ಬಾಲಿವುಡ್ ನಟ ಶಾರುಖ್ ಪತ್ನಿ ಗೌರಿ ವಿರುದ್ಧ ಎಫ್‌ಐಆರ್
ಲಖನೌ; ಪ್ಲಾಟ್ ನೀಡುವಲ್ಲಿ ವಂಚನೆ ಮಾಡಿರುವ ಕಾರಣದಿಂದ ರಿಯಲ್ ಎಸ್ಟೇಟ್ ಕಂಪನಿ ಬ್ರಾಂಡ್ ಅಂಬಾಸಿಡರ್ ಆಗಿದ್ದ ನಟ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಉತ್ತರ ಪ್ರದೇಶದ ಲಖನೌನಲ್ಲಿ ಮುಂಬೈ ನಿವಾಸಿ ಜಸ್ವಂತ್ ಶಾ ಎಂಬುವವರು ದೂರು ದಾಖಲಿಸಿದ್ದಾರೆ. ಗೌರಿ ಖಾನ್ ವಿರುದ್ಧ ಐಪಿಸಿ ಸೆಕ್ಷನ್ 409ರ ಅಡಿಯಲ್ಲಿ ಕೇಸ್ ಮಾಡಲಾಗಿದೆ.
ತುಳಸಿಯಾನಿ ಕಟ್ಟಡ ನಿರ್ಮಾಣ ಕಂಪನಿಗೆ ಗೌರಿ ಖಾನ್ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.. ಅದನ್ನು ನೋಡಿಯೇ ನಾನು ಆ ಕಂಪನಿಂದ ಪ್ಲಾಟ್ ಖರೀದಿ ಮಾಡಿದ್ದೆ. ಅದಕ್ಕಾಗಿ 86 ಲಕ್ಷ ರೂಪಾಯಿ ಪಾವತಿ ಮಾಡಿದ್ದೇನೆ. ಆದ್ರೆ ಆ ಕಂಪನಿಯವರು ನಾನು ಆಯ್ಕೆ ಮಾಡಿಕೊಂಡಿದ್ದ ಪ್ಲಾಟ್‌ನನ್ನು ಬೇರೆಯವರಿಗೆ ನೀಡಿದ್ದಾರೆ. ಇದರಿಂದ ನನಗೆ ಮೋಸ ಆಗಿದೆ ಎಂದು ಗ್ರಾಮ ಜಸ್ವಂತ್ ಶಾ ಆರೋಪಿಸಿದ್ದಾರೆ.
ತುಳಸಿಯಾನಿ ಕಂಪನಿ ಎಂಡಿ ಅನಿಲ್ ಕುಮಾರ್, ನಿರ್ದೇಶಕ ಮಹೇಶ್ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ.