CinemaCrime

ರಾತ್ರಿ ಶಾರೂಖ್‌ ಮನೆಯಲ್ಲಿ ಹೈಡ್ರಾಮಾ; ತಡರಾತ್ರಿ ಬಂದ ಆಗಂತುಕರು ಯಾರು..?

ಮುಂಬೈ; ಬಾಲಿವುಡ್‌ ನಟ ಶಾರೂಖ್‌ ಖಾನ್‌ ಮನೆಗೆ ಇಬ್ಬರು ಆಗಂತುಕರು ನುಗ್ಗಿದ್ದು, ರಾತ್ರಿಯಿಡೀ ಮನೆಯಲೊಲೇ ಕುಳಿತಿದ್ದಾರೆ. ಇಬ್ಬರು ಯುವಕರೂ ಶಾರೂಖ್‌ ಅಭಿಮಾನಿಗಳು ಎಂದು ಹೇಳಿಕೊಂಡಿದ್ದು, ನೆಚ್ಚಿನ ನಟನಿಗೆ ಸರ್ಪೈಸ್‌ ನೀಡಲು ಆ ರೀತಿ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಮೇಕಪ್‌ ರೂಂನಲ್ಲಿ ಬಚ್ಚಿಟ್ಟುಕೊಂಡಿದ್ದ ಇಬ್ಬರು ಅಪರಿಚಿತರನ್ನು ನೋಡಿ ಸ್ವತಃ ಶಾರೂಖ್‌ ಅವರೇ ದಂಗಾಗಿದ್ದಾರೆ.

ಮೊನ್ನೆ ಮಧ್ಯರಾತ್ರಿ ಕಾಂಪೌಂಡ್‌ ಹಾರಿರುವ ಇಬ್ಬರು, ಶಾರೂಖ್‌ ಮನೆ ಪ್ರವೇಶಿಸಿದ್ದಾರೆ. ಮಧ್ಯ ರಾತ್ರಿ 3 ಗಂಟೆಯಿಂದ ಬೆಳಗ್ಗೆ 10.30ರವರೆಗೆ ಮೇಕಪ್‌ ರೂಮ್‌ ನಲ್ಲಿ ಅಡಗಿ ಕುಳಿತಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಶಾರೂಖ್‌ ಮನೆಯಲ್ಲಿ ಈ ಘಟನೆ ನಡೆದಿದೆ. ಶಾರೂಖ್‌ ಪೊಲೀಸರಿಗೆ ಮಾಹಿತಿ ನೀಡಿ, ಇಬ್ಬರನ್ನೂ ಪೊಲೀಸರ ವಶಕ್ಕೆ ನೀಡಿದ್ದಾರೆ.

ಇಬ್ಬರೂ ಯುವಕರು ತಾವು ಗುಜರಾತ್‌ ಭರೂಚ್‌ನವರು ಎಂದು ಹೇಳಿಕೊಂಡಿದ್ದು, ಶಾರೂಖ್‌ ಅಭಿಮಾನಿಗಳು ಎಂದು ಹೇಳಿದ್ದಾರೆ. ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Share Post