CinemaNationalPolitics

ಖ್ಯಾತ ತಮಿಳು ನಟ ವಿಜಯ್ ರಾಜಕೀಯ ಪ್ರವೇಶ; ಹೊಸ ಪಕ್ಷ ಘೋಷಣೆ!

ಚೆನ್ನೈ; ತಮಿಳಿನ ಮತ್ತೊಬ್ಬ ಖ್ಯಾತ ನಟ ವಿಜಯ್‌ ರಾಜಕೀಯಕ್ಕೆ ಧುಮುಕಿದ್ದಾರೆ. ಅವರು ಇಂದು ತಮ್ಮ ಹೊಸ ಪಕ್ಷ ಘೋಷಣೆ ಮಾಡಿದ್ದು, ಅದಕ್ಕೆ ʻತಮಿಳಗ ವಿಟ್ರಿ ಕಜಂʼ ಎಂದು ಹೆಸರಿಟ್ಟಿದ್ದಾರೆ. ತಮಿಳುನಾಡಿನಲ್ಲಿ 2026ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸೋದಾಗಿ ವಿಜಯ್‌ ಹೇಳಿಕೊಂಡಿದ್ದಾರೆ.

ವಿಜಯ್‌ ಅವರು ಇತ್ತೀಚೆಗಷ್ಟೇ 200 ಜನ ಸದಸ್ಯರ ಸಭೆ ನಡೆಸಿದ್ದರು. ಅನಂತರ ರಾಜಕೀಯ ಪಕ್ಷದ ಹೆಸರಿಗಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ಇದೀಗ ʻತಮಿಳಗ ವಿಟ್ರಿ ಕಜಂʼ ಹೆಸರಿಗೆ ಕೇಂದ್ರ ಚುನಾವಣಾ ಆಯೋಗ ಒಪ್ಪಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಆ ಹೆಸರನ್ನು ಘೋಷಣೆ ಮಾಡಲಾಗಿದೆ.

ʻತಮಿಳಗ ವಿಟ್ರಿ ಕಜಂʼ ಎಂದರೆ ತಮಿಳಿಗನ ಯಶಸ್ಸಿನ ಕಾಲ ಎಂದರ್ಥ ಎಂದು ತಿಳಿದುಬಂದಿದೆ. ಲೋಕಸಭಾ ಚುನಾವಣೆಯಲ್ಲಿ ನಾವು ಸ್ಪರ್ಧೆ ಮಾಡೋದಿಲ್ಲ. ಜೊತೆಗೆ ಯಾವ ಪಕ್ಷಕ್ಕೂ ಬೆಂಬಲ ಸೂಚಿಸೋದಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯೇ ನಮ್ಮ ಗುರಿ ಎಂದು ವಿಜಯ್‌ ಹೇಳಿಕೊಂಡಿದ್ದಾರೆ.

 

Share Post