ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮದುವೇನೇ ಆಗಲ್ವಂತೆ; ಯಾಕೆ ಗೊತ್ತಾ..?
ಬೆಂಗಳೂರು; ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಇದೀಗ ಚಿತ್ರರಂಗಕ್ಕೆ ವಾಪಸ್ಸಾಗಿದ್ದಾರೆ. ಈ ನಡುವೆ ಅವರ ಮದುವೆ ವಿಚಾರ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಅದೇ ರೀತಿ ಬೆಂಗಳೂರಿನ ಕಾಲೇಜೊಂದರಲ್ಲಿ ನಡೆದ ಸಮಾರಂಭದಲ್ಲಿ ರಮ್ಯಾ ಭಾಗವಹಿಸಿದ್ದರು. ಈ ವೇಳೆ ವಿದ್ಯಾರ್ಥಿಯೊಬ್ಬ ಮದುವೆ ಯಾವಾಗ ಆಗ್ತೀರಾ.? ಎಂದು ಪ್ರಶ್ನೆ ಕೇಳಿದ್ದಾನೆ. ಅದಕ್ಕೆ ಮದುವೆ ಯಾಕೆ ಆಗಬೇಕು ಎಂದು ರಮ್ಯಾ ಮರು ಪ್ರಶ್ನೆ ಹಾಕಿದ್ದಾರೆ. ಅಷ್ಟೇ ಅಲ್ಲ, ಹ್ಯಾಪಿ ಆಗಿರೊದು ಅಥವಾ ಮದುವೆ ಎರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂದರೆ ನಾನು ಹ್ಯಾಪಿಯನ್ನೇ ಆಯ್ಕೆ ಮಾಡಿಕೊಳ್ಳುತ್ತೀನಿ ಎಂದು ಅವರು ಹೇಳಿದ್ದಾರೆ.
ಮದುವೆ ಯಾಕೆ ಆಗಬೇಕು ಎಂದು ರಮ್ಯಾ ಕೇಳಿದ್ದಕ್ಕೆ ವಿದ್ಯಾರ್ಥಿ ನೀವು ಮದುವೆ ಆಗಲೇಬೇಡಿ. ನಮಗೆ ಅದೇ ಬೇಕಿರೋದು ಎಂದು ಹೇಳಿದ್ದಾನೆ. ಆಗ ರಮ್ಯಾ ಮದುವೆ ಆಗಲೇಬಾರದು ಎಂದಲ್ಲ. ನನಗೆ ಒಳ್ಳೆಯ ಸೋಲ್‌ಮೇಟ್ ಸಿಕ್ಕರೆ ಕಂಡಿತ ಮದುವೆಯಾಗ್ತೀನಿ ಎಂದು ಹೇಳಿದ್ದಾರೆ.