ದ್ವಿತೀಯ ಪಿಯುಸಿ ಪರೀಕ್ಷೆ; ಮಕ್ಕಳಿಗೆ ಶುಭ ಕೋರಿದ ಶಿಕ್ಷಣ ಸಚಿವ
ತುಮಕೂರು; ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ತಿಪಟೂರಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ್ದರು. ಮಕ್ಕಳಿಗೆ ಶುಭ ಕೋರಿದರು.
ಇದೇ ವೇಳೆ ಮಾತನಾಡಿದ ಸಚಿವ ಬಿ.ಸಿ.ನಾಗೇಶ್, ಈ ಬಾರಿಯೂ ಪರೀಕ್ಷೆ ಸ್ಟುಡೆಂಟ್ ಫ್ರೆಂಡ್ಲಿ ಆಗಿದೆ. ಈಗಲೋ ಕರೋನಾ ಪ್ರಭಾವ ಮಕ್ಕಳ ಮೇಲಿರುವುದರಿಂದ ಅವರಿಗೆ ಕಷ್ಟವಾಗದಂತೆ ಎಂಸಿಕ್ಯೂ ಇಂಟ್ರೊಡ್ಯೂಸ್ ಮಾಡಿದ್ದೇವೆ. ಮಕ್ಕಳು ಟೈಂ ಸಾಕಾಗಲ್ಲ ಎನ್ನುತ್ತಿದ್ದರು. ಆದ್ರೆ ಈ ಬಾರಿ 20 ಬಹು ಆಯ್ಕೆ ಪ್ರಶ್ನೆಗಳು ನೀಡಿರುವುದರಿಂದ ಟೈಮ್ ಮ್ಯಾನೇಜ್ ಮಾಡೋದಕ್ಕೆ ಸಾಧ್ಯವಾಗುತ್ತದೆ. ಜೊತೆಗೆ ವಿದ್ಯಾರ್ಥಿಗಳು ಧೈರ್ಯವಾಗಿ ಪರೀಕ್ಷೆಗಳನ್ನು ಬರೆಯುವುದಕ್ಕೆ ಸಾಧ್ಯವಾಗಿದೆ ಎಂದು ಹೇಳಿದರು.
ಇನ್ನು ಪರೀಕ್ಷೆಗಳು ಪಾರದರ್ಶಕವಾಗಿ ನಡೆಯುತ್ತಿದ್ದು, ಯಾವುದೇ ಅಕ್ರಮಕ್ಕೆ ಆಸ್ಪದ ಇಲ್ಲ ಎಂದು ಅವರು ಹೇಳಿದ್ದಾರೆ.