Cinema

ಸುಧಾಮೂರ್ತಿ ಭೇಟಿಯಾದ ರಾಬರ್ಟ್‌ ಬೆಡಗಿ ಆಶಾ ಭಟ್‌

ಬೆಂಗಳೂರು; ಕನ್ನಡದ ರಾಬರ್ಟ್‌ ಚಿತ್ರದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಜೊತೆ ನಾಯಕ ನಟಿಯಾಗಿದ್ದ ಆಶಾ ಭಟ್‌ ದೆಹಲಿಯಲ್ಲಿ ಇನ್ಫೋಸಿಸ್‌ ಫೌಂಡೇಶನ್‌ನ ಸುಧಾ ಮೂರ್ತಿ ಅವರನ್ನು ಭೇಟಿಯಾಗಿ ಫೋಟೋ ತೆಗೆಸಿಕೊಂಡಿದ್ದಾರೆ. ಅದನ್ನು ಆಶಾಭಟ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಫೋಟೋ ವೈರಲ್‌ ಆಗುತ್ತಿದೆ. 

 

ಆಶಾ ಭಟ್‌ ಭರವಸೆಯ ನಟಿ. ಗಾಯಕಿಯಾಗಿಯೂ ಆಶಾ ಭಟ್‌ ಸಿನಿಪ್ರೇಮಿಗಳ ಮನಸ್ಸು ಗೆದ್ದಿದ್ದಾರೆ. ಅವರು ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದರು. ಈ ವೇಳೆ ಹೋಟೆಲ್‌ ಒಂದರನ್ನು ಸುಧಾಮೂರ್ತಿಯವರನ್ನು ಭೇಟಿಯಾಗಿ ಫೋಟೋ ತೆಗೆಸಿಕೊಂಡಿದ್ದರು. ಅದರನ್ನು ಆಶಾ ಭಟ್‌, ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

 

‘ಸುಧಾ ಮೂರ್ತಿ ಅವರು ಒಬ್ಬ ಶ್ರೇಷ್ಠ ಮಹಿಳೆ. ಅವರಿಂದ ಸದಾ ನಾನು ಸ್ಫೂರ್ತಿ ಪಡೆಯುತ್ತೇನೆ. ಅವರ ಗುಣ ಮತ್ತು ನಮ್ರತೆ ನನ್ನನ್ನು ಬೆರಗುಗೊಳಿಸುತ್ತದೆ ಎಂದು ನಟಿ ಆಶಾ ಭಟ್‌  ಬರೆದುಕೊಂಡಿದ್ದಾರೆ. ಆಶಾ, 2019ರಲ್ಲಿ ತೆರೆ ಕಂಡಿದ್ದ ‘ಜಂಗ್ಲಿ’ ಸಿನಿಮಾದ ಮೂಲಕ ಸಿನಿಮಾಗೆ ಪದಾರ್ಪಣೆ ಮಾಡಿದ್ದರು. ಸದ್ಯ ಅವರು ‘ಓರಿ ದೇವುಡ’ ಎಂಬ ತೆಲುಗು ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ.

Share Post