ಚೆಕ್ ಮೂಲಕ ಲಂಚ ಪಡೆಯುತ್ತಿದ್ದ ಅಧಿಕಾರಿ; ಲೋಕಾಯುಕ್ತರಿಂದ ಸೆರೆ
ಬೆಂಗಳೂರು; ಚೆಕ್ ಮೂಲಕ ಲಂಚ ಪಡೆಯುತ್ತಿದ್ದ ಅಧಿಕಾರಿಯೊಬ್ಬನನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ದಾಸಾನಪುರ ಕಂದಾಯ ನಿರೀಕ್ಷಕ ವಸಂತ್ ಹಾಗೂ ಖಾಸಗಿ ಚಾಲಕ ಸಿಕ್ಕಿಬಿದ್ದವರು.
ಇವರು ವ್ಯಕ್ತಿಯೊಬ್ಬರಿಂದ ಚೆಕ್ ಮೂಲಕ ಮೂರವರೆ ಲಕ್ಷ ರೂಪಾಯಿ ಪಡೆಯುತ್ತಿದ್ದರು. ಖಾಸಗಿ ಹೋಟೆಲ್ ಒಂದರಲ್ಲಿ ಹಣ ಪಡೆಯುತ್ತಿದ್ದಾಗ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಅಧಿಕಾರಿ ಖಾತೆ ಪೋಡಿ ಮಾಡಿಕೊಡಲು 28 ಲಕ್ಷ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ. ವಿಚಾರಣೆ ವೇಳೆ ಮನೆಯಲ್ಲಿ ಉಳಿದ ಹಣ ಇಟ್ಟಿರೋದಾಗಿ ಹೇಳಿದ್ದಾನೆ. ಅಧಿಕಾರಿಗಳು ಆತನ ಮನೆಯಲ್ಲಿ ಶೋಧ ನಡೆಸಿದಾಗ 9 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ.