ಮಕ್ಕಳಲ್ಲಿ ಆಡಿನೋ ವೈರಸ್ ಭೀತಿ; ನ್ಯೂಮೋನಿಯಾಗೆ ತುತ್ತಾಗೋ ಸಾಧ್ಯತೆ!
ಬೆಂಗಳೂರು; ಬೇಸಿಗೆಯಲ್ಲಿ ಕಾಯಿಲೆಗಳು ಜಾಸ್ತಿ. ಹೀಗಾಗೇ ವೈದ್ಯರು ಬೇಸಿಗೆಯಲ್ಲಿ ಹೆಚ್ಚಾಗಿ ಹೊರಗೆ ಓಡಾಡಬೇಡಿ ಎಂದು ಸಲಹೆ ನೀಡುತ್ತಿದ್ದಾರೆ. ಈ ನಡುವೆ ಹಿರಿಯರು, ಮಕ್ಕಳಲ್ಲಿ ವಿಚಿತ್ರ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಅದ್ರಲ್ಲೂ ಮಕ್ಕಳಿಗೆ ಆಡಿನೋ ವೈರಸ್ ವಕ್ಕರಿಸುತ್ತಿದ್ದು ಭೀತಿಯನ್ನುಂಟುಮಾಡಿದೆ.
ರಾಜ್ಯದಲ್ಲಿ ಈಗಾಗಲೇ 70 ಮಕ್ಕಳಲ್ಲಿ ಈ ಆಡಿನೋ ವೈರಸ್ ಪತ್ತೆಯಾಗಿದೆ. ಅದ್ರಲ್ಲೂ ಬೆಂಗಳೂರು ಒಂದರಲ್ಲೇ 14 ಮಕ್ಕಳಲ್ಲಿ ಈ ಸೋಂಕು ಕಾಣಿಸಿದೆಯಂತೆ. ಇದು ಒಬ್ಬರಿಂದ ಒಬ್ಬರಿಗೆ ಹರಡುವುದರಿಂದ ಪೋಷಕರು ಎಚ್ಚರಿಕೆಯಿಂದ ಇರಬೇಕು ಎಂದು ತಜ್ಞರು ಹೇಳುತ್ತಿದ್ದಾರೆ.
ವಿಪರೀತ ಜ್ವರ ಕಾಣಿಸಿಕೊಳ್ಳುವುದು, ಕಣ್ಣು ಪಿಂಕ್ ಕಲರ್‌ಗೆ ತಿರುಗೋದು, ಹೆಚ್ಚು ಹೊಟ್ಟೆನೋವು ಕಾಣಿಸಿಕೊಳ್ಳೋದು, ಶ್ವಾಸಕೋಶಸೋಂಕು ಕಾಣಿಸಿಕೊಳ್ಳುವುದು ಹೀಗೆ ಹಲವು ಲಕ್ಷಣಗಳಿದ್ದರೆ ಅದು ಅಡಿನೋ ವೈರಸ್ ಇರಬಹುದು. ನಿರ್ಲಕ್ಷ್ಯ ಮಾಡಿದರೆ ನ್ಯುಮೋನಿಯಾಗೆ ತುತ್ತಾಗುವ ಅಪಾಯವಿದೆ ಎಂದು ತಜ್ಞರು ಹೇಳುತ್ತಿದ್ದಾರೆ.