Cinema

ರಿಲೀಸ್‌ ಆಯ್ತು ಲವ್‌ ಮಾಕ್‌ಟೈಲ್‌ 2 ಚಿತ್ರದ ಟ್ರೈಲರ್‌

ಬೆಂಗಳೂರು : ಕೆಲವು ದಿನಗಳ ಹಿಂದಷ್ಟೇ ಮಿಲನಾ ಮತ್ತು ಡಾರ್ಲಿಂಗ್‌ ಕೃಷ್ಣ ಅವರು ಒಂದು ಫನ್ನಿ ವೀಡಿಯೋ ಮಾಡಿ ಬಿಟ್ಟಿದ್ದರು. ತಮ್ಮ ಸಿನಿಮಾ ಟ್ರೈಲರ್‌ ಬಿಡುಗಡೆ ಮಾಡುತ್ತಿದ್ದೇವೆ ಎಂಬುದಕ್ಕೆ ಒಂದು ಚಿಕ್ಕ ತುಣುಕನ್ನು ಬಿಟ್ಟಿದ್ದರು.

ಇಂದು ಲವ್‌ ಮಾಕ್‌ಟೈಲ್‌ 2 ಚಿತ್ರದ ಟ್ರೈಲರ್‌ ಬಿಡುಗಡೆಗೊಂಡಿದೆ. 2020 ರಲ್ಲಿ ತೆರೆಕಂಡಿದ್ದ ಲವ್‌ ಮಾಕ್ಟೈಲ್‌ ಸಿನಿಮಾದ ಸೀಕ್ವೆನ್ಸ್‌ ಇದಾಗಿದ್ದು ಪ್ರೇಕ್ಷಕರು ಸಖತ್ ಕಾತುರದಿಂದ ಕಾಯುತ್ತಿದ್ದಾರೆ. ಈಗ ಈ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ.

ಚಿತ್ರದಲ್ಲಿ ಡಾರ್ಲಿಂಗ್‌ ಕೃಷ್ಣ, ರಚೆಲ್‌ ಡೇವಿಡ್‌, ರಚನಾ ಇಂದರ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇನ್ನು ಈ ಚಿತ್ರಕ್ಕೆ ಮಿಲನಾ ನಾಗರಾಜ್‌ ಅವರು ಬಂಡವಾಳ ಹೂಡಿದ್ದಾರೆ. ನಿರ್ದೇಶನದ ಜವಾಬ್ದಾರಿಯನ್ನು  ಡಾರ್ಲಿಂಗ್‌ ಕೃಷ್ಣ ಹೊತ್ತಿದ್ದಾರೆ.

 

Share Post