CinemaCrimeNational

ರಾಖಿ ಜೀವನದಲ್ಲಿ ನಾನು ಆರನೇ ಗಂಡು, ಏಳನೆಯವನಿಗೆ ಹುಡುಕ್ತಿದ್ದಾಳೆ; ಆದಿಲ್‌

ಮೈಸೂರು; ಬಾಲಿವುಡ್‌ ನಟಿ ರಾಖಿ ಸಾವಂತ್‌ ಜೀವನದಲ್ಲಿ ಪ್ರವೇಶ ಮಾಡಿದ ಗಂಡಸರಲ್ಲಿ ನಾನು ಆರನೇಯವನು. ಈಗ ಆಕೆ ಏಳನೇ ಗಂಡಸಿಗಾಗಿ ಹುಡುಕಾಟ ನಡೆಸುತ್ತಿದ್ದಾಳೆ ಎಂದು ಮೈಸೂರಿನ ಹುಡುಗ ಆದಿಪ್‌ ಹೇಳಿದ್ದಾರೆ.  ಜೈಲಿನಿಂದ ಬಿಡುಗಡೆಯಾದ ನಂತರ ಸುದ್ದಿಗೋಷ್ಠಿ ನಡೆಸಿರುವ ಆದಿಲ್‌, ರಾಖಿ ಸಾವಂತ್‌ ವಿರುದ್ದ ಹತ್ತು ಹಲವು ಆರೋಪಗಳನ್ನು ಮಾಡಿದ್ದಾರೆ.

ರಾಖಿ ಸಾವಂತ್‌ ಗೆಳತಿ ರಾಜಶ್ರೀ ಜೊತೆ ಆದಿಲ್‌ ಸುದ್ದಿಗೋಷ್ಠಿ ನಡೆಸಿದ್ದಾರೆ. ರಾಖಿ ಸಾವಂತ್‌ ಮದುವೆಯಾದ ಮೇಲೆ ನನಗೆ ಸಾಕಷ್ಟು ಹಿಂಸೆ ಕೊಟ್ಟರು. ನಾನು ಟ್ರ್ಯಾಪ್‌ನಲ್ಲಿ ಬಿದ್ದು ಒದ್ದಾಡುತ್ತಿದ್ದೇನೆ ಎಂಬ ರೀತಿಯಲ್ಲಿ ಆದಿಲ್‌ ಹೇಳಿದ್ದಾರೆ. ಇನ್ನು ರಾಜಶ್ರೀ ಕೂಡಾ ಹಲವು ಆರೋಪಗಳನ್ನು ಮಾಡಿದ್ದು, ದುಡ್ಡಿಗಾಗಿ ರಾಖಿ ಸಾವಂತ್‌ ಎಂತಹ ಕೆಲಸ ಬೇಕಾದರೂ ಮಾಡುತ್ತಾರೆ ಎಂದಿದ್ದಾರೆ.

 

Share Post