DistrictsLifestyle

ದಸರಾ ಗಜಪಡೆ ಮೊದಲ ಪಟ್ಟಿ ರೆಡಿ; ಸೆಪ್ಟೆಂಬರ್‌ 1ಕ್ಕೆ ಗಜ ಪಯಣ

ಮೈಸೂರು; ಅಕ್ಟೋಬರ್‌ ನಲ್ಲಿ ನಡೆಯಲಿರುವ ಮೈಸೂರು ದಸರಾ ಉತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದೆ. ಈ ಬಾರಿ ಮೈಸೂರು ದಸರಾ ಉತ್ಸವವನ್ನು ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಮಾಡಬೇಕೆಂದು ಸರ್ಕಾರ ನಿರ್ಧರಿಸಿದೆ. ಈಗಾಗಲೇ ಇದಕ್ಕಾಗಿ ಮೀಟಿಂಗ್‌ ಕೂಡಾ ಮಾಡಲಾಗಿದೆ. ಇದಾದ ನಂತರ ದಸರಾಗೆ ಸಿದ್ಧತೆಗಳು ಶುರುವಾಗಿವೆ. ಇತ್ತ ಅರಣ್ಯಾಧಿಕಾರಿಗಳು ಜಂಬೂಸವಾರಿಗಾಗಿ ಆನೆಗಳ ಪಟ್ಟಿ ಮಾಡುತ್ತಿದ್ದಾರೆ. ಸದ್ಯ 9 ಆನೆಗಳ ಪಟ್ಟಿ ಸಿದ್ಧವಾಗಿದೆ.

ಮೊದಲ ಹಂತದಲ್ಲಿ 9 ಆನೆಗಳನ್ನು ಸೆಪ್ಟೆಂಬರ್‌  1 ಮೈಸೂರಿಗೆ ಕರೆತರಲಾಗುತ್ತದೆ. ಸುಮಾರು ಒಂದು ತಿಂಗಳ ಕಾಲ ಆ ಆನೆಗಳಿಗೆ ಜಂಬೂ ಸವಾರಿಗಾಗಿ ತಯಾರಿ ಮಾಡಿಸಲಾಗುತ್ತದೆ. ವೀರನಹೊಸಹಳ್ಳಿಯಿಂದ ಅರಮನೆಗೆ ಆನೆಗಳನ್ನು ಕರೆತರಲಾಗುತ್ತದೆ. ಮೊದಲ ಹಂತದಲ್ಲಿ ಬರುವ ಆನೆಗಳು ಹಾಗೂ ಅವಿರುವ ಆನೆ ಶಿಬಿರಗಳ ವಿವರ ಈ ಕೆಳಗಿನಂತೆ ಇದೆ.

ನಾಗರಹೊಳೆ ಬಳ್ಳೆ ಶಿಬಿರ – ಅರ್ಜುನ

ಬಂಡೀಪುರದಲ್ಲಿನ ರಾಮಪುರ ಶಿಬಿರ – ಪಾರ್ಥಸಾರಥಿ

ಭೀಮನಕಟ್ಟೆ ಶಿಬಿರ – ವರಲಕ್ಷ್ಮೀ

ನಾಗರಹೊಳೆ ಶಿಬಿರ – ಅಭಿಮನ್ಯು, ಭೀಮ, ಮಹೇಂದ್ರ

ದುಬಾರೆ ಶಿಬಿರ – ವಿಜಯ

 

Share Post