ಗಾಜಿಯಾಬಾದ್; ಜನರು ಆರೋಗ್ಯಕ್ಕೆ ಒಳ್ಳೆಯದು ಎಂದು ತಾಜಾ ಹಣ್ಣಿನ ಪಾನೀಯಗಳನ್ನು ಕುಡಿಯುತ್ತಾರೆ.. ಹೊರಗಡೆ ಹೋದಾಗ ಊಟಕ್ಕೆ ಬದಲಾಗಿ ಕೆಲವರು ಅಂಗಡಿಗಳಲ್ಲಿ ಜ್ಯೂಸ್ ಕುಡಿಯುವುದೇ ಹೆಚ್ಚು.. ಆದ್ರೆ ಕೆಲ ಹಣ್ಣಿನ ಜ್ಯೂಸ್ ಅಂಗಡಿಯವರು ಮಾಡವ ಅವಾಂತರ ನೋಡಿದರೆ ಅಸಹ್ಯ ಹುಟ್ಟಿಸುತ್ತದೆ.. ಇಲ್ಲೊಬ್ಬ ಜ್ಯೂಸ್ ಅಂಗಡಿಯಾತ ತಾಜಾ ಹಣ್ಣಿನ ಜ್ಯೂಸ್ ಗೆ ಮೂತ್ರ ಬೆರೆಸಿ ಗ್ರಾಹಕರಿಗೆ ಕೊಡುತ್ತಿದ್ದನಂತೆ.. ಈ ಸಂಬಂಧ ಬಂದ ದೂರಿನ ಹಿನ್ನೆಲೆಯಲ್ಲಿ ಗಾಜಿಯಾಬಾದ್ನಲ್ಲಿ ಜ್ಯೂಸ್ ಅಂಗಡಿ ಮಾಲೀಕ ಹಾಗೂ 15 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ..
ಅಮೀರ್ ಖಾನ್ ಎಂಬ ಜ್ಯೂಸ್ ಅಂಗಡಿ ಮಾಲೀಕನೇ ಬಂಧಿತ ಆರೋಪಿಯಾಗಿದ್ದಾನೆ.. ಈತ ತನ್ನ ತಾಜಾ ಹಣ್ಣಿನ ಜ್ಯೂಸ್ ಅಂಗಡಿಯಲ್ಲಿ ಜ್ಯೂಸ್ನಲ್ಲಿ ಹಳದಿ ಬಣ್ಣದ ದ್ರವವನ್ನು ಮಿಕ್ಸ್ ಮಾಡುವುದನ್ನು ಗ್ರಾಹಕರು ನೋಡಿದ್ದಾರೆ.. ಈ ಬಗ್ಗೆ ಅವರಿಗೆ ಅನುಮಾನ ಬಂದಿದೆ.. ದೊಡ್ಡ ಮಟ್ಟದಲ್ಲಿ ಗ್ರಾಹಕರು ಸೇರಿ ಗ್ರಾಹಕನನ್ನು ಥಳಿಸಿದ್ದಾರೆ.. ಇದೇ ವೇಳೆ ಅಂಗಡಿಯಲ್ಲಿ ಮೂತ್ರದ ಕ್ಯಾನ್ ಪತ್ತೆಯಾಗಿದೆ.. ಗ್ರಾಹಕರು ನೀಡಿರುವ ದೂರಿನ ಪ್ರಕಾರ, ಮನುಷ್ಯರ ಮೂತ್ರವನ್ನು ಕ್ಯಾನ್ನಲ್ಲಿ ಸಂಗ್ರಹ ಮಾಡಿ, ಅದನ್ನು ಜ್ಯೂಸ್ನಲ್ಲಿ ಸ್ವಲ್ಪ ಸ್ವಲ್ಪ ಮಿಕ್ಸ್ ಮಾಡಿ ಗ್ರಾಹಕರಿಗೆ ನೀಡಲಾಗುತ್ತಿತ್ತು ಎಂದು ತಿಳಿದುಬಂದಿದೆ.. ಮಾಲೀಕ ಅಮೀರ್ ಖಾನ್ ಜೊತೆ ಒಬ್ಬ ಬಾಲಕಾರ್ಮಿಕನನ್ನೂ ಬಂಧಿಸಲಾಗಿದೆ..
ನವದೆಹಲಿ; ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿದ್ದಾರೆ. ಇತ್ತೀಚೆಗಷ್ಟೇ ಕೇಜ್ರಿವಾಲ್ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಅಬಕಾರಿ ಹಗರಣದ ಸಂಬಂಧ ಜೈಲು ಸೇರಿದ್ದರೂ ಕೂಡಾ ಅವರು ರಾಜೀನಾಮೆ ನೀಡಿರಲಿಲ್ಲ. ಆದ್ರೆ ಇಂದು ಅವರು ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.. ಎರಡು ದಿನಗಳ ನಂತರ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ.
ದೆಹಲಿಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಆಗ ದೆಹಲಿಯ ಜನರು ತೀರ್ಪು ನೀಡುವರು. ಈಗಾಗಲೇ ನ್ಯಾಯಾಲಯದಿಂದ ನನಗೆ ತೀರ್ಪು ಬಂದಿದೆ. ಈಗ ತೀರ್ಪು ಜನರಿಂದ ಬರಬೇಕಿದೆ.. ಹೀಗಾಗಿ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಜನರ ತೀರ್ಪಿನ ಆಧಾರದ ಮೇಲೆ ನಾನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುತ್ತೇನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿ ಮದ್ಯ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಇಡಿ ಮತ್ತು ಸಿಬಿಐ ಅಧಿಕಾರಿಗಳು ಅರವಿಂದ್ ಕೇಜ್ರಿವಾಲ್ ಅವರನ್ನು ಆರು ತಿಂಗಳ ಹಿಂದೆ ಬಂಧಿಸಿದ್ದರು. ಅಂದಿನಿಂದ ಕೇಜ್ರಿವಾಲ್ ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು.
