ಬುಡಕಟ್ಟು ಮಹಿಳೆಯನ್ನು ಕೊಂದು, ಶವದ ಮೇಲೆ ಅತ್ಯಾಚಾರ ಮಾಡಿದ ಪಾಪಿ..!
ಹೈದರಾಬಾದ್; ತೆಲಂಗಾಣದಲ್ಲಿ ಇಡೀ ಸಮಾಜವೇ ತಲೆತಗ್ಗಿಸುವಂತಹ ಕೃತ್ಯ ನಡೆದುಹೋಗಿದೆ. ಲೈಂಗಿಕಕ್ರಿಯೆಗೆ ಒಪ್ಪದ ಕಾರಣಕ್ಕಾಗಿ ಬುಡಕಟ್ಟ ಮಹಿಳೆಯೊಬ್ಬ ಕೊಂದ ಕಾಮುಕನೊಬ್ಬ, ಮೃತದೇಹದ ಮೇಲೆ ಅತ್ಯಾಚಾರವೆಸಗಿದ್ದಾರೆ. ಸೋಮವಾರ ರಾತ್ರಿ ಈ ಕೃತ್ಯ ಎಸಲಾಗಿದ್ದು. ತಡವಾಗಿ ಬೆಳಕಿಗೆ ಬಂದಿದೆ.
ಸೋಮವಾರ ಹೈದರಾಬಾದ್‌ಗೆ ಸಮೀಪದ ಚೌಟುಪ್ಪಲ್ ಎಂಬಲ್ಲಿ ಬುಡಕಟ್ಟು ಜನಾಂಗದ ಮಹಿಳೆಯನ್ನು ಕೊಂದು, ನಂತರ ಶವಸಂಭೋಗ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುತ್ತಿದ್ದ 28 ವರ್ಷದ ಆದಿವಾಸಿ ಮಹಿಳೆಯನ್ನು ಇ.ಹರೀಶ್ ಗೌಡ್ ಎಂಬಾತ ಕೊಂದು ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇಟ್ಟಿಗೆ ಗೂಡು ಬಳಿಯ ಗೋಡೌನ್‌ನಲ್ಲಿ ಬುಡಕಟ್ಟು ಜನಾಂಗದ ಮಹಿಳೆ ಒಬ್ಬಳೇ ಇದ್ದುದನ್ನು ನೋಡಿದ ಆರೋಪಿ ಆಕೆಯೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಗ ಆ ಮಹಿಳೆ ವಿರೋಧಿಸಿದ್ದಾಳೆ. ತನ್ನ ಪತಿಗೆ ತಿಳಿಸುವುದಾಗಿ ಎಚ್ಚರಿಸಿದ್ದಾಳೆ. ಆಗ ಆರೋಪಿ ಹರೀಶ್ ಆ ಮಹಿಳೆಯ ತಲೆಗೆ ದೊಣ್ಣೆಯಿಂದ ಹಡೆದಿದ್ದಾನೆ. ಬಲವಾಗಿ ಹೊಡೆದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಆಕೆ ಮೃತಪಟ್ಟಿದ್ದಾಳೆ. ಆಗ ಕಾಮುಕ ಶವದ ಮೇಲೆ ಅತ್ಯಾಚಾರ ಎಸಗಿ ಆಕೆಯ ಮೈಮೇಲಿದ್ದ ಬೆಳ್ಳಿ ವಸ್ತುಗಳೊಂದಿಗೆ ಪರಾರಿಯಾಗಿದ್ದ. ಸಂತ್ರಸ್ತೆಯ ಪತಿ ಗೋದಾಮಿಗೆ ಬಂದಾಗ ಪತ್ನಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು, ಪೊಲೀಸರಿಗೆ ಮಾಹಿತಿ ನೀಡಿದ್ದ. ನಾಗರಕರ್ನೂಲ್ ಜಿಲ್ಲೆಗೆ ಸೇರಿದ ದಂಪತಿ ಜೀವನೋಪಾಯಕ್ಕಾಗಿ ಚೌಟುಪ್ಪಲ್‌ಗೆ ವಲಸೆ ಬಂದಿದ್ದರು ಎಂದು ತಿಳಿದುಬಂದಿದೆ.