ಮಾನವೀಯ ಮೌಲ್ಯಗಳನ್ನು ಕಸಿದ ಕೊರೊನಾ: ಅನಾಥವಾದ ತಾಯಿಯ ಹೆಣ
ಬೆಂಗಳೂರು: ಹೆತ್ತಮ್ಮನ ಋಣ ಎಷು ಕೋಟಿ ಕೊಟ್ಟರೂ ತೀರಿಸಲಾಗದು ಅಂತಾರೆ. ಆದ್ರೆ ಹಣ, ಅಂತಸ್ತು, ಐಶ್ವರ್ಯದ ಮುಂದೆ ಎಲ್ಲವೂ ಮಣ್ಣು ಪಾಲಾಗುತ್ತಿರುವ ದಿನಗಳಲ್ಲಿ ಕೊರೊನಾ ಮಹಾಮಾರಿ ಕೂಡ ಇದರ ಸಾಲಿಗೆ ಸೇರಿದೆ. ಮಹಾಮಾರಿ ಸೋಂಕಿಗೆ ಬಲಿಯಅದವರೆಷ್ಟೋ ಅದರಲ್ಲಿ ಅನಾಥವಾಗಿ ಚಿತೆಗೆ ಸೇರಿಸವರ ಸಂಕ್ಯೆ ಕೂಡ ಕಡಿಮೆಯೇನಲ್ಲ. ಸೋಂಕು ತಗುಲಿರುವ ವಿಚಾರ ಕೇಳಿದ್ರೆ ಸೋಶಿಯಲ್ ಡಿಸ್ಟೆನ್ಸ್ ಹೆಸರಲ್ಲಿ ಎಲ್ಲರೂ ದೂರ ಉಳಿದಿದ್ದಾರೆ. ಕೊನೆಗೆ ಸತ್ತರೂ ಕೂಡ ಕಾರ್ಪೊರೇಷನ್ ಅವರು ಮಣ್ಣು ಪಾಡುವ ಪರಿಸ್ಥಿತಿ ಬಂದಿದೆ. ಇಂದು ನಡೆದಿರುವ ಪ್ರಸಂಗವೂ ಕೂಡ ಇದರ ಹೊರತಾಗಿಲ್ಲ.
ಮಂಡ್ಯ ಮೂಲದವರಾದ ಭಾಗ್ಯಲಕ್ಷ್ಮಿ ಎಂಬುವವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ತಮ್ಮ ತಾಯಿ ಸಾವನ್ನಪ್ಪಿರುವ ವಿಚಾರವನ್ನು ಆಸ್ಪತ್ರೆಯವರು ಭಾಗ್ಯಲಕ್ಷ್ಮಿ ಮಗಳಿಗೆ ಕರೆ ಮಾಡಿ ತಿಳಿಸಿದ್ರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ತಾಯಿ ಸಾವನ್ನಪ್ಪಿ ಒಂದೂವರೆ ದಿನ ಕಳೆದರೂ ನೋಡಲು ಸಹ ಬಾರದ ಮಗಳಿಗಾಗಿ ಕಾದು ಪ್ರಯೋಜನವಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಅಂತ್ಯಕ್ರಿಯೆ ಮಾಡಲು ಮುಂದಾಗಿದ್ದಾರೆ. ಹೆಬ್ಬಾಳ ಚಿರಶಾಂತಿ ಧಾಮದಲ್ಲಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡಿದ್ದಾರೆ. ಹೊತ್ತು ಹೆತ್ತು ಸಾಕಿದ ತಾಯಿಯನ್ನು ಕೊನೆ ಸಲ ನೋಡಲು ಬಾರದ ಮಗಳ ಬಗ್ಗೆ ಏನನ್ನಬೇಕೋ ತಿಳಿಯುತ್ತಿಲ್ಲ..ಮಕ್ಕಳಿದ್ದೂ ಅನಾಥವಾಗಿ ಮಣ್ಣು ಸೇರುತ್ತಿರುವ ಭಾಗ್ಯಲಕ್ಷ್ಮಿ ಅವರ ಸಾವು ದುರಂತವೇ ಸರಿ.