BengaluruCrime

ಮಿಸ್ಸಾಗಿದ್ದ ನೇಪಾಳಿ ಮಹಿಳೆ ಶವವಾಗಿ ಪತ್ತೆ

ಬೆಂಗಳೂರು; ಬೆಂಗಳೂರಿನಲ್ಲಿ ಕೋಲ್ಡ್ ಕೇಸ್ ಸಿನಿಮಾ ಮಾದರಿಯ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ಒಂದೇ ದಿನದಲ್ಲಿ ಕೇಸ್ ಹಿಂದಿನ‌ಮಿಸ್ಟರಿ ಪತ್ತೆ ಹಚ್ಚಿದ್ದಾರೆ.

ಈ ಕುರಿತಾಗಿ ಮಾತನಾಡಿದ ಅಗ್ನೇಯ ವಿಭಾಗದ ಡಿಸಿಪಿ ಸಿಕೆ ಬಾಬಾ, ನಿನ್ನೆ ಬೆಳಗ್ಗೆ ನಮಗೆ ಮಾನವನ ಅಸ್ತಿಪಂಜರ ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು.ಈ ವೇಳೆ ಮಹಿಳೆಯ ಚಪ್ಪಲಿ, ಅಲ್ಲದೆ ಕುತ್ತಿಗೆ ಬಳಸುವ ನೆಕ್ಲೆಸ್ ಎಲ್ಲವೂ ಪತ್ತೆಯಾಗಿತ್ತು.ಹೀಗಾಗಿ ನಾವು ಮಿಸ್ಸಿಂಗ್ ಕೇಸ್ ಗಳನ್ನ ಹುಡುಕಲು ಶುರುಮಾಡಿದ್ವಿ,ನಾವು ಕಳೆದ ವರ್ಷ ಜುಲೈ ನಲ್ಲಿ ಹುಳಿಮಾವು ಠಾಣೆಯಲ್ಲಿ ನೇಪಾಳಿ ಮಹಿಳೆ ನಾಪತ್ತೆ ಕೇಸ್ ದಾಖಲಾಗಿತ್ತು.

ಈಗ ಅಲ್ಲಿ ಸಿಕ್ಕಿರುವ ವಸ್ತುಗಳು ಎಲ್ಲ‌ ಮ್ಯಾಚ್ ಮಾಡಲಾಗಿದ್ದು ಆ ಮಹಿಳೆಯದೆ ಶವ ಎಂಬುದು ತಿಳಿದುಬಂದಿದೆ.ಆದರೂ ನಾವು ಅಸ್ಥಿಪಂಜರದ ಡಿಎನ್ ಎ , ಸತ್ತ ಅವಧಿಯ ಬಗ್ಗೆ ಮಾಹಿತಿ ಎಲ್ಲವನ್ನು ಪಡೆದುಕೊಳ್ಳಲಿದ್ದೇವೆ ಎಂದು ತಿಳಿಸಿದರು.

Share Post