Astrology

ಈ ವಾರ ಭವಿಷ್ಯ ಹೇಗಿದೆ..?; ಯಾವ ರಾಶಿಯವರಿಗೆ ಲಾಭ, ಯಾರಿಗೆ ತೊಂದರೆ..?

ಮೇಷ ರಾಶಿ;
ಈ ವಾರ ಮೇಷರಾಶಿಯವರಿಗೆ ತುಂಬಾ ಶುಭಫಲಗಳು ಸಿಗಲಿವೆ.. ಶುಭ ಗ್ರಹಗಳ ಸಂಚಾರ ಈ ರಾಶಿಯವರು ತುಂಬಾ ಅನುಕೂಲಕರ ವಾತಾವರಣ ನಿರ್ಮಾಣ ಮಾಡುತ್ತವೆ.. ವ್ಯಾಪಾರ, ವ್ಯವಹಾರಗಳಲ್ಲಿ ಉತ್ತಮ ಅಭಿವೃದ್ಧಿಯಾಗುತ್ತದೆ.. ಆಸ್ತಿ ವಿವಾದಗಳಿದ್ದರೆ ಅದಕ್ಕೆ ಪರಿಹಾರ ಸಿಗುತ್ತದೆ.. ಬೆಲೆಬಾಳುವ ಆಸ್ತಿ ನಿಮಗೆ ಬರುವ ಸಾಧ್ಯತೆ ಹೆಚ್ಚಿದೆ.. ಉದ್ಯೋಗ, ವ್ಯವಹಾರಗಳಲ್ಲಿ ನಿಮಗೆ ಸಾಕಷ್ಟು ಪ್ರಾಧಾನ್ಯತೆ ಸಿಗಲಿದೆ.. ಕಷ್ಟದಲ್ಲಿರುವ ನಿಮ್ಮ ಮಿತ್ರರಿಗೆ ನೀವು ಸಹಾಯವಾಗುತ್ತೀರಿ.. ಪ್ರಮುಖರ ಹಾಗೂ ಗಣ್ಯರ ಜೊತೆ ಸಂಪರ್ಕಗಳು ಹೆಚ್ಚಾಗುತ್ತವೆ.. ಆರೋಗ್ಯ ಸಮಸ್ಯೆಗಳು ಕೂಡಾ ನಿವಾರಣೆಯಾಗುತ್ತವೆ.. ವೃಥಾ ಖರ್ಚು ಮಾಡುವುದನ್ನು ಕಡಿಮೆ ಮಾಡಿಕೊಳ್ಳಬೇಕು.. ಪ್ರಯಾಣ ಮಾಡುವಾಗ ಜಾಗ್ರತೆಯಾಗಿರುವುದು ಒಳ್ಳೆಯದು..

ವೃಷಭ ರಾಶಿ;
ಈ ರಾಶಿಯಲ್ಲಿ ಬುಧ, ಗುರು, ಶುಕ್ರ ಗ್ರಹಳು ತುಂಬಾ ಬಲವಾಗಿವೆ.. ಹೀಗಾಗಿ ವೃಷಭ ರಾಶಿಯವರು ಹಿಡಿದ ಕೆಲಸಗಳೆಲ್ಲಾ ಚೆನ್ನಾಗಿ ಆಗುತ್ತವೆ.. ಎಲ್ಲಾ ವ್ಯವಹಾರಗಳೂ ಕೂಡಾ ಲಾಭದಾಯಕವಾಗಿರುತ್ತವೆ.. ವ್ಯವಹಾರದಲ್ಲಿ ಆದಾಯ ದಪ್ಪಟ್ಟಾಗುತ್ತದೆ.. ಬೇಡವೆಂದರೂ ನಿಮಗೆ ಈ ವಾರ ಹಣಕಾಸು ಹರಿದುಬರುತ್ತದೆ.. ಕುಟುಂಬಕ್ಕೆ ಹೆಚ್ಚು ಖರ್ಚುಗಳಾಗುವುದರಿಂದ ಸ್ವಲ್ಪ ತೊಂದರೆಯೂ ಆಗಬಹುದು.. ಉದ್ಯೋಗಿಗಳಾಗಿದ್ದರೆ ಸ್ವಲ್ಪ ಒತ್ತಡ ಕೂಡಾ ಹೆಚ್ಚಿರುತ್ತದೆ.. ವೈಯಕ್ತಿಕ ಸಮಸ್ಯೆಗಳಿದ್ದರೆ ಈ ವಾರ ಅದಕ್ಕೆ ಪರಿಹಾರ ಸಿಗುತ್ತದೆ.. ಆದಷ್ಟು ಶುಭ ಸುದ್ದಿಗಳು ಬರಲಿವೆ..

