CrimeNational

ದೇವಸ್ಥಾನದ ಗೋಡೆ ಕುಸಿದು 9 ಮಕ್ಕಳು ದಾರುಣ ಸಾವು!

ಸಾಗರ್‌ (ಮಧ್ಯಪ್ರದೇಶ); ಮಧ್ಯಪ್ರದೇಶದಲ್ಲಿ ಭೀಕರ ದುರಂತ ನಡೆದಿದೆ.. ದೇವಸ್ಥಾನದ ಗೋಡೆ ಕುಸಿದು 9 ಮಕ್ಕಳು ಸಾವನ್ನಪ್ಪಿದ್ದಾರೆ.. ಶಿಥಿಲಗೊಂಡಿದ್ದ ದೇವಸ್ಥಾನ ಕುಸಿದಿದ್ದರಿಂದ ಈ ದುರಂತ ನಡೆದಿದೆ ಎಂದು ತಿಳಿದುಬಂದಿದೆ.. ಮಧ್ಯಪ್ರದೇಶದ ಸಾಗರ್‌ ಜಿಲ್ಲೆಯಲ್ಲಿ ಈ ದುರಂತ ನಡೆದಿದೆ..

ಇದನ್ನೂ ಓದಿ; ಬ್ಯಾಂಕ್‌ ಕಳುವಿಗೆ ಯತ್ನಿಸಿ ವಿಫಲವಾದ ಮಹಿಳೆ!

ಮೃತಪಟ್ಟ ಮಕ್ಕಳು ಎಲ್ಲರೂ 10-14 ವರ್ಷದೊಳಗಿನವರು ಎಂದು ತಿಳಿದುಬಂದಿದೆ.. ಎಲ್ಲಾ ಮಕ್ಕಳೂ ದೇವಸ್ಥಾನದ ಪಕ್ಕ ಶೆಡ್‌ ಹಾಕಿಕೊಂಡು ಶಿವಲಿಂಗ ಮಾಡುತ್ತಿದ್ದರು.. ಆದ್ರೆ ಅವರು ಹಾಕಿದ್ದ ಶೆಡ್‌ ಪಕ್ಕದ ದೇಗುಲದ ಗೋಡೆ ಶಿಥಿಲಗೊಂಡಿದ್ದರಿಂದ ಅದು ಕುಸಿದುಬಿದ್ದಿದೆ.. ಘಟನೆಯಲ್ಲಿ ಹಲವರು ಮಕ್ಕಳು ಗಾಯಗೊಂಡಿದ್ದಯ, ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.. ಗಾಯಾಳುಗಳನ್ನು ದಾಮೋಹ್‌ ಹಾಗೂ ಸಾಗರ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ..

ಇದನ್ನೂ ಓದಿ; ಸಿದ್ದರಾಮಯ್ಯ ಅವರೇ ಇನ್ನು 10 ತಿಂಗಳ ಸಿಎಂ ಆಗಿರಿ ನೋಡೋಣ; ಕುಮಾರಸ್ವಾಮಿ ಸವಾಲು!

ಮಕ್ಕಳು ಭಾಗವತ್‌ ಕಥಾಗಾಗಿ ಶಿವಲಿಂಗವನ್ನು ಸಿದ್ಧಪಡಿಸುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.. ಸರ್ಕಾರ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ.

Share Post