ನಾಯಿಗೆ ಕಾರು ಡಿಕ್ಕಿ: 70 ಕೀ ಮಿ ಚಲಿಸಿದ ಬಳಿಕ ಕಾರಿನಿಂದ ಹೊರ ಬಂದ ನಾಯಿ
ಮಂಗಳೂರು: ಕಾರು ಡಿಕ್ಕಿಯಾದ ರಭಸಕ್ಕೆ ಕಾರಿನ ಬಂಪರ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದ ನಾಯಿಯೊಂದು ಬರೊಬ್ಬರಿ 70 ಕಿ ಮೀ ಕ್ರಮಿಸಿದ ಬಳಿಕ ಹೊರಬಂದು ಕಾರು ಮಾಲಿಕನ ಅಚ್ಚರಿಗೆ ಕಾರಣವಾಗಿದೆ.
ಟಿ ಎಸ್ ಪುತ್ತೂರಿನ ಕಬ್ಬಕ ಮೂಲದ ಸುಬ್ರಮಣ್ಯ ತಮ್ಮ ಸ್ವಗ್ರಾಮ ಕಬಕಕ್ಕೆ ಕಾರಿನಲ್ಲಿ ತೆರಳುವಾಗ ಸುಳ್ಯ ತಾಲ್ಲೂಕಿನ ಬಳ್ಪದಲ್ಲಿ ಅಡ್ಡಬಂದ ನಾಯಿಗೆ ಆಕಸ್ಮಿಕವಾಗಿ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯಾದ ರಭಸಕ್ಕೆ ನಾಯಿ ಮೃತಪಟ್ಟಿದೆ ಎಂದು ತಿಳಿದು ಕಾರು ನಿಲ್ಲಿಸದೆ ನೇರವಾಗಿ ತಮ್ಮ ಗ್ರಾಮ ಕಬಕ ತಲುಪಿದ್ದಾರೆ.
ಗ್ರಾಮಕ್ಕೆ ಬಂದು ಕಾರಿನಿಂದ ಇಳಿದ ಬಳಿಕ ನಾಯಿ ಕೂಗುವದನ್ನ ತಿಳಿದ ಸುಬ್ರಮಣ್ಯ ಕಾರಿನ ಬಂಪರ್ ಬಿಚ್ಚಿದ ತಕ್ಷಣ ನಾಯಿ ಹೊರಬಂದಿದೆ.ನಾಯಿ ಬಂಪರ್ ನಲ್ಲಿ ಸುರಕ್ಷಿತವಾಗಿ ಅಡಗಿದ್ದನ್ನ ಕಂಡು ಅಚ್ಚರಿಗೊಳಗಾಗಿದ್ದಾರೆ.