BengaluruCrime

ಮಕ್ಕಳೆದುರೇ ಪತ್ನಿಯ ಗುಪ್ತಾಂಗಕ್ಕೆ ಚಾಕು ಇರಿತ; ರೌಡಿಶೀಟರ್‌ ಅರೆಸ್ಟ್‌

ಬೆಂಗಳೂರು; ರೌಡಿ ಶೀಟರ್‌ ಒಬ್ಬ ತನ್ನ ಪತ್ನಿಯ ಗುಪ್ತಾಂಗಕ್ಕೆ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ. ಅದೂ ಕೂಡಾ ಮಕ್ಕಳ ಎದುರೇ ಈ ಕೃತ್ಯ ಎಸಗಿದ್ದಾನೆ. ಬೆಂಗಳೂರಿನ ಆಡುಗೋಡೆ ಬಳಿಯ ಬಜಾರ್‌ ಸ್ಟ್ರೀಟ್‌ನಲ್ಲಿ ಈ ಘಟನೆ ನಡೆದಿದೆ.

ನೀಲಸಂದ್ರದ ದಯಾನಂದ ಎಂಬಾತನೇ ಈ ಕೃತ್ಯ ಎಸಗಿರುವ ಪಾಪಿ. ಭಾನುವಾರ ರಾತ್ರಿ ಆರೋಪಿ ಕಂಠಪೂರ್ತಿ ಕುಡಿದು ಬಂದಿದ್ದ. ಇದೇ ವೇಳೆ ಪತ್ನಿ ಪ್ರಿಯಾಂಕಾ ಫೋನ್‍ನಲ್ಲಿ ಯಾರೊಂದಿಗೋ ಮಾತನಾಡಿತ್ತಿದ್ದಳು. ಅದಕ್ಕೇ ಗಲಾಟೆ ಶುರು ಮಾಡಿದ ಆತ, ಬೇರೊಬ್ಬನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿದ್ದಾನೆ.

ಇದೇ ವೇಳೆ ಆರೋಪಿ ಪತ್ನಿಯ ತೊಡೆ ಹಾಗೂ ಗುಪ್ತಾಂಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ಆಕೆ ಕಿರುಚಿದ್ದನ್ನು ಕೇಳಿ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಆರೋಪಿ ರೌಡಿಶೀಟರ್‌ ಆಗಿದ್ದು, ಮೂರು ದಿನದ ಹಿಂದಷ್ಟೇ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಎನ್ನಲಾಗಿದೆ. ಇದೀಗ ಆಡುಗೋಡಿ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Share Post