ಮಿಥುನ ರಾಶಿ;
ಈ ರಾಶಿಯಲ್ಲಿ ವ್ಯಯ ಸ್ಥಾನದಲ್ಲಿ ಗುರು ಹಾಗೂ ಕುಜ ಗ್ರಹಗಳಿವೆ.. ಹೀಗಾಗಿ ಕೆಲಸಗಳ ಒತ್ತಡ ತುಂಬಾನೇ ಇರುತ್ತದೆ.. ಉದ್ಯೋಗದಲ್ಲಿ ಒತ್ತಡದ ಜೊತೆಗೆ ಕುಟುಂಬದಲ್ಲಿನ ಜವಾಬ್ದಾರಿಗಳೂ ಕೂಡಾ ಹೆಚ್ಚಾಗುತ್ತವೆ.. ಆರ್ಥಿಕ ವಿಷಯಗಳಲ್ಲಿ ಈ ವಾರ ಅನುಕೂಲಕರವಾಗಿಯೇ ಇರುತ್ತದೆ.. ವ್ಯವಹಾರ, ವ್ಯಾಪಾರದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ನಿಮ್ಮದಾಗಲಿದೆ.. ಬಂಧು-ಬಳಗದಿಂದ ಒತ್ತಡ, ಹೀಯಾಳಿಸುವ ಮಾತುಗಳು ಬರುತ್ತವೆ.. ವಾರದ ಕೊನೆಯಲ್ಲಿ ಕುಟುಂಬದ ಜೀವನ ಶಾಂತವಾಗಿ ನಡೆಯುತ್ತದೆ.. ತುಂಬಾ ಕಾಲದಿಂದ ಬರಬೇಕಿದ್ದ ಹಣ ವಾಪಸ್‌ ಬಂದು ಅವಶ್ಯಕ ಕೆಲಸಗಳು ಮಾಡುವುದಕ್ಕೆ ಅನುಕೂಲವಾಗುತ್ತದೆ..

ಕರ್ಕಾಟಕ ರಾಶಿ;
ನಾಲ್ಕು ಗ್ರಹಗಳು ಈ ರಾಶಿಯವರಿಗೆ ಅನುಕೂಲಕರವಾಗಿವೆ.. ಹೀಗಾಗಿ ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದರಲ್ಲಿ ಗೆಲುವು ನಿಮ್ಮದಾಗಲಿದೆ.. ಉದ್ಯೋಗದ ಸ್ಥಳದಲ್ಲಿ ನಿಮ್ಮ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಪಡೆಯುತ್ತೀರಿ.. ವೈಯಕ್ತಿಕ ಸಮಸ್ಯೆಗಳೆಲ್ಲಾ ಈ ವಾರದಲ್ಲಿ ನಿವಾರಣೆಯಾಗುತ್ತವೆ.. ವೃತ್ತಿ, ವ್ಯಾಪಾರ ವ್ಯವಹಾರಗಳಲ್ಲಿ ಒಳ್ಳೆಯ ವಾತಾವರಣವಿದೆ.. ನೀವು ತೆಗೆದುಕೊಳ್ಳುವ ಕೆಲನ ನಿರ್ಣಯ ನಿಮಗೆ ದೊಡ್ಡ ಲಾಭವನ್ನು ತಂದುಕೊಡುತ್ತವೆ.. ಪ್ರಯಾಣ ಮಾಡುವುದರಿಂದ ಸಾಕಷ್ಟು ಅನುಕೂಲಗಳು ನಿಮ್ಮದಾಗಲಿವೆ..

