ತಂದೆಯಿಂದಲೇ ಕೊಲೆ ಬೆದರಿಕೆ; ಖ್ಯಾತ ನಟಿ ಅರ್ಥನಾ ಬಿನು ಆರೋಪ
ಕೇರಳ; ನನ್ನ ಸ್ವಂತ ತಂದೆಯೇ ನನಗೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಮಲಯಾಳಂನ ಖ್ಯಾತ ನಟಿ ಅರ್ಥನಾ ಬಿನು ಆರೋಪ ಮಾಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ವಿಡಿಯೋ ಒಂದನ್ನು ಕೂಡಾ ನಟಿ ಹಂಚಿಕೊಂಡಿದ್ದಾರೆ. ಅರ್ಥನಾ ಬಿನು ಅವರ ತಂದೆಯೂ ಮಳಯಾಳಂ ನಟರಾಗಿದ್ದಾರೆ. ಅವರ ಹೆಸರು ವಿಜಯ್ ಕುಮಾರ್.
ನಟ ವಿಜಯ್ ಕುಮಾರ್ ಅವರು ಪತ್ನಿಯಿಂದ ಡಿವೋರ್ಸ್ ಪಡೆದಿದ್ದಾರೆ. ಹೀಗಾಗಿ ನಟಿ ಅರ್ಥನಾ ನಿಬು ಹಾಗೂ ತಾಯಿ ಅಜ್ಜಿಯ ಮನೆಯಲ್ಲಿದ್ದಾರೆ. ಹೀಗಿದ್ದರೂ ನನ್ನ ತಂದೆ, ನಮ್ಮ ಮನೆಗೆ ಬಂದು ಕಿರುಕುಳ ಕೊಡುತ್ತಿದ್ದಾರೆ. ಮನೆಯ ಕಾಂಪೌಂಡ್ ಹಾರಿ ಅನಧಿಕೃತವಾಗಿ ಮನೆಗೆ ಪ್ರವೇಶ ಮಾಡುತ್ತಿದ್ದಾರೆ. ಸಿನಿಮಾಗಳಲ್ಲಿ ಮುಂದುವರೆದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಅರ್ಥನಾ ಬಿನು ಆರೋಪಿಸಿದ್ದಾರೆ.
ನಾನು ಈಗ ನಟನೆ ಮಾಡುತ್ತಿರುವ ಚಿತ್ರತಂಡದ ವಿರುದ್ಧವೂ ನಿಂದನೆ ಮಾಡಿದ್ದಾರೆ ಎಂದು ಅರ್ಥನಾ ಆರೋಪಿಸಿದ್ದಾರೆ.