ಬಡವ ರಾಸ್ಕಲ್ ಆಗಿ ಬಂದ ಡಾಲಿ ಧನಂಜಯ್
ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ‘ಬಡವ ರಾಸ್ಕಲ್’ ಸಿನಿಮಾದ ಟ್ರೇಲರ್ ಇಂದು ಬಿಡುಗಡೆ ಆಗಿದ್ದು, ಲಾಂಗ್ ಹಾಗೂ ಎಣ್ಣೆ ಬಾಟಲಿ ಎರಡೂ ಹಿಡಿದು ಬಂದಿದ್ದಾರೆ ಡಾಲಿ ಧನಂಜಯ್.
‘ಟಗರು’, ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾದಲ್ಲಿ ಡಾಲಿ ಎಣ್ಣೆ ಬಾಟಲಿ ಹಿಡಿದಿದ್ದರು. ಜೊತೆಗೆ ಮಚ್ಚು ಸಹ ಕೈಯಲ್ಲಿತ್ತು. ‘ಬಡವ ರಾಸ್ಕಲ್’ ಸಿನಿಮಾದಲ್ಲಿಯೂ ಮಚ್ಚು ಹಾಗೂ ಎಣ್ಣೆ ರಿಪೀಟ್ ಆಗಿದೆಯಾದರೂ ಇಲ್ಲಿ ಅವಕ್ಕೆ ಬೇರೆಯದ್ದೇ ರೀತಿಯ ಪ್ರಾಶಸ್ತ್ಯತೆ ಇದೆ ಎಂಬುದು ಟ್ರೇಲರ್‌ನಿಂದ ಗೊತ್ತಾಗುತ್ತಿದೆ. ‘ಬಡವ ರಾಸ್ಕಲ್’ ಸಿನಿಮಾದಲ್ಲಿ ಹಾಸ್ಯ, ಆಕ್ಷನ್, ಭಾವುಕತೆ, ಪ್ರೀತಿ, ಪ್ರೇಮಿಯ ವೇದನೆ ಎಲ್ಲವೂ ಇದೆ ಎಂಬುದನ್ನು ಸಹ ಟ್ರೇಲರ್ ಹೇಳುತ್ತಿದೆ. ಬಿಡುಗಡೆ ಆಗಿರುವ ಟ್ರೇಲರ್, ಸಿನಿಮಾದ ಬಗ್ಗೆ ಸಾಕಷ್ಟು ಸುಳಿವುಗಳನ್ನೇ ಬಿಟ್ಟುಕೊಟ್ಟಿದೆ.