ಸಿಂಹ ರಾಶಿ;
ಈ ರಾಶಿಯವರಿಗೆ ಈ ವಾರ ಅನೇಕ ಶುಭ ಫಲಗಳು ಲಭಿಸಲಿವೆ.. ಯಾವುದೇ ಕೆಲಸಕ್ಕೆ ಕೈಹಾಕಿದರೂ ಜಯ ನಮ್ಮದಾಗುತ್ತದೆ.. ಎಲ್ಲಾ ಪ್ರಯತ್ನಗಳೂ ಸಫಲವಾಗುತ್ತಾ ಹೋಗುತ್ತವೆ.. ವೃತ್ತಿಯಲ್ಲಿ ನಿಮ್ಮ ಪ್ರಧಾನ್ಯತೆ ಹೆಚ್ಚಾಗುತ್ತಾ ಹೋಗುತ್ತದೆ.. ಯಾವುದೇ ಕೆಲಸದಲ್ಲಿ ಜಯ ನಿಮ್ಮದಾಗುತ್ತಾ ಹೋಗುತ್ತದೆ.. ವ್ಯಾಪಾರದಲ್ಲಿ ನೀವು ಹೊಸ ಪ್ರಯತ್ನಗಳನ್ನು ಮಾಡಿದರೆ ಅದರಲ್ಲೂ ಪ್ರಗತಿ ಕಾಣಲಿದ್ದೀರಿ.. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗುವ ಸಾಧ್ಯತೆಯೂ ಇರುತ್ತವೆ..

ಕನ್ಯಾ ರಾಶಿ;
ಭಾಗ್ಯ ಸ್ಥಾನದಲ್ಲಿ ಗುರು ಸಂಚಾರ ಮಾಡುತ್ತಿದ್ದಾನೆ. ಹೀಗಾಗಿ ಕನ್ಯಾ ರಾಶಿಯವರಿಗೆ ಆದಾಯಕ್ಕೆ ತೊಂದರೆ ಇರುವುದಿಲ್ಲ.. ಅನೇಕ ರೀತಿಯಲ್ಲಿ ನಿಮಗೆ ಲಾಭಗಳು ಬರಲಿವೆ.. ಆರ್ಥಿಕವಾಗಿ ಸಾಕಷ್ಟು ವೃದ್ಧಿಯಾಗುತ್ತೀರಿ.. ವ್ಯಾಪಾರ ವ್ಯವಹಾರಗಳಲ್ಲಿ ನಿಮ್ಮ ಊಹೆಗೂ ಮೀರಿ ಆದಾಯ ಸಿಗಲಿದೆ.. ಅಂದುಕೊಂಡ ಕೆಲಸಗಳೆಲ್ಲಾ ನೆರವೇರುತ್ತವೆ.. ವಯಕ್ತಿಕ ಸಮಸ್ಯೆಗಳಿಂದ ವಿಮುಕ್ತಿ ಪಡೆಯುತ್ತೀರಿ.. ನಿರುದ್ಯೋಗಿಗಳು ಸಾಕಷ್ಟು ಅವಕಾಶ ಸಿಗಲಿವೆ.. ಆರೋಗ್ಯದ ಮೇಲೆ ಆದಷ್ಟು ಗಮನ ಕೊಡುವುದು ಒಳ್ಳೆಯದು.. ಲಾಭ ಬರುತ್ತಿದೆ ಎಂದು ಆರೋಗ್ಯದ ಕಡೆ ಗಮನ ಕೊಡದೇ ಇದ್ದರೆ ಮುಂದೊಂದು ದಿನ ದೊಡ್ಡ ಸಮಸ್ಯೆಗೆ ದಾರಿ ಮಾಡಿಕೊಡಬಹುದು.

