Cinema

ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದ ಸ್ಪೈಡರ್‌ಮ್ಯಾನ್; ನೋ ವೇ ಹೋಮ್

ಮುಂಬೈ: ಭಾರಿ ನಿರೀಕ್ಷೆ ಹುಟ್ಟಿಸಿರುವ ‘ಸ್ಪೈಡರ್‌ಮ್ಯಾನ್; ನೋ ವೇ ಹೋಮ್’ ಸಿನಿಮಾ ಕೊನೆಗೂ ಬಿಡುಗಡೆ ಆಗಿದೆ. ಭಾರತದಲ್ಲಿ ಡಿಸೆಂಬರ್ 16ಕ್ಕೆ ತೆರೆ ಕಾಣಲಿದೆ. ಭಾರತದಲ್ಲಿ ‘ಸ್ಪೈಡರ್‌ಮ್ಯಾನ್; ನೋ ವೇ ಹೋಮ್’ ಸಿನಿಮಾ ಬಿಡುಗಡೆ ಆಗುವ ಮುನ್ನವೇ ದಾಖಲೆಯೊಂದನ್ನು ಬರೆದಿದೆ. ಅತಿ ಹೆಚ್ಚು ಪ್ರೀ ಬುಕಿಂಗ್ ಆದ ಹಾಲಿವುಡ್ ಸಿನಿಮಾ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಈ ಸಿನಿಮಾ ಪಡೆದುಕೊಂಡಿದೆ.
2019 ರಲ್ಲಿ ಬಿಡುಗಡೆ ಆಗಿದ್ದ ಮಾರ್ವೆಲ್‌ನ ‘ಅವೆಂಜರ್ಸ್; ಎಂಡ್ ಗೇಮ್’ ಸಿನಿಮಾ ಭಾರತದಲ್ಲಿ ಅತಿ ಹೆಚ್ಚು ಪ್ರೀ ಬುಕಿಂಗ್ ಆಗಿದ್ದ ಹಾಲಿವುಡ್ ಸಿನಿಮಾ ಎನಿಸಿಕೊಂಡಿತ್ತು. ಅದರ ಬಳಿಕ ಇದೀಗ ‘ಸ್ಪೈಡರ್‌ಮ್ಯಾನ್; ನೋ ವೇ ಹೋಮ್’ ಸಿನಿಮಾ ಎರಡನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

2019 ರಲ್ಲಿ ಬಿಡುಗಡೆ ಆಗಿದ್ದ ಮಾರ್ವೆಲ್‌ನ ‘ಅವೇಂಜರ್ಸ್; ಎಂಡ್ ಗೇಮ್’ ಸಿನಿಮಾದ 14 ಲಕ್ಷ ಟಿಕೆಟ್‌ಗಳು ಮೊದಲ 24 ಗಂಟೆಯಲ್ಲಿ ಮಾರಾಟವಾಗಿದ್ದವು. ಇದು ಈವರೆಗಿನ ದಾಖಲೆ ಆಗಿದೆ. ಪಿವಿಆರ್‌ ಒಂದೇ ‘ಸ್ಪೈಡರ್‌ಮ್ಯಾನ್; ನೋ ವೇ ಹೋಮ್’ ಸಿನಿಮಾದ 1.60 ಲಕ್ಷ ಟಿಕೆಟ್‌ ಅನ್ನು ಮೊದಲ 24 ಗಂಟೆಯಲ್ಲಿ ಮಾರಾಟ ಮಾಡಿದೆ, ಇದರಿಂದ ಸುಮಾರು 6.60 ಕೋಟಿ ಹಣ ಕಲೆಕ್ಷನ್ ಆಗಿದೆ. ಐನಾಕ್ಸ್ ಹಾಗೂ ಸಿನೆಪೊಲೀಸ್ 2.20 ಲಕ್ಷ ಟಿಕೆಟ್ ಮಾರಾಟ ಮಾಡಿವೆ.

Share Post