BengaluruCinemaHealth

ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನಾ ಅಂತಿಮ ದರ್ಶನ; ಮಧ್ಯಾಹ್ನ ಅಂತ್ಯಕ್ರಿಯೆ

ಬೆಂಗಳೂರು; ಬ್ಯಾಂಕಾಕ್‌ನಲ್ಲಿ ಹೃದಯಾಘಾತಕ್ಕೆ ಬಲಿಯಾದ ನಟ ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನಾ ಅವರ ಪಾರ್ಥಿವ ಶರೀರನ್ನು ಅವರ ತವರು ಮಲ್ಲೇಶ್ವರದ ಬಿ.ಕೆ.ಶಿವರಾಂ ನಿವಾಸ ಬಳಿ ಇಡಲಾಗಿದೆ. ಚಿತ್ರರಂಗದ ಗಣ್ಯರು, ಸಂಬಂಧಿಕರು, ರಾಜಕಾರಣಿಗಳು ಪಾರ್ಥೀವ ಶರೀರದ ದರ್ಶನ ಪಡೆಯುತ್ತಿದ್ದಾರೆ. ಈ ವೇಳೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಪಂದನಾ ಅವರ ಮಗ ಶೌರ್ಯ ಕೂಡಾ ದಿಕ್ಕುತೋಚದವನಂತೆ ಕೂತಿದ್ದಾನೆ. ವಿಜಯ್‌ ರಾಘವೇಂದ್ರ ಅವರು ಕೂಡಾ ದುಖಃದಮಡುವಿನಲ್ಲಿದ್ದಾರೆ. ಅವರನ್ನು ಎಲದ್ಲರೂ ಸಂತೈಸುತ್ತಿದ್ದಾರೆ.

ಇಂದು ಮಧ್ಯಾಹ್ನದವರೆಗೂ ಸಾರ್ವನಿಕ ದರ್ಶನ ಇರಲಿದೆ. ಮಧ್ಯಾಹ್ನ 2.30 ರಿಂದ 3-30ರೊಳಗೆ ಹರಿಶ್ಚಂದ್ರ ಘಾಟ್‌ನಲ್ಲಿ ಸ್ಪಂದನಾ ಅವರ ಅಂತ್ಯಕ್ರಿಯೆ ನಡೆಯಲಿದೆ. ಈಡಿಗ ಬಿಲ್ಲವ ಸಂಪ್ರದಾಯದಂತೆ ಸ್ಪಂದನಾ ಅವತ ಅಂತ್ಯಕ್ರಿಯೆ ನೆರವೇರಲಿದೆ ಎಂದು ಸ್ಪಂದನಾ ಕುಟುಂಬದವರು ತಿಳಿಸಿದ್ದಾರೆ.

Share Post