ತುಲಾ ರಾಶಿ;
ತುಲಾ ರಾಶಿಯವರಿಗೆ ಈ ವಾರದಲ್ಲಿ ಆಕಸ್ಮಿಕ ಧನಲಾಭವಾಗಲಿದೆ.. ಯಾವುದೇ ಕೆಲಸ ಮಾಡಿದರೂ ಯಶಸ್ಸು ಇದ್ದೇ ಇರುತ್ತದೆ.. ಬರಬೇಕಾದ ಹಣ ನಿಮ್ಮನ್ನು ಹುಡುಕಿಕೊಂಡು ಬರಲಿದೆ.. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಾಧ್ಯತೆ ಹೆಚ್ಚಿದೆ.. ಹೀಗಾಗಿ ಈ ವಾರ ಕೆಲಸಕ್ಕಾಗಿ ಪ್ರಯತ್ನ ಪಟ್ಟರೆ ಫಲ ನಮ್ಮದಾಗುವುದರಲ್ಲಿ ಅನುಮಾನವಿಲ್ಲ. ಇಷ್ಟವಾದ ವ್ಯಕ್ತಿ ಜೊತೆ ಮದುವೆ ಸಂಬಂಧ ಖಾಯಂ ಆಗಲಿದೆ.

ವೃಶ್ಚಿಕ ರಾಶಿ;
ಆರ್ಥಿಕ ಹಾಗೂ ವ್ಯವಹಾರದಲ್ಲಿನ ನಷ್ಟದಂತಹ ಸಮಸ್ಯೆಗಳಿಂದ ಮುಕ್ತಿ ಹೊಂದುವ ಸಮಯವಿದೆ.. ಸ್ವಲ್ಪ ಕಾಯುವ ಮನಸ್ಥಿತಿ ಬೆಳೆಸಿಕೊಳ್ಳಬೇಕು.. ವಾರದ ಕೊನೆಯಲ್ಲಿ ಆದಷ್ಟು ಸಮಸ್ಯೆಗಳಿಂದ ವಿಮುಕ್ತಿ ಸಿಕ್ಕಿ ಮಾನಸಿಕ ನೆಮ್ಮದಿ ನಿಮ್ಮದಾಗಲಿದೆ.. ಪ್ರಮುಖ ವ್ಯಕ್ತಿಗಳು, ಗಣ್ಯರ ಜೊತೆ ಪರಿಚಯಗಳು ಹೆಚ್ಚಾಗಿ, ಇದರಿಂದ ನಿಮ್ಮ ವ್ಯಾಪಾರ ವ್ಯವಹಾರಗಳಿಗೆ ಅನುಕೂಲವಾಗಲಿದೆ.. ಹಣದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಬೆರೆಯವರ ಮಾತನ್ನು ಕೇಳೋದಕ್ಕೆ ಹೋಗಬೇಡಿ…

ಧನುರಾಶಿ:
ತೃತೀಯ ಸ್ಥಾನದಲ್ಲಿ ಶನಿ ಇದ್ದಾನೆ.. ಭಾಗ್ಯ ಸ್ಥಾನದಲ್ಲಿ ಬುಧ, ಶುಕ್ರರಿದ್ದಾರೆ.. ಇದರಿಂದಾಗಿ ವೃತ್ತಿ, ಉದ್ಯೋಗದಲ್ಲಿ ಕೆಲ ಶುಭ ಸುದ್ದಿಗಳು ಬರಲಿವೆ.. ಕುಟುಂಬದಲ್ಲಿ ನೆಮ್ಮದಿ, ಶಾಂತಿ ನೆಲೆಸಲಿದೆ.. ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯುವ ಸಾಧ್ಯತೆಯೇ ಹೆಚ್ಚು.. ನೆನೆಗುದಿಗೆ ಬಿದ್ದಿದ್ದ ಕೆಲ ಮುಖ್ಯವಾದ ಕೆಲಸಗಳು ಕೂಡಾ ಆಗಲಿವೆ.. ಆದಷ್ಟು ಈ ವಾರ ನಿಮಗೆ ಒಳ್ಳೆಯ ವಾರ.

