Cinema

ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ

ಮುಂಬೈ; ಕನ್ನಡದಲ್ಲಿ ಸುದೀಪ್‌ ಜೊತೆ ಹೆಜ್ಜೆ ಹಾಕಿದ್ದ ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಅವರು ವಾಸವಿರುವ ಮುಂಬೈನ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಮುಂಬೈನಾ ಬಾಂದ್ರಾದಲ್ಲಿರುವ ಪಾಲಿ ಹಿಲ್‌ ನವ್ರೋಜ್‌ ಹಿಲ್‌ ಸೊಸೈಟಿ ಅಪಾರ್ಟ್‌ಮೆಂಟ್‌ ಕಟ್ಟಡದಲ್ಲಿ ಈ ಘಟನೆ ನಡೆದಿದೆ.

17 ಅಂತಸ್ತಿನ ಕಟ್ಟಡದ 13ನೇ ಅಂತಸ್ತಿನಲ್ಲಿ ಬೆಂಕಿ;

17 ಅಂತಸ್ತಿನ ಕಟ್ಟಡದ 13ನೇ ಅಂತಸ್ತಿನಲ್ಲಿ ಬೆಂಕಿ;  ನವ್ರೋಜ್ ಹಿಲ್ ಸೊಸೈಟಿ ಅಪಾರ್ಟ್​ಮೆಂಟ್​ನಲ್ಲಿ ಸುಮಾರು 17 ಅಂತಸ್ತುಗಳಿವೆ.. ಇದರಲ್ಲಿ 13 ನೇ ಅಂತಸ್ತಿನ ಫ್ಲ್ಯಾಟ್‌ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇಲ್ಲಿನ ಕಿಚನ್‌ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತೀವ್ರ ಆತಂಕ ಸೃಷ್ಟಿ ಮಾಡಿತ್ತು. ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಬೆಂಕಿ ಅವಘಡ ಸಂಭವಿಸಿದ್ದು, ನಾಲ್ಕು ಅಗ್ನಿ ಶಾಮಕ ವಾಹನ, ಮೂರು ಜಂಬೋ ಟ್ಯಾಂಕರ್ಸ್ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಾಕ್ವೆಲಿನ್‌ ಫರ್ನಾಂಡಿಸ್ ವಾಸವಿರುವ ಅಪಾರ್ಟ್‌ಮೆಂಟ್‌;

ಜಾಕ್ವೆಲಿನ್‌ ಫರ್ನಾಂಡಿಸ್ ವಾಸವಿರುವ ಅಪಾರ್ಟ್‌ಮೆಂಟ್‌; ಜಾಕ್ವೆಲಿನ್‌ ಫರ್ನಾಂಡಿಸ್‌ ಬಾಲಿವುಡ್‌ ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಕನ್ನಡ, ತೆಲುಗು ಚಿತ್ರಗಳಲ್ಲೂ ಅವರು ಹೆಜ್ಜೆ ಹಾಕಿದ್ದಾರೆ. ಜೊತೆಗೆ ಸುಕೇಶ್‌ ಚಂದ್ರಶೇಖರ್‌ ಪ್ರಕರಣದಲ್ಲಿ ಅವರು ಕಾನೂನು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ನಡುವೆ ಅವರು ಹಾಲಿವುಡ್‌ಗೂ ಎಂಟ್ರಿ ಕೊಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಾಕ್ವೆಲಿನ್‌ ಫರ್ನಾಂಡಿಸ್‌ ಎಲ್ಲರಿಗೂ ಪರಿಚತ ನಟಿ. ಇವರು ಇದೇ ಅಪಾರ್ಟ್‌ಮೆಂಟ್‌ ನಲ್ಲಿ ವಾಸನಿದ್ದಾರೆ. ಅವರದ್ದು ಐದು ಬಿಎಚ್​ಕೆ ಫ್ಲ್ಯಾಟ್‌ನಲ್ಲಿ ಜಾಕ್ವೆಲಿಕ್‌ ಇದ್ದಾರೆ. 2023ರಲ್ಲಿ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಅವರು ಇಲ್ಲಿ ಫ್ಲ್ಯಾಟ್‌ ಖರೀದಿ ಮಾಡಿದ್ದು, ಇಲ್ಲಿಯೇ ವಾಸವಿದ್ದಾರೆ.

ಈ ಅಪಾರ್ಟ್‌ಮೆಂಟ್‌ನಲ್ಲಿ ಕೋಟಿ ಕುಳಗಳೇ ಇದ್ದಾರೆ;

ಈ ಅಪಾರ್ಟ್‌ಮೆಂಟ್‌ನಲ್ಲಿ ಕೋಟಿ ಕುಳಗಳೇ ಇದ್ದಾರೆ; ಇದು ಶ್ರೀಮಂತರು ಹಾಗೂ ಸೆಲೆಬ್ರಿಟಿಗಳಿಗಾಗಿಯೇ ಕಟ್ಟಿದ ಅಪಾರ್ಟ್‌ಮೆಂಟ್‌ ಸ್ಯೂಟ್ಸ್, ಪೆಂಟ್​ಹೌಸ್, ಸ್ಕೈ ವಿಲ್ಲಾ ಹಾಗೂ ಮ್ಯಾನ್ಶನ್ ರೀತಿಯ ಆಯ್ಕೆಗಳು ಇಲ್ಲಿವೆ. ಇಲ್ಲಿ ಅಕ್ಕಪಕ್ಕದಲ್ಲಿ ಸೈಫ್ ಅಲಿ ಖಾನ್, ಕರೀನಾ ಕಪೂರ್, ರಣಬೀರ್ ಕಪೂರ್, ಆಲಿಯಾ ಭಟ್ ಹಾಗೂ ಇತರರು ವಾಸವಾಗಿದ್ದಾರೆ. ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಮನೆಗಳು ಕೂಡಾ ಹತ್ತಿರದಲ್ಲೇ ಇವೆ. ಹೀಗಾಗಿ, ಈ ಅಪಾರ್ಟ್ಮೆಂಟ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಎಲ್ಲರ ಆತಂಕಕ್ಕೆ ಕಾರಣವಾಗಿತ್ತು. ಆದ್ರೆ ಅಗ್ನಿಶಾಮಕ ಸಿಬ್ಬಂದಿ ಆದಷ್ಟು ಬೇಗ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ.

 

Share Post