ವಿಜಯಪುರ; ಕಾಂಗ್ರೆಸ್ ಪಕ್ಷ ಅಂದ್ರೇನೇ ಮುಸ್ಲಿಂ ಪಾರ್ಟಿ. ಕಾಂಗ್ರೆಸ್ ನವರು ಮುಸ್ಲಿಂ ತುಷ್ಟೀಕರಣ ಬಿಟ್ಟರೆ ಬೇರೇನೂ ಮಾಡೋದೇ ಇಲ್ಲ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆದಿದ್ದಾರೆ.. ವಿಜಯಪುರದಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್ ಮುಸ್ಲಿಂ ಪಾರ್ಟಿ ಇದ್ದಂತೆ, ಇದು ನಮ್ಮ ಹಿಂದೂಗಳಿಗೆ ಅರ್ಥವೇ ಆಗುತ್ತಿಲ್ಲ. ಈ ಬಗ್ಗೆ ಅವರು ಜಾಗೃತತರವಾಗದೇ ಜಾತ್ಯತೀತ ಭ್ರಮೆಯಲ್ಲಿ ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ..
ಲೋಕಸಭಾ ಚುನಾವಣೆಯಲ್ಲಿ ಸ್ವಲ್ಪ ಸ್ಥಾನಗಳು ಕಡಿಮೆಯಾಗದ್ದರಿಂದ ಮೋದಿ ಸೊಕ್ಕು ಕಡಿಮೆಯಾಗಿದೆ ಎಂದು ಕೆಲವರು ಹೇಳುತ್ತಾರೆ.. ಆದ್ರೆ ಮೋದಿ ಸೊಕ್ಕು ಕಡಿಮೆಯಾಗಿಲ್ಲ. ಹಿಂದೂಗಳ ಶಕ್ತಿ ಕಡಿಮೆಯಾಗಿದೆ. ಬಿಜೆಪಿಗೆ 350 ಸೀಟು ಕೊಟ್ಟಿದ್ದರೆ ಇವರು ಬಾಯಿಬಿಡುತ್ತಿರಲಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ.. ಜನರು ಫ್ರೀ ಬಸ್, ಫ್ರೀಂ ಅಕ್ಕಿಗೆ ದೇಶವನ್ನು ಬಲಿ ಕೊಡ್ತಿದ್ದಾರೆ.. ಕಾಂಗ್ರೆಸ್ಗೆ ಮತ ನೀಡಿ ಹಿಂದೂಗಳು ತಲೆತಗ್ಗಿಸುವಂತೆ ಮಾಡಿದ್ದಾರೆ ಎಂದೂ ಅವರು ಅಬ್ಬರಿಸಿದ್ದಾರೆ..
ಬೆಂಗಳೂರು; ವಿಧಾನಸೌಧದ ಮುಂದೆ ಏರ್ಪಡಿಸಿದ್ದ ವೇದಿಕೆ ಕಾರ್ಯಕ್ರಮದ ವೇಳೆ ಸಿಎಂ ಸಿದ್ದರಾಮಯ್ಯ ಇದ್ದ ವೇದಿಕೆಗೆ ಯುವಕನೊಬ್ಬ ನುಗ್ಗಿದ್ದಾರೆ.. ವೇದಿಕೆಗೆ ಇದ್ದಕ್ಕಿದ್ದಂತೆ ಯುವಕ ನುಗ್ಗಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.. ಯುವಕ ವೇದಿಕೆ ಮೇಲೆ ಏರುತ್ತಿದ್ದಂತೆ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು, ವೇದಿಕೆಯಿಂದ ಕೆಳಗಿಳಿಸಿದ್ದಾರೆ.
ಭದ್ರತಾಲೋಪದಿಂದಲೇ ಈ ಘಟನೆ ನಡೆದಿದೆ.. ವಿಧಾನಸೌಧದ ಮುಂಭಾಗ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.. ಈ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.. ಸಿಎಂ ವೇದಿಕೆ ಮೇಲಿ ಕುಳಿತಿದ್ದಾಗ ಯುವಕನೋರ್ವ ವೇದಿಕೆ ಮೇಲೇರಿದ್ದಾನೆ.. ಕೈಯಲ್ಲಿದ್ದ ಶಾಲುವನ್ನು ಸಿಎಂ ಸಿದ್ದರಾಮಯ್ಯ ಅವರತ್ತ ಎಸೆದಿದ್ದಾನೆ.
ಕೂಡಲೇ ಎಚ್ಚೆತ್ತುಕೊಂಡು ಭದ್ರತಾ ಸಿಬ್ಬಂದಿ ಆತನನ್ನು ಹಿಡಿಯಲು ಹರಸಾಹಸಪಟ್ಟಿದೆ.. ಕೊನೆಗೆ ಆತನನ್ನು ಉರುಳಾಡಿಸಿ ಹಿಡಿದಿದೆ.. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಲಾಯಿತು.. ಪೊಲೀಸರು ಆತನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ..
Post Views: 37