗೂಡ್ಸ್ ರೈಲಿನಿಂದ ಬೋಗಿ ಕಳಚಿಕೊಂಡು ಆತಂಕ ಸೃಷ್ಟಿಸಿದ ಘಟನೆ ಮಂಗಳೂರಿನಲ್ಲಿ ನಡದಿದೆ.

ಹಳೆಯಂಗಡಿಯ ಇಂದಿರಾ ನಗರದ ರೈಲ್ವೆ ಗೇಟ್ ಬಳಿ ಘಟನೆ ನಡೆದಿದೆ‌‌. ಪಡುಬಿದ್ರಿಯಿಂದ ಮಂಗಳೂರಿನ ಎನ್ ಎಮ್ ಪಿ ಟಿ ಯತ್ತ ಸಾಗುತ್ತಿದ್ದ ಗೂಡ್ಸ್ ರೈಲಿನಿಂದ ಬೋಗಿಗಳು ಬೇರ್ಪಟ್ಟಿವೆ. ಬೋಗಿಯಿಂದ ಮತ್ತೊಂದು ಬೋಗಿ ಜೋಡಿಸಲಾದ ಕೊಂಡಿಯನ್ನ ಕಳಚಿಕೊಂಡಿರುವ ಬೋಗಿಗಳು ಹಿಂದೆ ಉಳಿದಿವೆ, ಬೋಗಿಯನ್ನ ಬಿಟ್ಟು ಒಂದು ಕಿ ಮಿ ಹೆಚ್ಚು ದೂರ ಕ್ರಮಿಸಿದ ಬಳಿಕ ರೈಲು ನಿಲುಗಡೆಯಾಗಿದೆ‌. ರೈಲು ಬೋಗಿ‌ ಕಳಚಿದ್ದರಿಂದ ಜನರು ಆತಂಕ್ಕಿಡಾಗಿದ್ದಾರೆ. ರೈಲು ತೆರಳುತ್ತಿದ್ದರು ಬೋಗಿ ಮಾತ್ರ ಹಿಂದೆ ಉಳಿದಿದೆ ಎಂದು ರೈಲ್ವೆ ಗೇಟ್ ನಲ್ಲಿ ನಿಂತಿದ್ದ ಜನರು ಗಾಬರಿಗೊಂಡಿದ್ದಾರೆ.

ಬೋಗಿ ಬೇರ್ಪಟ್ಟಿದ್ದರಿಂದ ರೈಲ್ವೆ ಗೇಟ್ ನಲ್ಲಿ ಪ್ರಯಾಣಿಕರು ಪರದಾಡುವಂತ ಸ್ಥಿತಿ ನಿರ್ಮಾಣವಾಯಿತು.ಸೂರತ್ಕಲ್ ನಿಂದ ತಾಂತ್ರಿಕ ತಜ್ಞರು ಸ್ಥಳಕ್ಕೆ ಆಗಮಿಸಿ ರೈಲು ದುರಸ್ತಿಗೊಳಿಸಿದ ಬಳಿಕ ರೈಲು ಸಂಚಾರ ಮುಂದುವರೆಸಿದೆ.

Share Post