ಮಕರ ರಾಶಿ;
ಕೆಲಸದಲ್ಲಿ ಹೆಚ್ಚು ಶ್ರಮ ಹಾಗೂ ಒತ್ತಡ ಇರಬಹುದು.. ಉದ್ಯೋಗದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳ ಜೊತೆಗೆ ಸೌಮ್ಯವಾಗಿ ವರ್ತಿಸುವುದು ಒಳ್ಳೆಯದು.. ಯಾವುದೇ ವಿಷಯದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ.. ಕೋಪದಲ್ಲಿ ತೆಗೆದುಕೊಳ್ಳುವ ನಿರ್ಧಾರದಿಂದ ನಿಮಗೆ ನಷ್ಟವೇ ಹೆಚ್ಚಿರುತ್ತದೆ.. ವೃತ್ತಿ ಜೀವನದಲ್ಲಿ ನಿಮಗೆ ಪ್ರಗತಿ ಅಷ್ಟಕ್ಕಷ್ಟೇ.. ವ್ಯಾಪಾರ, ವ್ಯವಹಾರದಲ್ಲಿ ಆದಾಯ ಹೆಚ್ಚಾಗುತ್ತದೆ..

ಕುಂಭ ರಾಶಿ;
ಗೃಹ ಹಾಗೂ ವಾಹನ ಯೋಗವಿದೆ.. ಹೊಸ ಮನೆ ಖರೀದಿ ಮಾಡಬೇಕೆಂದಿದ್ದವರು, ಹೊಸ ಮನೆ ಕಟ್ಟಬೇಕೆಂದಿದ್ದವರಿಗೆ ಇದು ಅನುಕೂಲಕರ ಸಮಯ.. ದಾಂಪತ್ಯ ಜೀವನ ಕೂಡಾ ಆದಷ್ಟು ಸುಖಮಯವಾಗಿರುತ್ತದೆ.. ನಿಮ್ಮ ಆರ್ಥಿಕ ಪರಿಸ್ಥಿತಿ ಆದಷ್ಟು ಸ್ಥಿರವಾಗಿರುತ್ತದೆ.. ಪ್ರತಿಯೊಂದು ಪ್ರಯತ್ನದಲ್ಲಿ ನೀವು ಜಯ ಸಾಧಿಸುತ್ತೀರಿ.. ಮನೆಯಲ್ಲಿ ಶುಭಕಾರ್ಯಗಳು ಜರುಗಲಿವೆ.. ಬಂಧು-ಮಿತ್ರರಿಗೆ ಸಹಾಯ ಮಾಡುತ್ತೀರಿ.. ವ್ಯಾಪಾರ-ವ್ಯವಹಾರಗಳು ತೃಪ್ತಿಕರವಾಗಿ ಸಾಗಲಿವೆ..

ಮೀನ ರಾಶಿ;
ಗುರು ತೃತೀಯ ಸ್ಥಾನದಲ್ಲಿ ಕುಜನ ಜೊತೆ ಇದ್ದಾನೆ.. ಹೀಗಾಗಿ ಯಾವುದೇ ಸಮಸ್ಯೆ ಎದುರಾದರೂ ನಿಮಗೆ ಹೆಚ್ಚು ಸಮಸ್ಯೆಯಾಗೋದಿಲ್ಲ.. ಆದ್ರೆ ಇತರ ಗ್ರಹಗಳಿಂದಾಗಿ ಪ್ರತಿಕೂಲ ವಾತಾವರಣ ನಿರ್ಮಾಣವಾಗುತ್ತದೆ.. ಇದರಿಂದ ಒಂದಷ್ಟು ಒತ್ತಡ, ಶ್ರಮ ಹೆಚ್ಚಾಗುತ್ತದೆ.. ವೃತ್ತಿ ಹಾಗೂ ಉದ್ಯೋಗದಲ್ಲೂ ಕೂಡಾ ಕೆಲಸದ ಒತ್ತಡ ಜಾಸ್ತಿಯಾಗಲಿದೆ.. ಆದಷ್ಟು ತೊಂದರೆಗಳಿದ್ದರೂ ಸಮಾಧಾನದಿಂದ ಕೆಲಸ ಮಾಡಿದರೆ ಒಳ್ಳೆಯದು..

Share Post