National

ಬಾಲ್ಯ ವಿವಾಹ ಧಿಕ್ಕರಿಸಿದ್ದ ವಿದ್ಯಾರ್ಥಿನಿ ಈಗ ದೇಶಕ್ಕೇ ಟಾಪ್‌!

ಹತ್ತನೇ ತರಗತಿ ನಂತರ ಬಾಲ್ಯ ವಿವಾಹ ಮಾಡಲು ಮುಂದಾಗಿದ್ದ ಪೋಷಕರ ತೀರ್ಮಾನವನ್ನು ಧಿಕ್ಕರಿಸಿದ್ದ ವಿದ್ಯಾರ್ಥಿನಿಯೊಬ್ಬಳು ಈಗ ದೇಶಕ್ಕೇ ಟಾಪ್‌ ಬಂದಿದ್ದಾಳೆ.  ಆಂಧ್ರಪ್ರದೇಶದ ವಿದ್ಯಾರ್ಥಿಯೊಬ್ಬಳು ಚೆನ್ನಾಗಿ ಓದುತ್ತಿದ್ದರೂ, ಮನೆಯವರು ಬಾಲ್ಯ ವಿವಾಹ ಮಾಡಲು ಮುಂದಾಗಿದ್ದರು.. ಆದ್ರೆ ಆಕೆ ಇದನ್ನು ಧಿಕ್ಕರಿಸಿ ನಾನಯ ಐಪಿಎಸ್‌ ಅಧಿಕಾರಿಯಾಗುತ್ತೇನೆ ಎಂದು ಹೇಳಿದ್ದಳು.. ಇದರಿಂದ ದಿನವೂ ಮನೆಯವರಿಂದ ಟೀಕೆ ಎದುರಿಸುತ್ತಿದ್ದ ವಿದ್ಯಾರ್ಥಿನಿ, ಇದರ ನಡುವೆಯೂ ಪ್ರಥಮ ವರ್ಷದ ಇಂಟರ್​​​ಮೀಡಿಯೇಟ್​​​​​ ಬೋರ್ಡ್​​​​​ ಪರೀಕ್ಷೆಯಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆದಿದ್ದಾಳೆ.

ದೇಶಕ್ಕೇ ಮೊದಲ ಸ್ಥಾನ ಪಡೆದ ನಿರ್ಮಲಾ;

ನಿರ್ಮಲಾ ಎಂಬ ವಿದ್ಯಾರ್ಥಿನಿಯೇ ದೇಶಕ್ಕೆ ಮೊದಲ ಸ್ಥಾನ ಬಂದಾಕೆ. ಈಕೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಅದೋನಿ ಮಂಡಲದ ಪೆದ್ದಹರಿವನಂ ಗ್ರಾಮದವಳು.. ಈಕೆ ಹತ್ತನೇ ತರಗತಿಯಲ್ಲಿ 537 ಅಂಕ ಪಡೆದು ಡಿಸ್ಟಿಂಕ್ಷನ್‌ ಪಡೆದಿದ್ದಳು. ಆದ್ರೆ ಶ್ರೀನಿವಾಸ್ ಮತ್ತು ಹನುಮಂತಮ್ಮ ದಂಪತಿಗೆ ನಾಲ್ವರು ಹೆಣ್ಣು ಮಕ್ಕಳಿದ್ದು, ನಿರ್ಮಲಾ ಕೊನೆಯವಳಾಗಿದ್ದಾಳೆ. ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದ ಕಾರಣ, ಆಕೆಗೆ ಬಾಲ್ಯದಲ್ಲೇ ಮದುವೆ ಮಾಡಿ ಕಳುಹಿಸುವ ನಿರ್ಧಾರ ತೆಗೆದುಕೊಂಡಿದ್ದರು.. ಆದ್ರೆ ಇದಕ್ಕೆ ಒಪ್ಪದ ನಿರ್ಮಲಾ, ಓದು ಮುಂದುವರೆಸಿ ದೇಶಕ್ಕೇ ಕೀರ್ತಿ ತಂದಿದ್ದಾಳೆ.

ನಿರ್ಮಲಾ ಶಿಕ್ಷಣಕ್ಕೆ ನೆರವು ನೀಡಿದ ಶಾಸಕ;

ಇನ್ನು ನಿರ್ಮಲಾ ದೇಶಕ್ಕೇ ಟಾಪ್‌ ಬರುತ್ತಿದ್ದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಈಕೆಯ ಮನೆಗೆ ಬರುತ್ತಿದ್ದಾರೆ.. ಇನ್ನು ಆದೋನಿ ಶಾಸಕ ಸಾಯಿಪ್ರಸಾದ್ ರೆಡ್ಡಿಯವರನ್ನು ನಿರ್ಮಲಾ ಈ ಹಿಂದೆ ಭೇಟಿಯಾಗಿ ನೆರವು ಕೋರಿದ್ದಳು.. ಇದಕ್ಕೆ ಸ್ಪಂದಿಸಿದ ಶಾಸಕರು, ಅಧಿಕಾರಿಗಳಿಗೆ ಹೇಳಿ ಎಲ್ಲಾ ರೀತಿಯ ನೆರವು ಕೊಡಿಸಿದ್ದರು.. ಇದರ ಅನುಕೂಲದಿಂದ ನಿರ್ಮಲಾ ಆಂಧ್ರಪ್ರದೇಶಕ್ಕೆ ಕೀರ್ತಿ ತಂದಿದ್ದಾಳೆ.. ಇದೀಗ ನಿರ್ಮಲಾ ಸಾಧನೆ ನೋಡಿ, ಪೋಷಕರಿಗೂ ತಮ್ಮ ತಪ್ಪಿನ ಅರಿವಾಗಿದೆ..

 

Share Post