ಮೊರ್ಬಿ ತೂಗು ಸೇತುವೆ ದುರಂತ ಪ್ರಕರಣ; ಮೃತರ ಸಂಖ್ಯೆ 135ಕ್ಕೆ ಏರಿಕೆ
ಮೊರ್ಬಿ ; ಗುಜರಾತ್‌ನ ಮಚ್ಚು ನದಿಗೆ ನಿರ್ಮಿಸಲಾಗಿದ್ದ ಮೊರ್ಬಿ ತೂಗು ಸೇತುವೆ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 135ಕ್ಕೇರಿದೆ. ನಿನ್ನೆ ಸಂಜೆ ಸೇತುವೆ ಕುಸಿದುಬಿದ್ದಿದ್ದು, ದೊಡ್ಡ ದುರಂತಕ್ಕೆ ಕಾರಣವಾಗಿತ್ತು. ಅವಶೇಷಗಳಡಿ ಸಿಲುಕಿದ್ದ 185 ಮಂದಿಯನ್ನು ರಕ್ಷಣೆ ಮಾಡಲಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೊರ್ಬಿ ಬ್ರಿಡ್ಜ್ ನೂರು ವರ್ಷಗಳ ಹಿಂದೆ ಕಟ್ಟಲಾಗಿತ್ತು. ಆದ್ರೆ ಅದು ಹಳೆಯದಾದ್ದರಿಂದ್ ಆರು ತಿಂಗಳಿಂದ ಸಾರ್ವಜನಿಕ ಓಡಾಟಕ್ಕೆ ನಿಷೇಧ ಹೇರಲಾಗಿತ್ತು. ದುರಸ್ತಿಯ ನಂತರ ಆರು ದಿನದ ಹಿಂದೆಯಷ್ಟೇ ಸಾರ್ವಜನಿಕರಿಗೆ ಅವಕಾಶ ನೀಡಲಾಗಿತ್ತು. ಆದ್ರೆ ನಿನ್ನೆ ಭಾನುವಾರ ಪ್ರವಾಸಿಗರು ಹೆಚ್ಚಿದ್ದರಿಂದ ಸೇತುವೆ ಕುಸಿದುಬಿದ್ದಿದೆ. ಫಿಟ್‌ನೆಸ್ ಸರ್ಟಿಫಿಕೇಟ್ ಇಲ್ಲದೆ ಓಡಾಟಕ್ಕೆ ಅವಕಾಶ ನೀಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ಇನ್ನೂ ಹಲವರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಲಾಗಿದೆ. ಸೇನಾ ಸಿಬ್ಬಂದಿ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅಗ್ನಿಶಾಮಕ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸುತ್ತಿದೆ.