BengaluruCrime

ಕೊನೆಗೂ ಪ್ರಜ್ವಲ್ ರೇವಣ್ಣ ಅರೆಸ್ಟ್; SIT ಯಿಂದ ತೀವ್ರ ವಿಚಾರಣೆ

ಬೆಂಗಳೂರು; ಕೊನೆಗೂ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಆರೋಪಿ ಪ್ರಜ್ವಲ್ ರೇವಣ್ಣನ ಬಂಧನವಾಗಿದೆ.. ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಪ್ರಜ್ವಲ್ ರೇವಣ್ಣನನ್ನು ವಶಕ್ಕೆ ಪಡೆಯಲಾಯಿತು.

  ಜರ್ಮನಿಯಿಂದ ಪ್ರಜ್ವಲ್ ತಡರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ. ಲುಫ್ತಾನ್ಸಾ ಏರ್​ಲೈನ್ಸ್​ನ LH764 ವಿಮಾನದಲ್ಲಿ ತಡರಾತ್ರಿ 12.46ಕ್ಕೆ ಮ್ಯೂನಿಕ್‌ನಿಂದ ಬೆಂಗಳೂರಿನ ಕೆಂಪೇಗೌಡ ಏರ್​ಪೋರ್ಟ್​ಗೆ ಬಂದಿಳಿದ. ಇನ್ನು ಪ್ರಜ್ವಲ್​ ಇದ್ದ ವಿಮಾನ ಲ್ಯಾಂಡ್​ ಆಗುತ್ತಿದ್ದಂತೆ ನೇರವಾಗಿ ವಿಮಾನದ ಬಳಿ ತೆರಳಿದ ಸಿಐಎಸ್​ಎಫ್​ ಅಧಿಕಾರಿಗಳು ಪ್ರಜ್ವಲ್​ ರೇವಣ್ಣನನ್ನು ವಶಕ್ಕೆ ಪಡೆದು ಎಮಿಗ್ರೇಷನ್​ ಬಳಿಗೆ ಕರೆತಂದರು. ಬ್ರೌನ್​ ಕಲರ್​ ನೈಟ್​ ಪ್ಯಾಂಟ್​, ಗ್ರೇ ಕಲರ್​ ಫುಲ್​ಓವರ್​ ಧರಿಸಿದ್ದ ಪ್ರಜ್ವಲ್, ಯಾವುದೇ ಪಶ್ಚಾತಾಪವಿಲ್ಲದೇ ಆರಾಮಾಗಿ ನಡೆದುಕೊಂಡು ಬಂದಿದ್ದಾನೆ.

ಏರ್​ಪೋರ್ಟ್​ನಲ್ಲಿ ಪ್ರಜ್ವಲ್​ನನ್ನು ವಶಕ್ಕೆ ಪಡೆದ ಎಸ್​ಐಟಿ ಅಧಿಕಾರಿಗಳು, ನೇರವಾಗಿ ಎಸ್​ಐಟಿ ಕಚೇರಿಗೆ ಕರೆದುಕೊಂಡು ಬಂದರು. ಬಳಿಕ ಎಸ್​ಐಟಿ ಕಚೇರಿಯಲ್ಲಿ ಪ್ರಾಥಮಿಕ ತನಿಖೆಯನ್ನು ನಡೆಸಿ, ಎಸ್​ಐಟಿ ಅಧಿಕಾರಿಗಳು ಪ್ರಜ್ವಲ್​ ರೇವಣ್ಣರನ್ನು ಅಧಿಕೃತವಾಗಿ ಬಂಧನ ಮಾಡಿದರು..

Share Post